ತಿರುವನಂತಪುರ: ಐದನೇ ಹಂತದ ಕೋವಿಡ್ ಲಾಕ್ ಡೌನ್ ಚಾಲ್ತಿಗೆ ಬರುತ್ತಿರುವಂತೆ ರಾಜ್ಯದಲ್ಲಿ ವಾಹನ ಸಂಚಾರ ಸಂಬಂಧಿಸಿ ಹಲವು ವಿನಾಯ್ತಿಗಳನ್ನು ಸರ್ಕಾರ ಮುಂದಿರಿಸಿದೆ.
ಆಟೋರಿಕ್ಷಾದಲ್ಲಿ ಕೇವಲ ಇಬ್ಬರು ಹಾಗೂ ಕಾರಲ್ಲಿ ಚಾಲಕ ಸೇರಿದಂತೆ ನಾಲ್ವರಿಗೆ ಮಾತ್ರ ಅನುಮತಿ ನೀಡಲಾಗಿದೆ.
ಬಸ್ ಸೇವೆ ಅಂತರ್ ಜಿಲ್ಲೆಗಳಿಗಷ್ಟೇ ಸೀಮಿತವಾಗಿರುತ್ತದೆ ಎಂದು ಮುಖ್ಯಮಂತ್ರಿ ಹೇಳಿರುವರು. ಜೊತೆಗೆ ಎಲ್ಲಾ ಆಸನನಗಳಲ್ಲೂ ಈ ಹಿಂದಿನಂತೆ ಕುಳಿತು ಪ್ರಯಾಣಿಸಬಹುದಾಗಿದೆ. ಬಸ್ ಸಂಚಾರದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಸ್ಯಾನಿಟೈಜರ್ ಬಸ್ ಒಳ ಪ್ರವೇಶಿಸುವ, ಹೊರಬರುವ ಬಾಗಿಲುಗಳಲ್ಲಿ ಇರಿಸುವುದನ್ನೂ ಕಟ್ಟುನಿಟ್ಟುಗೊಳಿಸಲಾಗಿದೆ. ಎಲ್ಲಾ ಸುರಕ್ಷತಾ ಮಾನದಂಡಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಿಎಂ ಹೇಳಿರುವರು.
ಕಾರಿನ ಚಾಲಕನ ಜೊತೆಗೆ, ಮೂರು ಜನರು ಪ್ರಯಾಣಿಸಬಹುದು. ಇಬ್ಬರು ಜನರು ಆಟೋರಿಕ್ಷಾದಲ್ಲಿ ಪ್ರಯಾಣಿಸಬಹುದು. ಸುರಕ್ಷತಾ ಮಾನದಂಡಗಳನ್ನು ಪೂರೈಸುವ ಮೂಲಕ ಸಿನೆಮಾ ಶೂಟಿಂಗ್ ಅನ್ನು ಸ್ಟುಡಿಯೋ ಅಥವಾ ಒಳಾಂಗಣ ಸ್ಥಳದಲ್ಲಿ ಮಾಡಬಹುದು. ಇಲ್ಲಿ 50 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಸೀರಿಯಲ್ ಗಳಿಗೆ ಗರಿಷ್ಠ 25 ಜನರು ಒಳಾಂಗಣದಲ್ಲಿ ಚಿತ್ರೀಕರಣ ನಡೆಸಲು ಅನುಮತಿ ನೀಡಲಾಗಿದೆ. ಈ ಮಧ್ಯೆ ಕಂಟೋನ್ಮೆಂಟ್ ಪ್ರದೇಶಗಳಲ್ಲಿ 24 ಗಂಟೆಗಳ ನಿಷೇದಾಜ್ಞೆ ನಿಬರ್ಂಧಗಳನ್ನು ವಿಧಿಸಲಾಗುವುದು ಎಂದು ಹೇಳಿದರು. ವೈದ್ಯಕೀಯ ಉದ್ದೇಶಗಳಿಗಾಗಿ ಮತ್ತು ಕುಟುಂಬ ಸದಸ್ಯರ ಸಾವಿಗೆ ಮಾತ್ರ ಈ ಪ್ರದೇಶಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಇಂತಹ ತುರ್ತು ಪ್ರಯಾಣಕ್ಕಾಗಿ ಹತ್ತಿರದ ಪೆÇಲೀಸ್ ಠಾಣೆಗಳಿಂದ ಪಾಸ್ ಪಡೆಯಬೇಕು ಎಂದು ಮುಖ್ಯಮಂತ್ರಿ ಹೇಳಿದರು. ನೆರೆಯ ರಾಜ್ಯಗಳಿಂದ ಹಿಂದಿರುಗಿದ ಕಾರ್ಮಿಕರಿಗೆ 15 ದಿನಗಳವರೆಗೆ ತಾತ್ಕಾಲಿಕ ಪಾಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.