ಕಾಸರಗೋಡು: ಲಾಕ್ ಡೌನ್ ಆದೇಶ ಜಾರಿಯ ಕಾರಣ ಇತರ ರಾಜ್ಯಗಳಲ್ಲಿ ಬಾಕಿಯಾಗಿದ್ದ ಕಾಸರಗೋಡು ಜಿಲ್ಲೆಯ ನಿವಾಸಿಗಳಲ್ಲಿ 10346 ಮಂದಿ ಊರಿಗೆ ಮರಳಿದ್ದಾರೆ. ಈ ಸಂಬಂಧ ಪಾಸ್ ಗಾಗಿ 20543 ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 19072 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಪಾಸ್ ಪಡೆದವರಲ್ಲಿ 10346 ಮಂದಿ ಗಡಿ ದಾಟಿ ಕಾಸರಗೋಡು ಜಿಲ್ಲೆಗೆ ಆಗಮಿಸಿದ್ದಾರೆ.
ಜಿಲ್ಲೆಯ 15 ಗಡಿ ಚೆಕ್ ಪೆÇೀಸ್ಟ್ ಗಳ ಮೂಲಕ ಇತರ ರಾಜ್ಯಗಳಿಂದ ಕೇರಳೀಯರು ಊರಿಗೆ ಮರಳುತ್ತಿದ್ದಾರೆ. ಇವರಲ್ಲಿ ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಈ ವರೆಗೆ 34225 ಮಂದಿ ಮರಳಿದ್ದಾರೆ. ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಊರಿಗೆ ಮರಳಲು ಈ ವರೆಗೆ ಒಟ್ಟು 68196 ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 59925 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ.