ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಮೂವರಿಗೆ ಕೋವಿಡ್ ಸೋಂಕು ಖಚಿತವಾಗಿದೆ. 4 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆಯ ಒಬ್ಬ ಮಹಿಳಾ ವೈದ್ಯೆಯೂ ಸೇರಿದಂತೆ ಮೂವರಿಗೆ ರೋಗ ಬಾಧಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಬಹರೈನ್ ನಿಂದ ಆಗಮಿಸಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ ನಿವಾಸಿ 30 ವರ್ಷದ ವ್ಯಕ್ತಿ, ಮಹಾರಾಷ್ಟ್ರದಿಂದ ಆಗಮಿಸಿದ್ದ ಚೆರುವತ್ತೂರು ಗ್ರಾಮ ಪಂಚಾಯತ್ ನಿವಾಸಿ 27 ವರ್ಷದ ವ್ಯಕ್ತಿ, 34 ವರ್ಷದ ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯೆಗೆ ಸೋಂಕು ಖಚಿತವಾಗಿದೆ. ವೈದ್ಯೆಗೆ ಸಂಪರ್ಕದಿಂದ ರೋಗ ತಗುಲಿದೆ.
ಕೋವಿಡ್ ಸೋಂಕು ಖಚಿತಗೊಂಡು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 4 ಮಂದಿ ಗುಣಮುಖರಾಗಿದ್ದಾರೆ. ವರ್ಕಾಡಿ ಗ್ರಾಮ ಪಂಚಾಯತ್ ನಿವಾಸಿ 27 ವರ್ಷದ ವ್ಯಕ್ತಿ, ಮಂಜೇಶ್ವರ ಗ್ರಾಮ ಪಂಚಾಯತ್ ನಿವಾಸಿ 22 ವರ್ಷದ ನಿವಾಸಿ, ಚೆಮ್ನಾಡ್ ಗ್ರಾಮ ಪಂಚಾಯತ್ ನಿವಾಸಿ 28 ವರ್ಷದ ವ್ಯಕ್ತಿ, ಚೆಮ್ನಾಡ್ ನಿವಾಸಿ 33 ವರ್ಷದ ವ್ಯಕ್ತಿ ಗುಣಮುಖರಾದವರು. ಇವರಲ್ಲಿ ಚೆಮ್ನಾಡ್ ನಿವಾಸಿ ಖತ್ತರ್ ನಿಂದ ಆಗಮಿಸಿದ್ದರು. ಇತರರು ಮಹಾರಾಷ್ಟ್ರ ದಿಂದ ಬಂದಿದ್ದರು.
ಜಿಲ್ಲೆಯಲ್ಲಿ ಒಟ್ಟು 3753 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3085 ಮಂದಿ, ಆಸ್ಪತ್ರೆಗಳಲ್ಲಿ 668 ಮಂದಿ ನಿಗಾದಲ್ಲಿದ್ದಾರೆ. ಬುಧವಾರ ನೂತನವಾಗಿ 258 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 381 ಮಂದಿ ತಮ್ಮ ನಿಗಾ ಅವಧಿ ಪೂರ್ಣ ಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟ 7662 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 6609 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಕೇರಳದಲ್ಲಿ 82 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಬುಧವಾರ 82 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 24 ಮಂದಿ ಗುಣಮುಖರಾಗಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ರೋಗ ಪೀಡಿತರಲ್ಲಿ 53 ಮಂದಿ ವಿದೇಶದಿಂದ ಬಂದವರು. ಇತರ ರಾಜ್ಯಗಳಿಂದ ಬಂದವರು 19 ಮಂದಿಗೆ ಸೋಂಕು ದೃಢಗೊಂಡಿದೆ. ಐದು ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾ„ಸಿದೆ. ಐದು ಮಂದಿಗೆ ಸಂಪರ್ಕದಿಂದ ರೋಗ ಹರಡಿದೆ.
ಕಾಸರಗೋಡು ಜಿಲ್ಲೆ-3, ಕಣ್ಣೂರು-2, ಕಲ್ಲಿಕೋಟೆ-7, ಮಲಪ್ಪುರಂ-11, ಪಾಲ್ಘಾಟ್-5, ತೃಶ್ಶೂರು-4, ಎರ್ನಾಕುಳಂ-5, ಇಡುಕ್ಕಿ-9, ಕೋಟ್ಟಯಂ-8, ಆಲಪ್ಪುಳ-7, ಪತ್ತನಂತಿಟ್ಟ-2, ಕೊಲ್ಲಂ-5, ತಿರುವನಂತಪುರ-14 ಮಂದಿಗೆ ರೋಗ ಬಾ„ಸಿದೆ.
ರಾಜ್ಯದಲ್ಲಿ ಈ ವರೆಗೆ 1494 ಮಂದಿಗೆ ರೋಗ ಬಾಧಿಸಿದ್ದು, ಪ್ರಸ್ತುತ 632 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,60,304 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 1440 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲಿದ್ದರೆ, 1,58,864 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಬುಧವಾರ ಶಂಕಿತ 241 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 73,712 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 69,606 ನೆಗೆಟಿವ್ ಆಗಿದೆ. ತಿರುವನಂತಪುರ-6, ಕಲ್ಲಿಕೋಟೆ-5, ಕಾಸರಗೋಡು-4, ಕೋಟ್ಟಯಂ-3, ಕೊಲ್ಲಂ-2, ಕಣ್ಣೂರು-2, ತೃಶ್ಶೂರು-1, ಆಲಪ್ಪುಳ-1 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 131 ವಿರುದ್ಧ ಕೇಸು :
ಮಾಸ್ಕ್ ಧರಿಸಿದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 131 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂ„ಸಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 4404 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದ್ದು, ದಂಡ ವಸೂಲಿ ಮಾಡಲಾಗಿದೆ.
ನಿಷೇಧಾಜ್ಞೆ ಉಲ್ಲಂಘನೆ : 2 ಕೇಸು ದಾಖಲು :
ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 2 ಕೇಸುಗಳನ್ನು ದಾಖಲಿಸಲಾಗಿದೆ. 6 ಮಂದಿಯನ್ನು ಬಂ„ಸಲಾಗಿದ್ದು, ಒಂದು ವಾಹನ ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಬೇಡಗಂ ಠಾಣೆಯಲ್ಲಿ 1 ಕೇಸು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2568 ಕೇಸುಗಳನ್ನು ದಾಖಲಿಸಲಾಗಿದೆ. 3230 ಮಂದಿಯನ್ನು ಬಂಧಿಸಲಾಗಿದ್ದು, 1099 ವಾಹನಗಳನ್ನು ವಶಪಡಿಸಲಾಗಿದೆ.