ನವದೆಹಲಿ: ಅಮೆರಿಕ, ಕೆನಡಾದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಜೂ.11-30 ವರೆಗೆ ಏರ್ ಇಂಡಿಯಾ ಸೇವೆಯನ್ನು ಪ್ರಾರಂಭಿಸುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ವಂದೇ ಭಾರತ್ ಮಿಷನ್ ನ ಮೂರನೇ ಹಂತದಲ್ಲಿ ಒಟ್ಟಾರೆ 70 ವಿಮಾನಗಳು ಕಾರ್ಯಾಚರಣೆ ಮಾಡಲಿವೆ, ಜೂ.05 ರಿಂದ ಅಮೆರಿಕ, ಕೆನಡಾದ ಆಯ್ದ ಪ್ರದೇಶಗಳಿಂದ ಭಾರತಕ್ಕೆ ಆಗಮಿಸಲು ಏರ್ ಇಂಡಿಯಾ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕಿಂಗ್ ಪ್ರಾರಂಭವಾಗಲಿದೆ. ಏರ್ ಇಂಡಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಈಗಾಗಲೇ 3,891 ಜನರನ್ನು ದುಬೈ, ಕುವೈಟ್, ಅಬ್ದುಧಾಬಿ, ಮಸ್ಕಟ್, ಬರ್ಹೈನ್, ಮಾಸ್ಕೋ, ಮಾಡ್ರಿಡ್, ಟೋಕಿಯೋ, ಢಾಕಾ, ಬಿಷ್ಕೇಕ್, ರಿಯಾದ್ ಗಳಿಂದ ಜೂ.1 ರಂದು ವಾಪಸ್ ಕರೆತರಲಾಗಿದೆ ಎಂದು ತಿಳಿಸಿದೆ.
ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಪ್ರಾರಂಭಿಸಲಾಗಿದ್ದ ವಂದೇ ಭಾರತ್ ಮಿಷನ್ ನ ಅಡಿಯಲ್ಲಿ ಈ ವರೆಗೂ 50,000 ಜನರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ.