ಕಾಸರಗೋಡು: ಜಿಲ್ಲೆಯ ವಿವಿಧೆಡೆ ಡೆಂಗೆಜ್ವರ ತಲೆದೋರಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಿದೆ.
ಇದರ ಅಂಗವಾಗಿ ಶಿಬಿರಗಳು, ಡೆಂಗೆ ಹರತಾಳ, ಶುಚೀಕರಣ ಸಹಿತ ವಿವಿಧ ಚಟುವಟಿಕೆಗಳು ಸ್ಥಳೀಯಾಡಳಿತೆ ಸಂಸ್ಥೆಗಳ ನೇತೃತ್ವದಲ್ಲಿ ಇಲಾಖೆ ನಡೆಸುತ್ತಿದೆ. ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ಜಿಲ್ಲೆಯ ವಿವಿಧೆಡೆ ಸೊಳ್ಳೆ ನಾಶ, ಸಂತಾನೋತ್ಪತ್ತಿ ಕೇಂದ್ರಗಳ ನಾಶ ನಡೆಸಿದೆ. ಕಾಸರಗೋಡು, ಕಾಞಂಗಾಡ್, ನೀಲೇಶ್ವರ ನಗರಸಭೆ ಪ್ರದೇಶಗಳಲ್ಲಿ ಗಂಭೀರ ಸಮಸ್ಯೆಗಳಿವೆ ಎಂದು ಯೂನಿಟ್ ಮುನ್ನೆಚ್ಚರಿಕೆ ನೀಡಿದೆ. ಮನೆಗಳ ಆಸುಪಾಸಿನಲ್ಲಿ, ತೋಟಗಳಲ್ಲಿ ಸಹಿತ ನೀರು ಕಟ್ಟಿನಿಲ್ಲುವ ಸಾಧ್ಯತೆಗಳಿದ್ದು, ತೆರವುಗೊಳಿಸಬೇಕು. ಆ ಬಗ್ಗೆ ಜಾಗರೂಕತೆ ಬೇಕು ಎಂದು ಆರೋಗ್ಯ ಪರಿಣತರು ತಿಳಿಸಿದರು.