HEALTH TIPS

ಜೂ.9 ತಡರಾತ್ರಿಯಿಂದ ಟ್ರಾಲಿಂಗ್ ನಿಷೇಧ


            ಕಾಸರಗೋಡು: 2020ರ ಟ್ರಾಲಿಂಗ್ ನಿಷೇಧ ಜೂ.9 ತಡರಾತ್ರಿ  ಜಾರಿಗೆ ಬರಲಿದೆ. ಜು.31 ತಡರಾತ್ರಿ ವರೆಗೆ ಇದು ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
       ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.   ಟ್ರಾಲಿಂಗ್ ನಿಷೇಧ ಅವಧಿಯಲ್ಲಿ ಮೀನುಗಾರರಿಗೆ ಉಚಿತ ಪಡಿತರ ಸಾಮಾಗ್ರಿ ವಿತರಣೆ ಸಂಬಂಧ ಕ್ರಮ ಕೈಗೊಳ್ಳಲು ಜಿಲ್ಲಾ ಸಪ್ಲೈ ಅಧಿಕಾರಿಗೆ ಹೊಣೆ ನೀಡಲಾಗಿದೆ. ಬೆಸ್ತರ ಮಾಲೀಕತ್ವದಲ್ಲಿ ಕಡಲತೀರಗಳಲ್ಲಿರುವ ತೆಂಗಿನಮರಗಳಿಗೆ ವಿಮೆ ಸೌಲಭ್ಯ ಒದಗಿಸಲು ಪ್ರಧಾನ ಕೃಷಿ ಅಧಿಕಾರಿ, ಕಡಲ್ಕೊರೆತ ಸಹಿತ ವಿಕೋಪಗಳಲ್ಲಿ ಸಂರಕ್ಷಣೆ ಒದಗಿಸುವ ಹೊಣೆಯನ್ನು ಕಂದಾಯ ಸಿಬ್ಬಂದಿಗೆ ಹೊಣೆ ನೀಡಲಾಗಿದೆ. ಜಿಲ್ಲೆಯ ಎರಡು ಕರಾವಳಿ ಠಾಣೆಗಳ ವ್ಯಾಪ್ತಿಯಲ್ಲಿ ಎರಡು ರಕ್ಷಣಾ ಬೋಟು ಸಜ್ಜುಗೊಂಡಿದೆ. ಹೆಚ್ಚುವರಿ ಒಂದು ಸ್ಪೀಡ್ ಬೋಟನ್ನೂ ಸಿದ್ಧಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
      ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪಿ.ಪಿ.ಸತೀಶನ್, ಮತ್ಸ್ಯ ಫೆಡ್ ನಿರ್ದೇಶಕ ಕಾಟ್ಟಾಡಿ ಕುಮಾರನ್, ಜಿಲ್ಲಾ ಸಪ್ಲೈ ಅಧಿಕಾರಿ ವಿ.ಕೆ.ಶಶಿಧರನ್, ಹಾರ್ಬರ್ ಇಂಜಿನಿಯರಿಂಗ್ ಕಾರ್ಯಕಾರಿ ಇಂಜಿನಿಯರ್ ಎಂ.ಎ.ರಾಜೀವನ್, ಮತ್ಸ್ಯ ಫೆಡ್ ಯೋಜನೆ ಅಧಿಕಾರಿ ಸಂಗೀತಾ ಪಿ. ಮೊದಲಾದವರು ಉಪಸ್ಥಿತರಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries