ಕರಾಚಿ: ಪಾಕಿಸ್ತಾನದ ಕರಾಚಿಯ ಸ್ಟಾಕ್ ಎಕ್ಸಚೇಂಜ್ ಆವರಣದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಉಗ್ರರು ಸೇರಿ 9 ಮಂದಿ ಮೃತಪಟ್ಟಿದ್ದಾರೆ.
ಸ್ಟಾಕ್ ಎಕ್ಸಚೇಂಜ್ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಎಚ್ಚೇತ್ತ ಪೆÇಲೀಸರು ಆವರಣವನ್ನು ಸುತ್ತುವರಿಸಿ ಪ್ರತಿದಾಳಿ ನಡೆಸಿದರು. ಈ ವೇಳೆ ನಾಲ್ವರು ಉಗ್ರರು ಮೃತಪಟ್ಟಿದ್ದಾರೆ. ಇನ್ನು ಕಾರ್ಯಾಚರಣೆ ಮುಂದುವರೆದಿದೆ. ಉಗ್ರರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಸ್ಟಾಕ್ ಎಕ್ಸಚೇಂಜ್ ಒಳಗೆ ನುಗ್ಗಿದ್ದರು. ನಂತರ ಮನಬಂದಂತೆ ಗುಂಡಿನ ಮಳೆಗೈದಿದ್ದಾರೆ. ಇದೇ ವೇಳೆ ಗ್ರೆನೇಡ್ ದಾಳಿ ಕೂಡ ನಡೆಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದು ಸಾವು-ನೋವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.