ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 8 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ ಮೂವರು ವಿದೇಶದಿಂದ, ಮೂವರು ಇತರ ರಾಜ್ಯಗಳಿಂದ ಬಂದವರು. ಇಬ್ಬರಿಗೆ ಸಂಪರ್ಕ ಮೂಲಕ ಕೋವಿಡ್ ಖಚಿತಗೊಂಡಿದೆ. 4 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾ„ಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
36 ದಿನಗಳ ನಂತರ ಸಂಪರ್ಕ ಮೂಲಕ ಸೋಂಕು : 36 ದಿನಗಳ ನಂತರ ಜಿಲ್ಲೆಯಲ್ಲಿ ಒಬ್ಬರಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಚೆಂಗಳ ಗ್ರಾಮ ಪಂಚಾಯತ್‍ನ 46 ವರ್ಷದ ನಿವಾಸಿಗೆ ಈ ರೀತಿ ಕೋವಿಡ್ ಪಾಸಿಟಿವ್ ಆಗಿದೆ.
ಜೂ.19 ರಂದು ಜೂ.17ರಂದು ಇವರು ಸ್ವಂತ ಕಾರಿನಲ್ಲಿ ಆಲುವಾಗೆ ತೆರಳಿದ್ದು, ಅಲ್ಲಿ ತಮ್ಮ ವಿಲ್ಲಾದಲ್ಲಿ ತಂಗಿ 26ರಂದು ಊರಿಗೆ ಕಾರಿನಲ್ಲಿ ಮರಳಿದ್ದರು. ಸಂಪರ್ಕ ಮೂಲಕ ಈ ಹಿಂದೆ ಸೋಂಕು ಖಚಿತಗೊಂಡಿದ್ದ ಪ್ರಕರಣ ಮೇ 27ರಂದು ನಡೆದಿತ್ತು. ಕಾಸರಗೋಡು ಜನರಲ್ ಆಸ್ಪತ್ರೆಯ ಮಹಿಳಾ ವೈದ್ಯೆಯೊಬ್ಬರಿಗೆ ಅಂದು ಕೋವಿಡ್ ಪಾಸಿಟಿವ್ ಆಗಿತ್ತು.
ವಿದೇಶದಿಂದ ಬಂದವರು : ಸೋಂಕು ಖಚಿತಗೊಂಡವರಲ್ಲಿ ಒಮಾನ್‍ನಿಂದ ಬಂದಿದ್ದ ಕುಂಬಳೆ ಪಂಚಾಯತ್‍ನ 45 ವರ್ಷದ ವ್ಯಕ್ತಿ, ದುಬಾಯಿಯಿಂದ ಆಗಮಿಸಿದ್ದ ಪನತ್ತಡಿ ಪಂಚಾಯತ್‍ನ 35 ವರ್ಷದ ನಿವಾಸಿ, ಖತಾರ್ ನಿಂದ ಬಂದಿದ್ದ ಕುಂಬಳೆ ಪಂಚಾಯತ್‍ನ 36 ವರ್ಷದ ನಿವಾಸಿ ಇದ್ದಾರೆ.
ಇತರ ರಾಜ್ಯಗಳಿಂದ ಬಂದವರು : ದಿಲ್ಲಿಯಿಂದ ಆಗಮಿಸಿದ್ದ ಮಡಿಕೈ ಗ್ರಾಮ ಪಂಚಾಯತ್‍ನ 27 ವರ್ಷದ ನಿವಾಸಿ, ಬೆಂಗಳೂರಿನಿಂದ ಬಂದಿದ್ದ ಬದಿಯಡ್ಕ ಗ್ರಾಮ ಪಂಚಾಯತ್‍ನ 22, 40 ವರ್ಷದ ನಿವಾಸಿಗಳು ಸೇರಿದ್ದಾರೆ.
ಕಾಸರಗೋಡು ನಿವಾಸಿಯಾದ ಒಬ್ಬರು ಎರ್ನಾಕುಳಂ ತೃಪ್ಪುಣಿತ್ತರದ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತಿರುವುದಾಗಿ ಡಿಎಂಒ ತಿಳಿಸಿದ್ದಾರೆ.
ಕೋವಿಡ್ ನೆಗೆಟಿವ್ ಆದವರು ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಮತ್ತು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದವರು. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ದುಬಾಯಿಯಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್‍ನ 47 ವರ್ಷದ ವ್ಯಕ್ತಿ, ಮಹರಾಷ್ಟ್ರದಿಂದ ಬಂದಿದ್ದ ಚೆಮ್ನಾಡ್ ಪಂಚಾಯತ್‍ನ 29 ವರ್ಷದ ನಿವಾಸಿ ಮತ್ತು ಮಂಗಲ್ಪಾಡಿ ಪಂಚಾಯತ್‍ನ 60 ವರ್ಷದ ನಿವಾಸಿ ಗುಣಮುಖರಾಗಿದ್ದಾರೆ. ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ, ಬಹರೈನ್ ನಿಂದ ಆಗಮಿಸಿದ್ದ ಪಳ್ಳಿಕ್ಕರೆ ಪಂಚಾಯತ್ ನಿವಾಸಿ 34 ವರ್ಷದ ವ್ಯಕ್ತಿಗೆ ಕೋವಿಡ್ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ 6929 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6520 ಮಂದಿ, ಸಾಂಸ್ಥಿಕ ನಿಗಾದಲ್ಲಿ 409 ಮಂದಿ ಇದ್ದಾರೆ. ನೂತನವಾಗಿ 589 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 203 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 393 ಮಂದಿಯ ಫಲಿತಾಂಶ ಲಭಿಸಿಲ್ಲ. 368 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 131 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಮಂಗಳವಾರ 131 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ಸಂದರ್ಭದಲ್ಲಿ 75 ಮಂದಿ ಗುಣಮುಖರಾಗಿದ್ದಾರೆ.
ಮಲಪ್ಪುರಂ-32, ಕಣ್ಣೂರು-26, ಪಾಲ್ಘಾಟ್-17, ಕೊಲ್ಲಂ-12, ಎರ್ನಾಕುಳಂ-10, ಆಲಪ್ಪುಳ-9, ಕಾಸರಗೋಡು-8, ತಿರುವನಂತಪುರ-5(ಒಬ್ಬರು ಸಾವಿಗೀಡಾದರು), ತೃಶ್ಶೂರು-4, ಕಲ್ಲಿಕೋಟೆ-4, ಕೋಟ್ಟಯಂ-3, ಪತ್ತನಂತಿಟ್ಟ-1 ಎಂಬಂತೆ ರೋಗ
ಬಾಧಿಸಿದೆ.
ರೋಗ ಬಾಧಿತರಲ್ಲಿ 65 ಮಂದಿ ವಿದೇಶದಿಂದಲೂ, 46 ಮಂದಿ ಇತರ ರಾಜ್ಯಗಳಿಂದಲೂ ಬಂದವರು. 10 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಮಲಪ್ಪುರ ಜಿಲ್ಲೆಯಲ್ಲಿ 4, ಪಾಲ್ಘಾಟ್ ಮತ್ತು ಕಾಸರಗೋಡು ತಲಾ ಇಬ್ಬರು, ಆಲಪ್ಪುಳ ಮತ್ತು ಕಲ್ಲಿಕೋಟೆಯಲ್ಲಿ ತಲಾ ಒಬ್ಬರಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ಕಣ್ಣೂರಿನ 9 ಮಂದಿ ಸಿ.ಐ.ಎಸ್.ಎಫ್. ಸಿಬ್ಬಂದಿಗಳಿಗೆ ರೋಗ ಬಾ„ಸಿದೆ. ಜೂ.27 ರಂದು ತಿರುವನಂತಪುರ ಜಿಲ್ಲೆಯಲ್ಲಿ ಸಾವಿಗೀಡಾದ ತಂಗಪ್ಪನ್(76) ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಕೋವಿಡ್ ದೃಢೀಕರಿಸಲಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಸಾವಿಗೀಡಾದವರ ಸಂಖ್ಯೆ 24 ಕ್ಕೇರಿತು.
ಮಲಪ್ಪುರ-23(ತೃಶ್ಶೂರು-1), ತೃಶ್ಶೂರು-12, ಎರ್ನಾಕುಳಂ-7, ಪಾಲ್ಘಾಟ್-7, ತಿರುವನಂತಪುರ(ಕೊಲ್ಲಂ-1), ಕೋಟ್ಟಯಂ-6, ವಯನಾಡು-4, ಕಾಸರಗೋಡು-4, ಇಡುಕ್ಕಿ-2, ಕಲ್ಲಿಕೋಟೆ-2, ಕಣ್ಣೂರು-2 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 2112 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 2304 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 1,84,657 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 181876 ಮಂದಿ ಮನೆಗಳಲ್ಲೂ, 2781 ಮಂದಿ ಆಸ್ಪತ್ರೆಯಲ್ಲೂ ನಿಗಾವಣೆಯಲ್ಲಿದ್ದಾರೆ. ಮಂಗಳವಾರ ಶಂಕಿತ 330 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಸ್ಕ್ ಧರಿಸದ 233 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 233 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ಪ್ರಕರಣಗಳಿಗೆ ಸಂಬಂ„ಸಿ ಈ ವರೆಗೆ ಒಟ್ಟು 9644 ಕೇಸುಗಳು ದಾಖಲಾಗಿವೆ.
ಲಾಕ್‍ಡೌನ್ ಉಲ್ಲಂಘನೆ: 22 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 22 ಕೇಸು ದಾಖಲಿಸಲಾಗಿದೆ. 44 ಮಂದಿಯನ್ನು ಬಂಧಿಸಲಾಗಿದ್ದು, 8 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 4 ಕೇಸುಗಳು, ಕುಂಬಳೆ 1, ಕಾಸರಗೋಡು 1, ಬದಿಯಡ್ಕ 1, ಮೇಲ್ಪರಂಬ 2, ಬೇಕಲ 2, ಅಂಬಲತ್ತರ 1, ಹೊಸದುರ್ಗ 3, ನೀಲೇಶ್ವರ 1, ಚಂದೇರ 3, ವೆಳ್ಳರಿಕುಂಡ್ 1, ಚಿತ್ತಾರಿಕಲ್ 1, ರಾಜಪುರಂ 1 ಕೇಸುಗಳು ದಾಖಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಜಿಲ್ಲೆಯಲ್ಲಿ ಒಟ್ಟು 2875 ಕೇಸುಗಳು ದಾಖಲಾಗಿವೆ. 3706 ಮಂದಿಯನ್ನು ಬಂಧಿಸಲಾಗಿದ್ದು, 1187 ವಾಹನಗಳನ್ನು ವಶಪಡಿಸಲಾಗಿದೆ.