ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 4 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇಬ್ಬರಿಗೆ ಕೋವಿಡ್ ನೆಗೆಟಿವ್ ಆಗಿದೆ. ಸೋಂಕು ಖಚಿತಗೊಂಡಿರುವ 4 ಮಂದಿಯೂ ವಿದೇಶಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕುವೈತ್‍ನಿಂದ ಆಗಮಿಸಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ 33 ವರ್ಷದ ನಿವಾಸಿ, ಅಬುದಾಬಿಯಿಂದ ಬಂದಿದ್ದ ಮಡಿಕೈ ಗ್ರಾಮ ಪಂಚಾಯತ್‍ನ 22 ವರ್ಷದ ನಿವಾಸಿ, ಫುಜೈರಾದಿಂದ ಆಗಮಿಸಿದ್ದ ವಲಿಯಪರಂಬ ಪಂಚಾಯತ್‍ನ 50 ವರ್ಷದ ನಿವಾಸಿ, ಖತಾರ್ ನಿಂದ ಬಂದಿದ್ದ ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನಿವಾಸಿಗೆ ಸೋಂಕು ಖಚಿತವಾಗಿದೆ.
ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಸೋಂಕು ಖಚಿತಗೊಂಡು ದಾಖಲಾಗಿದ್ದ ಇಬ್ಬರು ಸೋಮವಾರ ಗುಣಮುಖರಾಗಿದ್ದಾರೆ. ಕುವೈತ್ ನಿಂದ ಆಗಮಿಸಿದ್ದ, ನೀಲೇಶ್ವರ ನಗರಸಭೆ ವ್ಯಾಪ್ತಿಯ 46 ವರ್ಷದ ನಿವಾಸಿ, ಯು.ಎ.ಇ.ಯಿಂದ ಬಂದಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 49 ವರ್ಷದ ನಿವಾಸಿಗೆ ಕೋವಿಡ್ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ 6708 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6286, ಸಾಂಸ್ಥಿಕ ನಿಗಾದಲ್ಲಿ 422 ಮಂದಿ ಇದ್ದಾರೆ. ನೂತನವಾಗಿ 897 ಮಂದಿ ನಿಗಾಕ್ಕೆ ದಾಖಲಾಗಿದ್ದಾರೆ. 369 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 786 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 121 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಸೋಮವಾರ 121 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 79 ಮಂದಿ ಗುಣಮುಖರಾಗಿದ್ದಾರೆ.
ರೋಗ ಪೀಡಿತರಲ್ಲಿ 78 ಮಂದಿ ವಿದೇಶದಿಂದಲೂ, 26 ಮಂದಿ ಇತರ ರಾಜ್ಯಗಳಿಂದಲೂ ಬಂದವರು. ಸಂಪರ್ಕದ ಮೂಲಕ 5 ಮಂದಿಗೆ ರೋಗ ಬಾಧಿಸಿದೆ. 3 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಹಾಗು 9 ಮಂದಿ ಸಿಐಎಸ್‍ಎಫ್ ಸಿಬ್ಬಂದಿಗಳಿಗೂ ರೋಗ ಬಾಧಿಸಿದೆ.
ತಿರುವನಂತಪುರ-4, ಕಲ್ಲಿಕೋಟೆ-9, ಎರ್ನಾಕುಳಂ-5, ತೃಶ್ಶೂರು-26, ಕೊಲ್ಲಂ-11, ಪಾಲ್ಘಾಟ್-12, ಕಾಸರಗೋಡು-4, ಆಲಪ್ಪುಳ-5, ಪತ್ತನಂತಿಟ್ಟ-13, ಇಡುಕ್ಕಿ-5, ಕಣ್ಣೂರು-14, ಮಲಪ್ಪುರಂ-13 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-3, ಕಲ್ಲಿಕೋಟೆ-8, ಎರ್ನಾಕುಳಂ-4, ತೃಶ್ಶೂರು-5, ಕೊಲ್ಲಂ-18, ಪಾಲ್ಘಾಟ್-3, ಮಲಪ್ಪುರಂ-3, ಕಾಸರಗೋಡು-2, ಆಲಪ್ಪುಳ-8, ಕೋಟ್ಟಯಂ-8, ಕಣ್ಣೂರು-11 ಎಂಬಂತೆ ಗುಣಮುಖರಾಗಿದ್ದಾರೆ.
ಇದು ವರೆಗೆ ರಾಜ್ಯದಲ್ಲಿ 4311 ಮಂದಿಗೆ ರೋಗ ಬಾಧಿಸಿದೆ. ಪ್ರಸ್ತುತ 2057 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 80,617 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 2662 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಸೋಮವಾರ ಶಂಕಿತ 282 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 24 ರಂದು ಮಂಜೇರಿ ಮೆಡಿಕಲ್ ಕಾಲೇಜಿನಲ್ಲಿ ಸಾವಿಗೀಡಾದ ತಮಿಳುನಾಡು ನಿವಾಸಿ ಅರಸಾಕರನ್ ಅವರ ಗಂಟಲು ದ್ರವ ಪರಿಶೋಧನೆ ಮೂಲಕ ಕೋವಿಡ್ ದೃಢೀಕರಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ವೈರಸ್‍ನಿಂದ ಸಾವಿಗೀಡಾದವರ ಸಂಖ್ಯೆ 23 ಕ್ಕೇರಿತು.
ಮಾಸ್ಕ್ ಧರಿಸದ 198 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 198 ಕೇಸುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 9411 ಕೇಸಗಳನ್ನು ದಾಖಲಿಸಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 20 ಕೇಸುಗಳ ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 20 ಕೇಸುಗಳನ್ನು ದಾಖಲಿಸಲಾಗಿದೆ. 39 ಮಂದಿಯನ್ನು ಬಂ„ಸಲಾಗಿದ್ದು, 8 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1, ಕುಂಬಳೆ 3, ವಿದ್ಯಾನಗರ 2, ಬದಿಯಡ್ಕ 1, ಆದೂರು 4, ಮೇಲ್ಪರಂಬ 2, ಬೇಕಲ 2, ನೀಲೇಶ್ವರ 1, ಚಂದೇರ 1, ವೆಳ್ಳರಿಕುಂಡ್ 1, ಚಿತ್ತಾರಿಕಲ್ 1, ರಾಜಪುರಂ 1 ಕೇಸುಗಳು ದಾಖಲಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2853 ಕೇಸುಗಳನ್ನು ದಾಖಲಿಸಲಾಗಿದೆ. 3662 ಮಂದಿಯನ್ನು ಬಂಧಿಸಲಾಗಿದ್ದು, 1179 ವಾಹನಗಳನ್ನು ವಶಪಡಿಸಲಾಗಿದೆ.