ಕಾಸರಗೋಡು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಕೃಷಿ-ಅರಣ್ಯ ಇಲಾಖೆಗಳ ವತಿಯಿಂದ ಜು.31ರ ಮುಂಚಿತವಾಗಿ 7,20.860 ಫಲ ನೀಡುವ ವೃಕ್ಷವಾಗಬಲ್ಲ ಸಸಿಗಳನ್ನು ನೆಡಲು ನಿರ್ದರಿಸಲಾಗಿದೆ. ಇದರ ಸಲುವಾಗಿ ಒಂದು ಕೋಟಿ ಸಸಿಗಳನ್ನು ಉತ್ಪಾದಿಸಿ ವಿತರಣೆ ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಇದರಲ್ಲಿ ಕೃಷಿ ಇಲಾಖೆ 352860 ಸಸಿಗಳನ್ನು, ಅರಣ್ಯ ಇಲಾಖೆ 410000 ಸಸಿಗಳನ್ನು ನೆಡಲಿವೆ. ರಾಷ್ಟ್ರೀಯ ನೌಕರಿ ಖಾತರಿ ಯೋಜನೆಯ ಸಹಕಾರದೊಂದಿಗೆ ಸಸಿ ನೆಡುವಿಕೆ ನಡೆಯಲಿದೆ. ಜೂ.5ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಈಗಾಗಲೇ ಆರಂಭಗೊಂಡಿದ್ದು, ಜು.31 ವರೆಗೆ ಕೃಷಿ ಇಲಾಖೆ ವತಿಯಿಂದ, ಈಗಾಗಲೇ ಆರಂಭಗೊಂಡಿದ್ದು, ಜು.7 ವರೆಗೆ ಸಾಮಾಜಿಕ ಅರಣ್ಯೀಕರಣ ವಿಭಾಗದಿಂದ ಪರಿಸರ ದಿನಾಚರಣೆ ನಡೆಯಲಿದೆ. ವಿವಿಧ ವಿಚಾರಗಳಲ್ಲಿ ಚರ್ಚೆ ನಡೆಸಲಾಯಿತು.
ಪಿ.ಎ.ಯು. ಯೋಜನೆ ನಿರ್ದೇಶಕ ಕೆ.ಪ್ರದೀಪನ್, ವಿ.ಎಫ್.ಪಿ.ಸಿ.ಕೆ. ಜಿಲ್ಲಾ ಪ್ರಬಂಧಕ ಸಿಂಧು. ಎಸ್.ನಾರಾಯಣನ್, ಕೃಷಿ ಸಹಾಯಕ ನಿರ್ದೇಶಕರಾದ ಶೈಲಜಾ, ಜಯಾರಾಣಿ ಮೊದಲಾದವರು ಉಪಸ್ಥಿತರಿದ್ದರು.