ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮೇ 4 ರಂದು ರಾತ್ರಿ ಸುರಿದ ಗಾಳಿ, ಗುಡುಗು ಸಹಿತ ಮಳೆಗೆ ವ್ಯಾಪಕ ನಾಶನಷ್ಟ ಸಂಭವಿಸಿದೆ. ಮಡಿಕೈ ಪುದಿಯ ಕಂಡತ್ತಿಲ್ ಗಾಳಿ ಮಳೆಗೆ ಸಾವಿರಾರು ಬಾಳೆ, ಕಂಗು, ತೆಂಗು ನೆಲಕಚ್ಚಿದೆ. ಮಾವುಂಗಾಲ್, ಅರಯಿ, ಕುಳಿಯಂಗಾಲ್, ಅಲಾಮಿಪಳ್ಳಿ, ಕೋಯಮ್ಮಲ್, ವಿಷ್ಣುಮಂಗಲಂ, ಮಾಣಿಕೋತ್, ಅದಿಂಞõÁಲ್, ಬೇಕಲ ಮೊದಲಾದೆಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು, ಕಟ್ಟಡದ ಮೇಲ್ಛಾವಣಿ ಧರೆಗುರುಳಿದೆ. ಮಡಿಕೈ ಕಣಿಯಿಲ್ ಪದ್ಮನಾಭ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಗೀಡಾಗಿದೆ.
ಅದಿಂಞõÁಲ್‍ನಲ್ಲಿ ವಿದ್ಯುತ್ ಕಂಬ ಉರುಳಿ ಬೀಳುತ್ತಿದ್ದಾಗ ಬೇಕಲದಲ್ಲಿ ಡ್ಯೂಟಿ ಕಳೆದು ಕಾಂಞಂಗಾಡ್‍ಗೆ ತೆರಳುತ್ತಿದ್ದ ರಂಜಿತ್ ಮತ್ತು ಅಜಯನ್ ಎಂಬೀ ಪೆÇಲೀಸರು ಅದೃಷ್ಟವಶಾತ್ ಅಪಾಯದಿಂದ ಪಾರಾದರು. ಇವರ ಹೆಲ್ಮೆಟ್‍ಗೆ ವಿದ್ಯುತ್ ತಂತಿ ಬಡಿದರೂ ಅಪಾಯದಿಂದ ಪಾರಾದರು. ಬೇಕಲದಲ್ಲಿ ಲಾರಿ ಅಪಘಾತದಿಂದ ಲಾರಿಯಲ್ಲಿ ಸಿಲುಕಿಕೊಂಡ ಚಾಲಕನನ್ನು ಕಾಂಞಂಗಾಡ್‍ನ ಅಗ್ನಿಶಾಮಕ ದಳ ರಕ್ಷಿಸಿತು. ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ವಿದ್ಯುತ್ ಸರಬರಾಜು ಮೊಟಕುಗೊಂಡಿತು.
ಚೆಮ್ಮಟಂವಯಲ್ ಕಾಲಿಚ್ಚಾನಡ್ಕಂ ರಸ್ತೆಯಲ್ಲಿ ನಾದಪುರಂ ಕುನ್ನಿಲ್‍ನಲ್ಲಿ ಎಚ್.ಟಿ. ಲೈನ್ ಕಡಿದು ಬಿದ್ದು ಸಾರಿಗೆ ಮೊಟಕುಗೊಂಡಿತು.
ಮೈಲಾಟಿ - ಕಾಂಞಂಗಾಡ್ 110 ಕೆ.ವಿ. ಲೈನ್ ಹಾನಿಗೀಡಾಗಿದ್ದು, ವಿವಿಧೆಡೆ ವಿದ್ಯುತ್ ಮೊಟಕುಗೊಂಡಿತು. ತಳಂಗರೆಯಲ್ಲಿ ತೆಂಗು ಉರುಳಿ ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಮೊಟಕುಗೊಂಡಿತು. ಕಾಸರಗೋಡು ಸಮುದ್ರ ಕಿನಾರೆಯಲ್ಲಿ ಹಲವು ಮನೆಗಳು ಹಾನಿಗೀಡಾಯಿತು. ಕಾಸರಗೋಡು ಕಡಪುರದಲ್ಲಿ ಮರು ಬಿದ್ದು ಶಿವ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯುತ್ ಕಂಬ ಹಾಗು ಮರ ಬಿದ್ದು ಕಾಸರಗೋಡು ಕಡಪ್ಪುರದ ಗಂಗಾನಗರದ ಕೊಗ್ಗು ಮತ್ತು ರಾಜೀವನ್ ಅವರ ಮನೆಗಳು ಹಾನಿಗೀಡಾಗಿದೆ. ಲೈಟ್ ಹೌಸ್ ಪರಿಸರದಲ್ಲಿ ಮರ ಉರುಳಿ ಬಿದ್ದು ಮನೆಗೆ ಹಾನಿಯಾಗಿದೆ.