HEALTH TIPS

ಪುನರುಜ್ಜೀವನದ ಮೆಟ್ಟಲೇರುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರು: ಪುನಶ್ಚೇತನಕ್ಕಾಗಿ ರಾಜ್ಯ ಸರಕಾರ ವೆಚ್ಚಮಾಡಿದ್ದು 109.89 ಕೋಟಿ ರೂ.


        ಕಾಸರಗೋಡು:  ಎಂಡೋಸಲ್ಫಾನ್ ಎಂಬ ಮಾರಕ ವಿಷದ ಪರಿಣಾಮ ದುರಿತ ಅನುಭವಿಸಿರುವ ಸಂತ್ರಸ್ತರು ಹಂತಹಂತವಾಗಿ ಪುನರುಜೀವನದ ಮೆಟ್ಟಲೇರುತ್ತಿದ್ದಾರೆ. ಇವರ ಪುನಶ್ಚೇತನಕ್ಕಾಗಿ ರಾಜ್ಯ ಸರಕಾರ ಇವರಿಗಗಿ ವೆಚ್ಚಮಾಡಿದ್ದು 109.89 ಕೋಟಿ ರೂ.
        ಗೇರುತೋಟಗಳಿಗೆ ಸತತವಾಗಿ ಗಗನ ಮಾರ್ಗದಲ್ಲಿ ಸಿಂಪಡಿಸಿದ ಕೀಟನಾಶಕವೊಂದು ನಿರೀಕ್ಷೆಗೂ ಮೀರಿ ನೀಡಿದ ಅಡ್ಡಪರಿಣಾಮದ ಫಲವಾಗಿ ಜಿಲ್ಲೆಯ ಕೆಲವೆಡೆಯ ಜನತೆ ಅನುಭವಿಸಿದ ನಾನಾ ವಿದದ ಯಾತನೆ ಅವರ್ಣನೀಯವಾದುದು. ಎಂಡೋಸಲ್ಫಾನ್ ಕೀಟನಾಶಕದ ದುಷ್ಪರಿಣಾಮ ಕೆಲವರು ಜೀವ ಕಳಕೊಂಡರೆ, ಅನೇಕ ಮಂದಿ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ದುರಿತದ ಸರಮಾಲೆಯ ನಡುವೆಯೂ ರಾಜ್ಯ ಸರಕಾರ ಸದಾ ಅನುಕಂಪಪೂರ್ಣವಾಗಿ ಸಂತ್ರಸ್ತರೊಂದಿಗೆ ವ್ಯವಹರಿಸಿರುವುದು ಇವರಿಗೆ ಸಮಾಧಾನ ತರುವ ವಿಚಾರ. ಕಳೆದ 4 ವರ್ಷಗಳಲ್ಲಿ ರಾಜ್ಯ ಸರಕಾರ ಸಂತ್ರಸ್ತರಿಗಾಗಿ 109,89,58,487 ರೂ. ವೆಚ್ಚಮಾಡಿದೆ. ಈ ಅವಧಿಯಲ್ಲಿ ನಷ್ಟ ಪರಿಹಾರ ರೂಪದಲ್ಲಿ 53.47 ಕೋಟಿ ರೂ., ಇವರ ಬ್ಯಾಂಕ್ ಸಾಲ ಮನ್ನಾ ಕ್ಕಾಗಿ 5.34 ಕೋಟಿ ರೂ., ಪ್ರತಿ ತಿಂಗ ಪಿಂಚಣಿ ರೂಪದಲ್ಲಿ 33.87 ಕೋಟಿ ರೂ. ವೆಚ್ಚಮಾಡಿದೆ. ಎನ್.ಎಚ್.ಎಂ. ಚಿಕಿತ್ಸಾ ಸಹಾಯಕ್ಕಾಗ ರಾಜ್ಯ ನಿಧಿಯಿಂದ 5.89 ಕೋಟಿ ರೂ., ಕೇಂದ್ರ ನಿಧಿಯಿಂದ 9.64 ಕೋಟಿ ರೂ. ಹಸ್ತಾಂತರಿಸಲಾಗಿದೆ. ಸಂತ್ರಸ್ತರ ಕುಟುಂಬ ಮಕ್ಕಳೀಗೆ ಪ್ರತ್ಯೇಕ ಶಿಕ್ಷಣ ಸಹಾಯ, ಸಂತ್ರಸ್ತರ ಪರಿಚರಣೆ ನಡೆಸುವವರಿಗಾಗಿ ಆರ್ಥಿಕ ಸಹಾಯವನ್ನೂ ಒದಗಿಸಲಾಗಿದೆ. ಇದಲ್ಲದೆ ಸಂತ್ರಸ್ತರಿಗೆ ಉಚಿತ ಪಡಿತರ ಸಾಮಾಗ್ರಿ, ಚಿಕಿತ್ಸೆಗೆ ವಾಹನ ಸೌಲಭ್ಯ, ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ಇತ್ಯಾದಿಗಳನ್ನೂ ಒದಗಿಸಲಾಗಿದೆ.
                 ಸಾಮಾಜಿಕ ಅಭಿವೃದ್ಧಿಗೆ ಸಮಗ್ರ ಯೋಜನೆಗಳು:
     ಸಂತ್ರಸ್ತರಿಗೆ ಕೇವಳ ಆರ್ಥಕ ಸಹಾಯ ಒದಗಿಸುವುದಕ್ಕಿಂತ ಸಾಮಾಜಿಕವಾಗಿ ಅಭಿವೃದ್ಧಿ ಒದಗಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆಗಳನ್ನು ರಚಿಸಿ ರಾಜ್ಯ ಸರಕಾರ ಜಾರಿಗೊಳಿಸುತ್ತಿದೆ. ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಪ್ರತ್ಯೇಕ ಪರಿಶೀಲನೆ ಅಗತ್ಯವಿರುವ ಮಕ್ಕಳಿಗೆ ಬಡ್ಸ್ ಶಾಲೆಗಳನ್ನು ಸ್ಥಾಪಿಸಲಾಗಿದೆ. ಸಂತ್ರಸ್ತರಗೆ ಸಮಾಜ ಸುರಕ್ಷಾ ಮಿಷನ್ ಮುಖಾಂತರ ಪ್ರತಿತಿಂಗಳ ಪಿಂಚಣಿ, ರೋಗಿಗಳ ಪರಿಚರಣೆ ನಡೆಸುವವರಿಗಾಗಿ ಸ್ಪಷ್ಯಲ್ ಆಶ್ವಾಸ ಕಿರಣ್ ಸಹಾಯ ಒದಗಿಸಲಾಗುತ್ತಿದೆ. ವಿವಿಧ ಕೇಂದ್ರಗಳಲ್ಲಿ ಸ್ಪೆಷ್ಯಲಿಸ್ಟ್ ಚಿಕಿತ್ಸೆ ಒದಗಿಸಲಾಗುತ್ತಿದೆ. ಪರಿಣತ ಚಿಕಿತ್ಸೆ ಗಾಗಿ ಕೇರಳದಲ್ಲಿ, ಕರ್ನಾಟಕದ ಆಯ್ದ 17 ಆಸ್ಪತ್ರೆಗಳಲ್ಲಿ ವ್ಯವಸ್ಥೇ ಏರ್ಪಡಿಸಲಾಗಿದೆ. ಹಾಸುಗೆ ಹಿಡಿದಿರುವ ರೋಗಿಗಳನ್ನು ಮನೆಗಳಿಂದ ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಮರಳಿ ಕರೆತರಲು ವಾಹನ ಸೌಲಭ್ಯ ಒದಗಿಸಲಾಗಿದೆ. ಪಾಲಿಯೇಟಿವ್ ಕೇರ್ ಯೋಜನೆಯಲ್ಲೂ, ಎಂಡೋಸಲ್ಫಾನ್ ಯೋಜನೆಯಲ್ಲೂ ಫಿಸಿಯೋಥೆರಪಿಸ್ಟ್ ಗಳ ಸೇವೆ ಲಭ್ಯವಿದೆ. ಖಾಸಗಿ ಸಂಸ್ಥೆ ಗಳ ಸಹಾಯದೊಂದಿಗೆ ವಿವಿಧೆಡೆ ಸಂತ್ರಸ್ತರಿಗೆ ಮನೆ ನಿರ್ಮಿಸಿ ನೀಡಲಾಗಿದೆ. ಈ ನಡುವೆ ರಾಜ್ಯ ಸರಕಾರದ ಸಾಫಲ್ಯ ಯೋಜನೆಯ ಮೂಲಕ 42 ಮಂದಿಗೆ ಜಿಲ್ಲೆಯಲ್ಲಿ ಮನೆ ಲಭಿಸಿದೆ. ಪೆರಿಯ ಮತ್ತು ವೆಳ್ಳರಿಕುಂಡ್ ಪ್ರದೇಶಗಳಲ್ಲಿ ಈ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಅರ್ಜಿ ಕೋರಿಕೆ ಮೂಲಕ ನಡೆದುಬರುತ್ತಿದೆ. ಕೆನರಾ ಬ್ಯಾಂಕ್ ನ ವಸತಿ ನಿರ್ಮಾಣ ಯೋಜನೆಪ್ರಕಾರದ ಮನೆಗಳನ್ನೂ ಒದಗಿಸಲಾಗಿದೆ.
                ಸಂತ್ರಸ್ತರ ಪಟ್ಟಿಗೆ ಹೆಚ್ಚುವರಿ ಮಂದಿ ಸೇರ್ಪಡೆ:
    ಅರ್ಹರಾದ ಎಲ್ಲ ಸಂತ್ರಸ್ತರನ್ನೂ ಎಂಡೋಸಲ್ಫಾನ್ ಪೀಡಿತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಕ್ರಮ ಕಳೆದ 4 ವರ್ಷಗಳಲ್ಲಿ ನಡೆದಿದೆ. 2017ರಲ್ಲಿ, 2019ರಲ್ಲಿ ಈ ಸಂಬಂಧ ಜಿಲ್ಲೆಯಲ್ಲಿ ಸ್ಪೆಷ್ಯಲಿಸ್ಟ್ ಮೆಡಿಕಲ್ ಕ್ಯಾಂಪ್ ನಡೆಸಲಾಗಿದೆ. ಈ ಮೂಲಕ 879 ಮಂದಿಯನ್ನು ನೂತನವಾಗಿ ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
                 ಒಟ್ಟು ವೆಚ್ಚ 283 ಕೋಟಿ ರೂ.ಗೂ ಅಧಿಕ:
     ಸಂಕಷ್ಟದ ಮಹಾಕೂಪದಲ್ಲಿ ಬಳಲುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರ ಕಣ್ಣೀರೊರೆಸಿ ಅವರ ಪುನಶ್ಚೇತನಕ್ಕೆ ಕಳೆದ ಫೆಬ್ರವರಿ ತಿಂಗಳ ವರೆಗೆ ರಾಜ್ಯ ಸರಕಾರ 201.36 ಕೋಟಿ ರೂ. ವೆಚ್ಚ ಮಾಡಿದೆ. ಆರ್ಥಿಕ ಸಹಾಯ ರೂಪದಲ್ಲಿ 171.10 ಕೋಟಿ ರೂ., ಚಿಕಿತ್ಸೆಗಾಗಿ 15.03 ಕೋಟಿ ರೂ., 2019-20 ನವೆಂಬರ್ ವರೆಗೆ ಪಿಂಚಣಿ, ಆಶ್ವಾಸಕಿರಣ ಯೋಜನೆ, ವಿದ್ಯಾರ್ಥಿ ವೇತನ ಸೇರಿ 88.39 ಕೋಟಿ ರೂ., ಸಾಲ ಮನ್ನಾ ರೂಪದಲ್ಲಿ 6.82 ಕೋಟಿ ರೂ. ವೆಚ್ಚಮಾಡಿದೆ. ಇದಕ್ಕಾಗಿ ಕಳೆದ ಬಜೆಟ್ ನಲ್ಲಿ 50 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಜೊತೆಗೆ ಕಳೆದ ತಿಂಗಳಲ್ಲಿ ಮಾತ್ರ ಜಿಲ್ಲಾಧಿಕಾರಿ ಅವರ ನಿಧಿಯಿಂದ ಸಂತ್ರಸ್ತರ ಚಿಕಿತ್ಸೆಗಾಗಿ ಮತ್ತು ಔಷಧಕ್ಕಾಗಿ 2 ಕೋಟಿ ರೂ. ಒದಗಿಸಲಾಗಿತ್ತು.
      ಸದ್ರಿ 6728 ಮಂದಿ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಹಾಸುಗೆ ಹಿಡಿದ ರೋಗಿಗಳು 371 ಮಂದಿ, ಬುದ್ಧಿ ಮಾಂದ್ಯ ಇರುವವರು 1499 ಮಂದಿ, ವಿಶೇಷಚೇತನರು 1189 ಮಂದಿ, ಕ್ಯಾನ್ಸರ್ ರೋಗಿಗಳು 699 ಮಂದಿ, ಇತರರು 2970 ಮಂದಿ ಎಂಬ ವಿಂಗಡಣೆ ನಡೆಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries