ಬದಿಯಡ್ಕ: 2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 19 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದಿದ್ದಾರೆ.
ಶಾಲೆಯ ಅದಿತಿ.ಕೆ, ಅಕ್ಷಿತ, ಅಮೃತ್ ರಾಜ್.ಎನ್, ಅನನ್ಯ. ಡಿ.ಕೆ, ಅನಿರುದ್ಧ್ ಪಿ.ವಿ., ಚಿನ್ಮಯಿ. ಸಿ.ಎಚ್, ದೀಪ್ನಾ.ಜೆ, ದಿಶಾಂತ್.ಕೆ, ದಿವ್ಯಾ.ಕೆ, ಕಾರ್ತಿಕ ಕೃಷ್ಣ.ಕೆ, ಕಾವ್ಯಶ್ರೀ.ಎನ್.ಜಿ, ಲೋಹಿತ್.ಪಿ.ಕೆ, ಮನ್ವಿತಾ.ಎನ್.ಪಿ., ನವ್ಯಶ್ರೀ ಎನ್.ಜಿ, ಪ್ರಗತಿ, ಶ್ರೇಯಾ ಆರ್. ನಾಯಕ್, ಶ್ರೇಯಶ್ರೀ.ಎನ್, ಸ್ಫೂರ್ತಿ ಭಟ್.ಕೆ, ಸುಶ್ಮಿತಾ.ಪಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 166 ಮಂದಿ ಪರೀಕ್ಷೆ ಬರೆದಿದ್ದು 165 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 99.4 ಶೇ. ಫಲಿತಾಂಶವನ್ನು ತಂದಿದ್ದಾರೆ.