ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 9 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 7 ಮಂದಿಗೆ ರೋಗಮುಕ್ತಿಯಾಗಿದೆ.
ಸೋಂಕು ತಗುಲಿದವರಲ್ಲಿ ಒಬ್ಬರಿಗೆ ಸಂಪರ್ಕದಿಂದ, ಮಹಾರಾಷ್ಟ್ರ ದಿಂದ ಬಂದ 4 ಮಂದಿಗೆ, ವಿದೇಶಗಳಿಂದ ಆಗಮಿಸಿದ 3 ಮಂದಿಗೆ. ಚೆನ್ನೈಯಿಂದ ಬಂದ ಒಬ್ಬರಿಗೆ ಸೋಂಕು ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಮಹಾರಾಷ್ಟ್ರದಿಂದ ಬಂದ ಪುತ್ತಿಗೆ ಗ್ರಾಮ ಪಂಚಾಯತ್ ನಿವಾಸಿ 62 ವರ್ಷದ ವ್ಯಕ್ತಿ, ಪಡನ್ನ ಗ್ರಾಮ ಪಂಚಾಯತ್ ನಿವಾಸಿ 60 ವರ್ಷದ ವ್ಯಕ್ತಿ, ಕುಂಬ್ಡಾಜೆ ಗ್ರಾಮ ಪಂಚಾಯತ್‍ನ 41 ವರ್ಷದ ನಿವಾಸಿ, ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 32 ವರ್ಷದ ವ್ಯಕ್ತಿಗೆ ರೋಗ ಖಚಿತವಾಗಿದೆ.
ಕುವೈತ್‍ನಿಂದ ಆಗಮಿಸಿದ್ದ ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 43 ವರ್ಷದ ವ್ಯಕ್ತಿ, ಅಜಾನೂನು ನಿವಾಸಿ 47 ವರ್ಷದ ವ್ಯಕ್ತಿ, 7 ವರ್ಷದ ಈತನ ಪುತ್ರನಿಗೆ ರೋಗ ಬಾಧಿಸಿದೆ.
ಚೆನ್ನೈಯಿಂದ ಆಗಮಿಸಿದ್ದ ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನಿವಾಸಿ 20 ವರ್ಷದ ವ್ಯಕ್ತಿ, ಕಿನಾನೂರು-ಕರಿಂದಳಂ ನಿವಾಸಿ 28 ವರ್ಷದ ವ್ಯಕ್ತಿಗೆ ಸಂಪರ್ಕ ದಿಂದ ರೋಗ ಹರಡಿದೆ.
7 ಮಂದಿಗೆ ರೋಗಮುಕ್ತಿ :
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಕೋವಿಡ್ ಸೋಂಕು ಖಚಿತಗೊಂಡಿದ್ದ 7 ಮಂದಿ ರೋಗದಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪೈವಳಿಕೆ ಗ್ರಾಮ ಪಂಚಾಯತ್ ನಿವಾಸಿಗಳಾದ 28, 44, 47 ವರ್ಷದ ವ್ಯಕ್ತಿಗಳು, ಕುಂಬಳೆ ಗ್ರಾಮ ಪಂಚಾಯತ್ ನಿವಾಸಿಗಳಾದ 41, 47,30 ವರ್ಷದ ವ್ಯಕ್ತಿಗಳು, ಮಂಗಲ್ಪಾಡಿ ನಿವಾಸಿ 32 ವರ್ಷದ ವ್ಯಕ್ತಿ ಗುಣಮುಖರಾದವರು.
ಜಿಲ್ಲೆಯಲ್ಲಿ 3876 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3221 ಮಂದಿ, ಆಸ್ಪತ್ರೆಗಳಲ್ಲಿ 655 ಮಂದಿ ನಿಗಾದಲ್ಲಿದ್ದಾರೆ. 13 ಮಂದಿ ಮಂಗಳವಾರ ನೂತನವಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕೇರಳದಲ್ಲಿ 86 ಮಂದಿಗೆ ಸೋಂಕು :
ರಾಜ್ಯದಲ್ಲಿ ಮಂಗಳವಾರ 86 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ದೃಢೀಕರಿಸಿದ ದಿನವಾಗಿದೆ ಮಂಗಳವಾರ.
ಮಲಪ್ಪುರ ಜಿಲ್ಲೆಯಲ್ಲಿ 15, ಆಲಪ್ಪುಳ-10, ಕಾಸರಗೋಡು-9, ಕೊಲ್ಲಂ-8, ತಿರುವನಂತಪುರ-7, ಕೋಟ್ಟಯಂ-6, ತೃಶ್ಶೂರು-6, ವಯನಾಡು-6, ಪಾಲ್ಘಾಟ್-5, ಕಲ್ಲಿಕೊಟೆ-5, ಕಣ್ಣೂರು-5, ಎರ್ನಾಕುಳಂ-3, ಪತ್ತನಂತಿಟ್ಟ-1 ಎಂಬಂತೆ ರೋಗ ಬಾಧಿಸಿದೆ.
ಈ ಪೈಕಿ 46 ಮಂದಿ ವಿದೇಶದಿಂದ(ಕುವೈಟ್-21, ಯುಎಇ-16, ಸೌದಿ ಅರೇಬಿಯಾ-6, ಮಾಲಾದ್ವೀಪ-1, ಖತ್ತರ್-1, ಓಮಾನ್-1) ಬಂದವರು. 26 ಮಂದಿ ಇತರ ರಾಜ್ಯಗಳಿಂದ(ಮಹಾರಾಷ್ಟ್ರ-9, ತಮಿಳುನಾಡು-7, ಕರ್ನಾಟಕ-5, ದೆಹಲಿ-3, ಗುಜರಾತ್-1, ರಾಜಸ್ತಾನ-1) ಬಂದವರು. 12 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ವಯನಾಡು ಜಿಲ್ಲೆಯ 6, ಮಲಪ್ಪುರಂ ಜಿಲ್ಲೆಯ 4, ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ತಲಾ ಒಬ್ಬರಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ಪಾಲ್ಘಾಟ್ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತೆಗೆ ರೋಗ ಬಾ„ಸಿದೆ. ಇದೇ ವೇಳೆ ಗಂಭೀರ ಶ್ವಾಸಕೋಶ ರೋಗದಿಂದ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾದ ನಾಲಾಂಜಿರ ನಿವಾಸಿ ರೆ.ಫಾ.ಕೆ.ಜಿ.ವರ್ಗೀಸ್(77) ಅವರಿಗೆ ಕೋವಿಡ್ 19 ಖಾತರಿ ಪಡಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸಾವಿಗೀಡಾದವರ ಸಂಖ್ಯೆ 11 ಕ್ಕೇರಿತು.
ಇದೇ ಸಂದರ್ಭದಲ್ಲಿ ಮಂಗಳವಾರ 19 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ಮತ್ತು ಕೋಟ್ಟಯಂ ಜಿಲ್ಲೆಯಲ್ಲಿ ತಲಾ 7 ಮಂದಿ, ತಿರುವನಂತಪುರ-2, ಪತ್ತನಂತಿಟ್ಟ, ಮಲಪ್ಪುರಂ, ಕಣ್ಣೂರು ಜಿಲ್ಲೆಯ ತಲಾ ಒಬ್ಬರು ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 774 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತನಕ 627 ಮಂದಿ ಗುಣಮುಖರಾಗಿದ್ದಾರೆ.
ವಿವಿಧ ಜಿಲ್ಲೆಗಳಲ್ಲಾಗಿ 1,47,010 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 1,45,670 ಮಂದಿ ಮನೆಗಳಲ್ಲೂ ಹಾಗು ಇನ್‍ಸ್ಟಿಟ್ಯೂಷನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1340 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಮಂಗಳವಾರ ಶಂಕಿತ 200 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ತನಕ 71,068 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 67,249 ನೆಗೆಟಿವ್ ಆಗಿದೆ.
ಮಾಸ್ಕ್ ಧರಿಸದ 140 ಮಂದಿ ವಿರುದ್ಧ ಕೇಸು :
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 140 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 4273 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದ್ದು, ತಲಾ 500 ರೂ.ನಂತೆ ದಂಡ ವಸೂಲಿ ಮಾಡಲಾಗಿದೆ.
ನಿಷೇಧಾಜ್ಞೆ ಉಲ್ಲಂಘನೆ : 5 ಕೇಸು ದಾಖಲು :
ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ 5 ಕೇಸುಗಳನ್ನು ದಾಖಲಿಸಲಾಗಿದೆ. 7 ಮಂದಿಯನ್ನು ಬಂ„ಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕಾಸರಗೋಡು 1, ಚಂದೇರ 1, ಚೀಮೇನಿ 1, ರಾಜಪುರಂ 1 ಕೇಸು ದಾಖಲಾಗಿವೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2566 ಕೇಸುಗಳನ್ನು ದಾಖಲಿಸಲಾಗಿದೆ. 3224 ಮಂದಿಯನ್ನು ಬಂಧಿಸಲಾಗಿದ್ದು, 1098 ವಾಹನಗಳನ್ನು ವಶಪಡಿಸಲಾಗಿದೆ.