ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು(ಜೂ.30) ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಕೋವಿಡ್ 19 ಲಾಕ್‍ಡೌನ್ ಅನ್ನು ಜುಲೈ 31 ರವರೆಗೆ ದೇಶಾದ್ಯಂತ ವಿಸ್ತರಿಸಿದ ನಂತರ ಈ ಸುದ್ದಿ ಬಂದಿದೆ. ಚೀನಾದೊಂದಿಗಿನ ಉದ್ವಿಗ್ನತೆ ನಡುವೆಯೇ ದೇಶದಲ್ಲಿ ಟಿಕ್‍ಟಾಕ್, ಯುಸಿ ಬ್ರೌಸರ್ ಮತ್ತು ಇತರ 59 ಚೈನೀಸ್ ಅಪ್ಲಿಕೇಶನ್‍ಗಳನ್ನು ಗೃಹ ಸಚಿವಾಲಯ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ನಾಳಿನ ಪ್ರಧಾನಿ ಮಾತು ಪ್ರಾಮುಖ್ಯತೆ ಪಡೆಯಲಿದೆ.
ಏತನ್ಮಧ್ಯೆ, ಭಾರತದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 5,48,318 ಕ್ಕೆ ತಲುಪಿದ್ದು, ಅದರಲ್ಲಿ 2,10,120 ಸಕ್ರಿಯವಾಗಿದ್ದರೆ, 3,21,723 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ 16,475 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Prime Minister @narendramodi will address the nation at 4 PM tomorrow.
28K people are talking about this