ಕಾಸರಗೋಡು: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 60ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಜು.5 ರಿಂದ ಸಪ್ಟಂಬರ್ 2ರ ವರೆಗೆ ಶ್ರೀಮದ್ ಎಡನೀರು ಮಠದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾನದಂಡಗಳಿಗೆ ಅನುಸಾರ ಸಾಂಪ್ರದಾಯಿಕ ಶ್ರದ್ದೆ-ಭಕ್ತಿಗಳಿಂದ ನಡೆಯಲಿದೆ.
ಕೇರಳದ ಏಕೈಕ ಶಂಕರ ಸಂಸ್ಥಾನ:
ಶ್ರೀಶಂಕರ ಭಗವದ್ಪಾದರು ಮೂಲತಃ ಕೇರಳದವರಾದರೂ, ಭಾರತದ ಉದ್ದಗಲ ಮಠಗಳನ್ನು ನಿರ್ಮಿಸಿದ್ದರೂ ಶ್ರೀಶಂಕರರ ಏಕೈಕ ಮಠ ಪರಂಪರೆ ಇರುವುದು ಕೇರಳದಲ್ಲಿ ಎಡನೀರಲ್ಲಿ ಮಾತ್ರ ಆಗಿದೆ. ಶಿಕ್ಷಣ, ಧಾರ್ಮಿಕ ಹಾಗೂ ಸಾಂಸ್ಕøತಿಕ ವಲಯಗಳಲ್ಲಿ ಎಡನೀರು ಮಠದ ಕೊಡುಗೆ ಎಂದಿಗೂ ಅಜರಾಮರ. ಪ್ರಸಿದ್ದ ಪ್ರಾಸಿ ತಾಣವಾಗಿ ಗುರುತಿಸಿಕೊಂಡಿರುವ ಎಡನೀರು ಶ್ರೀಮಠದ ಮೂಲ ಆರಾಧನಾ ದೇವರು ಶ್ರೀದಕ್ಷಿಣಾಮೂರ್ತಿ ಗೋಪಾಲಕೃಷ್ಣ.
ಸಂವಿಧಾನ ಇರುವವರೆಗೆ ಶ್ರೀಗಳ ಹೆಸರು ಅಳಿಸಲಾರದ ಪುಟಗಳಲ್ಲಿ:
ಭಾರತದ ಇತಿಹಾಸದಲ್ಲಿ ಶ್ರೀಕೇಶವಾನಂದ ಭಾರತೀ ವರ್ಸಸ್ ಕೇರಳ ಸರ್ಕಾರ ದಾವೆ ಸಂವಿಧಾನ ತಿದ್ದುಪಡಿ ಮೇಲಿನ ಇತಿಮಿತಿಗಳ ನಿಯಂತ್ರಣದ ಬಗ್ಗೆ ಉಲ್ಲೇಖಿಸಿರುವುದಾಗಿದ್ದು ಈ ಮೂಲಕ ಎಡನೀರು ಶ್ರೀಮಠ ರಾಷ್ಟ್ರದ ಸಂವಿಧಾನ ಇರುವಷ್ಟು ಕಾಲ ಅಳಿಸಲಾರದ ಹೆಗ್ಗುರುತಿನೊಂದಿಗೆ ಇರಲಿದೆ ಎನ್ನವುದು ಗಡಿನಾಡಿನ ಹೆಮ್ಮೆ.