HEALTH TIPS

ಕೊರೋನಾ ಸಮಸ್ಯೆಯೇ ಮುಗಿದಿಲ್ಲ, ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ಸಾಮಥ್ರ್ಯದ ಸ್ವೈನ್ ಫ್ಲೂ ಜಿ4 ವೈರಸ್ ಪತ್ತೆ!

Top Post Ad

Click to join Samarasasudhi Official Whatsapp Group

Qries

   
          ವಾಷಿಂಗ್ಟನ್: ಜಗತ್ತಿನ 213 ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ ಆದಾಗಲೇ ಕೋವಿಡ್-19 ವೈರಸ್ ತವರು ಚೀನಾದಲ್ಲಿ ಮತ್ತೊಂದು ವೈರಸ್ ಸಾಂಕ್ರಾಮಿಕ ಕಾಣಿಸಿಕೊಂಡಿದೆ.
         ಚೀನಾದಲ್ಲಿರುವ ಸಂಶೋಧಕರು ಚೀನಾದಲ್ಲಿ ಸಾಂಕ್ರಾಮಿಕವಾಗಿ ಹರಡಬಲ್ಲ ಸಾಮಥ್ರ್ಯವಿರುವ ಸ್ವೈನ್ ಫ್ಲೂ (ಹಂದಿಜ್ವರ)ದ ವೈರಸ್ ಅನ್ನು ಪತ್ತೆ ಮಾಡಿದ್ದಾರೆ. ಚೀನಾದಲ್ಲಿರುವ ಹಂದಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು, ಈ ವೈರಸ್ ಮನುಷ್ಯರಿಗೂ ಅಂಟಿಕೊಳ್ಳುವ ಸಾಮಥ್ರ್ಯವಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡಿ ಸಾಂಕ್ರಾಮಿಕವಾಗುವ ಭೀತಿ ಇದೆ ಎಂದು  ಚೀನಿ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಚೀನಾದ ಕೆಲ ಪ್ರಾಂತ್ಯಗಳಲ್ಲಿರುವ ಹಂದಿಗಳು ಇನ್‍ಫ್ಲುಯೆಂಜಾದಿಂದ ಹೆಚ್ಚು ಹೆಚ್ಚು ಸೋಂಕಿಗೆ ಒಳಗಾಗುತ್ತಿವೆ, ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಇದು ಸುಲಭದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಬಹುದಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಜಿ-4 ಎಂಬ ಹೆಸರಿನ ವೈರಸ್ ಇದಾಗಿದ್ದು,ಚೀನಾದ ಹಂದಿಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವೈರಸ್ ಯುರೋಪಿಯನ್ ಮತ್ತು ಏಷ್ಯನ್ ಪಕ್ಷಿಗಳಲ್ಲಿಯೂ ತಗಲುವ ಸಾಧ್ಯತೆ ಇದೆ.ಈ ಬಗ್ಗೆ  ಚೀನಾ ಅಗ್ರಿಕಲ್ಚರಲ್ ಯೂನಿವರ್ಸಿಟಿಯ (ಸಿಎಯು) ಲಿಯು ಜಿನ್ಹುವಾ ನೇತೃತ್ವದ ತಂಡವು ಚೀನಾದ 10 ಕಸಾಯಿಖಾನೆಗಳ 30 ಸಾವಿರಕ್ಕೂ ಅಧಿಕ ಹಂದಿಗಳ ಸ್ವ್ಯಾಬ್‍ಗಳ ಪರೀಕ್ಷೆ ಮಾಡಿದ್ದು, ಅವುಗಳ ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ, ಇದರ ಅಧ್ಯಯನ ನಡೆಸಲಾಗಿತ್ತು. ಈದೀಗ ಈ ವೈರಸ್ ಕುರಿತಂತೆ ವಿಜ್ಞಾನಿಗಳು ಮಾಹಿತಿ ನೀಡಿದ್ದು, ಈ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.
        ಇದೇ ವೈರಸ್ ಕುರಿತಂತೆ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ನ ಪೆÇ್ರಸೀಡಿಂಗ್ಸ್‍ನಲ್ಲಿ ಪ್ರಕಟವಾದ ಈ ಅಧ್ಯಯನವೂ ಕೂಡ ಜಿ 4 ಹೆಸರಿನ ವೈರಸ್‍ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಇದು 2009ರಲ್ಲಿ ವಿಶ್ವದೆಲ್ಲೆಡೆ ಬೆಚ್ಚಿ ಬೀಳಿಸಿದ್ದ ಎಚ್1ಎನ್1ನ ಇನ್ನೊಂದು ರೂಪಾಂತರ ಎಂದು ಉಲ್ಲೇಖಿಸಿದೆ. ಮನುಷ್ಯರಿಗೆ ಸೋಂಕು ತಗುಲಿಸಬಹುದಾದ ಎಲ್ಲಾ ಲಕ್ಷಣಗಳನ್ನೂ ಈ ವೈರಸ್ ಹೊಂದಿದೆ ಎಂದು ಹೇಳಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries