HEALTH TIPS

ಕೋವಿಡ್- 1.6 ಲಕ್ಷಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ ನಲ್ಲಿ-ಆತಂಕ ಮೂಡಿಸಿದ ಆರೋಗ್ಯ ಕಾರ್ಯಕರ್ತರಿಗೆ ಬಾಧಿಸಿದ ಸೋಂಕು

   
         ತಿರುವನಂತಪುರ: ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು ಬುಧವಾರ ರಾಜ್ಯದಲ್ಲಿ 82 ಮಂದಿಗಳಲ್ಲಿ ದೃಢೀಕರಿಸಲಾಗಿದೆ. ಜೊತೆಗೆ  1.6 ಲಕ್ಷ ಜನರು ನಿಗಾದಲ್ಲಿರುವುದು ಭಾರೀ ಆತಂಕಕ್ಕೂ ಕಾರಣವಾಗಿದೆ. ರಾಜ್ಯದಲ್ಲಿ ಪ್ರಸ್ತುತ 832 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದ್ದು  241 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗುತ್ತಿದ್ದಾರೆ.
          ಐದು ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು:
    ರಾಜ್ಯದಲ್ಲಿ ನಿನ್ನೆಯ ಸೋಂಕಿತರ ಪಟ್ಟಿಯಲ್ಲಿ ಐದು ಆರೋಗ್ಯ ಕಾರ್ಯಕರ್ತರಲ್ಲಿ ರೋಗ ದೃಢಪಟ್ಟಿದೆ.  ವಿದೇಶದಿಂದ 53 ಜನರಲ್ಲಿ ನಿನ್ನೆ ರೋಗ ದೃಢಗೊಂಡಿತ್ತು. ಅನ್ಯ ರಾಜ್ಯಗಳಿಂದ ಆಗಮಿಸಿದ 19 ಮಂದಿಯಲ್ಲೂ ಸೋಂಕು ದೃಢಪಟ್ಟಿದೆ. ತಿರುವನಂತಪುರಂ ಜಿಲ್ಲೆ 14 ಸೋಂಕಿತರೊಂದಿಗೆ ಮೊದಲ ಸ್ಥಾನದಲ್ಲಿದೆ. ಮಲಪ್ಪುರಂನಲ್ಲಿ 11 ಜನರಿಗೆ ರೋಗ ಪತ್ತೆಯಾಗಿದೆ. ಅಲ್ಲದೆ ನಿನ್ನೆ ಒಂದೇ ದಿನ 24 ಮಂದಿ ಅನಾರೋಗ್ಯಕ್ಕೊಳಗಾಗಿ ಅವರ ಮಾದರಿಗಳನ್ನು ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ತಿರುವನಂತಪುರಂ 6, ಕೊಲ್ಲಂ 2, ಕೊಟ್ಟಾಯಂ 3, ತ್ರಿಶೂರ್ 1, ಕೋಝಿಕ್ಕೋಡ್ 5, ಕಣ್ಣೂರು 2, ಕಾಸರಗೋಡು 4 ಮತ್ತು ಆಲಪ್ಪುಳ 1.
        ಹೆಚ್ಚಿನ ರೋಗಿಗಳು ಪಾಲಕ್ಕಾಡ್ ನವರು!:
     ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ,ಈ ವರೆಗೆ ಪಾಲಕ್ಕಾಡ್ ಜಿಲ್ಲೆ 148 ರೋಗಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಅವರಲ್ಲಿ ಇಬ್ಬರು ತ್ರಿಶೂರ್ ಮತ್ತು ಒಬ್ಬರು ಮಲಪ್ಪುರಂ ಮೂಲದವರು. ಕಣ್ಣೂರು  118 ರೋಗಿಗಳನ್ನು ಹೊಂದಿ ಎರಡನೇ ಸ್ಥಾನದಲ್ಲಿದೆ. ಕಾಸರಗೋಡು ಎಂಟು ಮಂದಿ, ಕೋಝಿಕ್ಕೋಡ್ ಮೂವರು ಮತ್ತು ಎರ್ನಾಕುಲಂನ ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 90 ರೋಗಿಗಳಲ್ಲಿ ತಲಾ ಮಲಪ್ಪುರಂ, ತಿರುವನಂತಪುರಂ, ಇಡುಕಿ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಸಂಖ್ಯೆ ಹೆಚ್ಚಿದೆ. ಏರ್ ಇಂಡಿಯಾ ಉದ್ಯೋಗಿಯೊಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರ್ನಾಕುಳಂ, ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳಿಂದ ತಲಾ 40 ರೋಗಿಗಳು, ತ್ರಿಶೂರ್‍ನಿಂದ ನಾಲ್ವರು ಮತ್ತು ಪಾಲಕ್ಕಾಡ್‍ನಿಂದ ಒಬ್ಬರು ರೋಗಿಗಳಿದ್ದಾರೆ. ಉತ್ತರ ಪ್ರದೇಶದ ಓರ್ವ, 2 ನಾವಿಕರು ಮತ್ತು ನಾಲ್ಕು ಕೋಸ್ಟ್ ಗಾರ್ಡ್ ಸಿಬ್ಬಂದಿ ಎರ್ನಾಕುಳಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿರುವನಂತಪುರಂ (61), ಕೊಲ್ಲಂ (44), ಪತ್ತನಂತಿಟ್ಟು (29), ಆಲಪ್ಪುಳ (55), ಕೊಟ್ಟಾಯಂ (24), ಇಡುಕಿ (17), ತ್ರಿಶೂರ್ (57), ಕೋಝಿಕ್ಕೋಡ್ (50) ಮತ್ತು ಕಾಸರಗೋಡು (86) ಮಂದಿಗಳಲ್ಲಿ ರೋಗ ಪತ್ತೆಯಾಗಿದೆ.
          ತಪಾಸಣೆಗಳ ಸಂಖ್ಯೆಯಲ್ಲಿ ಹೆಚ್ಚಳ:
     4004 ಜೊಲ್ಲು ಮಾದರಿಗಳನ್ನು ನಿನ್ನೆ ಪರಿಶೀಲಿಸಲಾಗಿದೆ ಎಂದು ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈವರೆಗೆ 73712 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಒಟ್ಟು 69,606 ಪ್ರಕರಣಗಳು ಸೋಂಕು ರಹಿತವೆಂದು ದೃಢಪಟ್ಟಿದೆ. ಈವರೆಗೆ ರಾಜ್ಯದಲ್ಲಿ 1494 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ 832 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಪ್ರಸ್ತುತ 160304 ಜನರು ಕ್ವಾರಂಟೈನ್ ನಲ್ಲಿದ್ದಾರೆ. 158861 ಜನರು ಮನೆಗಳಲ್ಲಿ ಮತ್ತು 1440 ಜನರು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಈ ಪೈಕಿ 241 ಮಂದಿಯನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿದೆ.
             ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ 128 ಕ್ಕೆ ಏರಿಕೆ:
      ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ 128 ಕ್ಕೆ ಏರಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕಣ್ಣೂರು, ಮಲಪ್ಪುರಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಹಾಟ್‍ಸ್ಪಾಟ್ ಗಳನ್ನು ಏರಿಸಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನರನ್ನು ವೀಕ್ಷಿಸಲಾಗುತ್ತಿದೆ. ಹೆಚ್ಚು ಹೆಚ್ಚು ವಲಸಿಗರು ರಾಜ್ಯಕ್ಕೆ ಬರುತ್ತಿದ್ದಾರೆ ಮತ್ತು ಸರ್ಕಾರವು ಸಂಪೂರ್ಣ ಸಜ್ಜುಗೊಂಡಿದೆ ಎಂದು ಮುಖ್ಯಮಂತ್ರಿ ಹೇಳಿರುವರು. ರಾಜ್ಯಕ್ಕೆ ಆಗಮಿಸುವ ಅಂತರಾಷ್ಟ್ರೀಯ ವಂದೇ ಭಾರತ್ ಮಿಷನ್ ವಿಮಾನಗಳ ಆಗಮನಕ್ಕೆ ಅನುಮತಿ ನಿರಾಕರಿಸಲಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿರುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries