ತಿರುವನಂತಪುರ: ಮಂಗಳವಾರ ರಾಜ್ಯದಲ್ಲಿ ಕೋವಿಡ್ ಬಾಧಿಸಿದವರ ಪೈಕಿ 12 ಮಂದಿಗಳಿಗೆ ಸಂಪರ್ಕ ಕಾರಣದಿಂದ ಕೊರೊನಾ ಬಾಧಿಸಿರುವುದು ದೃಢಪಟ್ಟಿದೆ. ವಯನಾಡ್ ನಲ್ಲಿ 6, ಮಲಪ್ಪುರಂನಿಂದ 4 ಮತ್ತು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಒಬ್ಬರಿಗೆ ಇತರೆರಡೆಗಳಿಂದ ಬಂದು ಕೊರೊನಾ ಬಾಧಿಸಿದ ರೋಗಿಗಳ ನಿಕಟ ಸಂಪರ್ಕ ಕಾರಣದಿಂದ ಸೋಂಕಿಗೊಳಗಾದವರಾಗಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಓರ್ವ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಸಂಪರ್ಕದಿಂದ ತಗುಲಿರುವುದು ದೃಢಪಟ್ಟಿದೆ.
ಈ ಮಧ್ಯೆ ಮಂಗಳವಾರದ ಕೋವಿಡ್ ರೋಗ ಬಾಧಿಸಿದವರ ಪರಿಶೀಲನೆಯಲ್ಲಿ 19 ರೋಗಿಗಳ ಫಲಿತಾಂಶಗಳು ಋಣಾತ್ಮಕವಾಗಿವೆ. ಕೊಟ್ಟಾಯಂ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಏಳು ಮತ್ತು ತಿರುವನಂತಪುರಂ ಜಿಲ್ಲೆಯಿಂದ ತಲಾ ಎರಡು ಮತ್ತು ಪತ್ತನಂತಿಟ್ಟು, ಮಲಪ್ಪುರಂ, ಕಣ್ಣೂರು ಜಿಲ್ಲೆಗಳಿಂದ ತಲಾ ಒಬ್ಬರ ಸೋಂಕು ಫಲಿತಾಂಶ ಋಣಾತ್ಮಕವಾಗಿದೆ. ಈವರೆಗೆ 774 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್‍ನಿಂದ ಈವರೆಗೆ 627 ಮುಕ್ತರಾಗಿದ್ದಾರೆ.
ಕೋವಿಡ್ -19 ನಿನ್ನೆ ರಾಜ್ಯದ 86 ಜನರಲ್ಲಿ ದೃಢಪಟ್ಟಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಶ್ವಾಸಕೋಶದ ಗಂಭೀರ ಸೋಂಕಿನಿಂದ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಾ. ಕೆ.ಜಿ.ವರ್ಗೀಸ್ (77) ನಿನ್ನೆ ಮೃತಪಟ್ಟಿದ್ದು ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತೆಂದು ವೈದ್ಯಕೀಯ ಮೂಲಗಳು ದೃಢಪಡಿಸಿದೆ.