ನವದೆಹಲಿ: ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೆ ವೇಗ ನೀಡಲು ಮತ್ತು ಮೊಬೈಲ್ ಫೆÇೀನ್ ಉತ್ಪಾದನೆಯಲ್ಲಿ ದೇಶವನ್ನು ವಿಶ್ವದರ್ಜೆಗೇರಿಸುವ ಗುರಿಯೊಂದಿಗೆ 50 ಸಾವಿರ ಕೋಟಿ ರೂ. ಮೊತ್ತದ ಮೂರು ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಯೋಜನೆ ಘೋಷಿಸಿದ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್, ಕಳೆದ ಆರು ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೆ ಬೇಡಿಕೆ ಹೆಚ್ಚಿದೆ ಮತ್ತು ವಿಶ್ವದಲ್ಲಿ ಭಾರತ ಎರಡನೇ ಅತಿ ಹೆಚ್ಚು ಮೊಬೈಲ್ ಫೆÇೀನ್ ಉತ್ಪಾದಿಸುವ ದೇಶವಾಗಿದೆ ಎಂದರು. ಮುಂದಿನ ಕೆಲ ವರ್ಷಗಳಲ್ಲಿ ಭಾರತ ಶ್ರೇಷ್ಠ ದೇಶವಾಗುವ ಗುರಿ ಹೊಂದಿದೆ. ಕಳೆದ 6 ವರ್ಷಗಳಲ್ಲಿ ನಮ್ಮ ಸಾಧನೆ ತೃಪ್ತಿದಾಯಕವಾಗಿದ್ದು, ಇದು ನಮಗೆ ಸಾಕಷ್ಟು ಭರವಸೆಗಳನ್ನು ನೀಡಿದೆ ಎಂದು ಹೇಳಿದರು. ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ಐದು ವಿಶ್ವ ದರ್ಜೆ ಮತ್ತು ಹಲವು ರಾಷ್ಟ್ರೀಯ ಮಟ್ಟದ ಕಂಪನಿಗಳನ್ನು ಸ್ಥಾಪಿಸಲು ಈ ಹೊಸ ಯೋಜನೆಗಳು ನೆರವಾಗಬಲ್ಲವು ಎಂದರು.
ಉತ್ಪಾದನಾ ಸಂಪರ್ಕದ ಉಪಕ್ರಮ (ಪಿಎಲ್ ಐ) ಯೋಜನೆ, ಎಲೆಕ್ಟ್ರಾನಿಕ್ ಉತ್ಪಾದನಾ ವಲಯಗಳೂ (ಇಎಂಸಿ) 2.0 ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಅರೆವಾಹಕಗಳ ಉತ್ಪಾದನೆಯನ್ನು ಪೆÇ್ರೀತ್ಸಾಹಿಸುವ ಯೋಜನೆಗಳನ್ನು ಸರ್ಕಾರ ಘೋಷಿಸಿದೆ.
ಇವುಗಳು ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ವಿಸ್ತರಿಸಿ, ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಿ, ಹೆಚ್ಚಿನ ಉದ್ಯೋಗ ಒದಗಿಸುವ ಮತ್ತು ವಿಶ್ವಾಸಾರ್ಹ ಮೌಲ್ಯದ ಸರಣಿಯನ್ನು ನಿರ್ಮಿಸುವ ಗುರಿ ಹೊಂದಿವೆ ಎಂದರು.