ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರೋಗಾಣು ನಾಶಕ ಕಾರ್ಯಗಳಿಗೆ ಬಳಸುವ ನಿಟ್ಟಿನಲ್ಲಿ 3520ಲೀಟರ್ ಸೋಡಿಯಂ ಹೈಪೆÇೀ ಕ್ಲಾರೈಡ್ ಮಿಶ್ರಣ ದ್ರಾವಣ ಮತ್ತು ಒಂದು ಸಾವಿರ ಪಿ.ಪಿ.ಇ.ಕಿಟ್ ಗಳು ಕಾಸರಗೋಡು ಜಿಲ್ಲೆಗೆಕೊಡುಗೆಯಾಗಿ ಲಭಿಸಿದೆ.
ಮುಂಬಯಿ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಗಾರ್ಧಾ ಕೆಮಿಕಲ್ಸ್ ಸಂಸ್ಥೆ ವತಿಯಿಂದ ಸುಮಾರು20 ಲಕ್ಷ ರೂ. ಮೌಲ್ಯದ ಈ ದ್ರಾವಣವನ್ನು ದೇಣಿಗೆ ರಪದಲ್ಲಿ ನೀಡಲಾಗಿದೆ. ಸಂಸ್ಥೆಯ ಪ್ರಧಾನ ಪ್ರಬಂಧಕ , ತಲಶ್ಶೇರಿ ಕದಿರೂರು ನಿವಾಸಿ ಸತೀಶ್ ನಂಬ್ಯಾರ್ ಅವರು ಈ ಕೊಡುಗೆಗೆ ನೇತೃತ್ವ ವಹಿಸಿದವರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಬಗ್ಗೆ ಖಾತ್ರಿ ಒದಗಿಸಿದ್ದರು. ನಂತರ ಗುಜರಾತ್ನಿಂದ 2 ವಿಶೇಷ ಲಾರಿಗಳಲ್ಲಿ176 ಕ್ಯಾನ್ ಗಳಲ್ಲಿ ಇರಿಸಲಾದ ದ್ರಾವಣ ಮತ್ತು ಪಿ.ಪಿ.ಇ.ಕಿಟ್ ಗಳನ್ನು ತಲಪಿಸಲಾಗಿದೆ.
ಪಿ.ಪಿ.ಇ. ಕಿಟ್ ಕೊಡುಗೆ:
ಮೋಟಾರು ವಾಹನ ಇಲಾಖೆ ವತಿಯಿಂದ ಕೊಚ್ಚಿಯ ಪಿನಕ್ಕಿಲ್ ಗ್ರೂಪ್ ಸಹಕಾರದೊಂದಿಗೆ ಕಾಸರಗೋಡು ಜಿಲ್ಲೆಯ ಆರೋಗ್ಯ ಕಾರ್ಯರ್ತರಿಗಾಗಿ ಒಂದು ಸಾವಿರ ಪರ್ಸನಲ್ ಪೆÇ್ರಟೆಕ್ಟಿ ವ್ (ಪಿ.ಪಿ.ಇ.)ಕಿಟ್ ವಿತರಿಸಲಾಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಅವರು ರಸ್ತೆ ಸಾರಿಗೆ ಅಧಿಕಾರಿ ಎಸ್.ಮನೋಜ್ ಅವರಿಂದ ಕಿಟ್ಗಳನ್ನು ಪಡೆದುಕೊಂಡರು. ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್, ಎಂ.ವಿ.ಎ.ಗಳಾದ ಜೇಮ್ಸ್ ಕೆ.ಜೆ.,ಪಿ.ವಿ.ರತೀಶ್, ಟಿ.ವೈಕುಂಠನ್, ಎ.ಎಂ.ವಿ.ಗಳಾದ ಸಜಿತ್ ಕೆ.ಎ., ಪ್ರಭಾಕರನ್ ಎಂ.ವಿ., ಅರುಣ್ ರಾಜ್ ಎ., ಸುಧೀಷ್ಎಂ. ಜೊತೆಗಿದ್ದರು.