ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. 6 ಮಂದಿ ಮಹಾರಾಷ್ಟ್ರದಿಂದ ಬಂದವರು, 5 ಮಂದಿ ವಿದೇಶದಿಂದ ಆಗಮಿಸಿದವರು, ಒಬ್ಬರಿಗೆ ಸಂಪರ್ಕದಿಂದ ರೋಗ ತಗುಲಿದೆ. ಈಗ ಜಿಲ್ಲೆಯಲ್ಲಿ 109 ಮಂದಿ ಕೋವಿಡ್ ಸೋಂಕು ಖಚಿತಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ ಮಂಗಲ್ಪಾಡಿ ಗ್ರಾಮ ಪಂಚಾಯತ್ ನಿವಾಸಿ 50 ವರ್ಷದ ವ್ಯಕ್ತಿ, ಅವರ 16 ವರ್ಷದ ಪುತ್ರಿ, 21 ವರ್ಷದ ಮಹಿಳೆ, ಪಡನ್ನ ಗ್ರಾಮ ಪಂಚಾಯತ್‍ನ 44 ವರ್ಷದ ವ್ಯಕ್ತಿ, ಚೆಂಗಳ ಗ್ರಾಮ ಪಂಚಾಯತ್ ನಿವಾಸಿ 42 ವರ್ಷದ ವ್ಯಕ್ತಿ, ವಲಿಯಪರಂಬ ನಿವಾಸಿ 48 ವರ್ಷದ ನಿವಾಸಿ ರೋಗ ಬಾಧಿತರು.
ಕುವೈತ್‍ನಿಂದ ಆಗಮಿಸಿದ 34 ವರ್ಷದ ನೀಲೇಶ್ವರ ನಗರಸಭೆ ವ್ಯಾಪ್ತಿಯ ನಿವಾಸಿ, 24 ವರ್ಷದ ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ನಿವಾಸಿ, 25 ವರ್ಷದ ಅಜಾನೂರು ನಿವಾಸಿ, ದುಬಾಯಿಯಿಂದ ಆಗಮಿಸಿದ 21 ವರ್ಷದ ಚೆಮ್ನಾಡ್ ಗ್ರಾಮ ಪಂಚಾಯತ್ ನಿವಾಸಿ ಮಹಿಳೆ, ಶಾರ್ಜಾದಿಂದ ಆಗಮಿಸಿದ 48 ವರ್ಷದ ಉದುಮ ಪಂಚಾಯತ್ ನಿವಾಸಿ ರೋಗ ಬಾಧಿತರಾಗಿರುವರು. ಕಾಸರಗೋಡು ನಗರಸಭೆ ವ್ಯಾಪ್ತಿಯ 25 ವರ್ಷದ ವ್ಯಕ್ತಿಗೆ ಸಂಪರ್ಕದಿಂದ ರೋಗ ಖಚಿತವಾಗಿದೆ.
ಜಿಲ್ಲೆಯಲ್ಲಿ ಒಟ್ಟು 3940 ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3269 ಮಂದಿ, ಆಸ್ಪತ್ರೆಗಳಲ್ಲಿ 671 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ನೂತನವಾಗಿ 255 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 739 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ.
ಕೇರಳದಲ್ಲಿ 94 ಮಂದಿಗೆ ಸೋಂಕು :
ರಾಜ್ಯದಲ್ಲಿ ಗುರುವಾರ 94 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 39 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ರೋಗ ಬಾಧಿತರಲ್ಲಿ 47 ಮಂದಿ ವಿದೇಶದಿಂದ ಬಂದಿದ್ದು, 37 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದಿಂದ 7 ಮಂದಿಗೆ ರೋಗ ಬಾಧಿಸಿದೆ. ಮಹಾರಾಷ್ಟ್ನದಿಂದ ಬಂದ 23, ತಮಿಳುನಾಡು-8, ದೆಹಲಿ-3, ಗುಜರಾತ್-2, ರಾಜಸ್ತಾನ-1 ಮಂದಿಗೆ ರೋಗ ಬಾ„ಸಿದೆ. ಪತ್ತಂನತಿಟ್ಟ-14, ಕಾಸರಗೋಡು-12, ಕೊಲ್ಲಂ-11, ಕಲ್ಲಿಕೋಟೆ-10, ಆಲಪ್ಪುಳ-8, ಮಲಪ್ಪುರಂ-8, ಪಾಲ್ಘಾಟ್-7, ಕಣ್ಣೂರು-6, ಕೋಟ್ಟಯಂ-5, ತಿರುವನಂತಪುರ-5, ತೃಶ್ಶೂರು-4, ಎರ್ನಾಕುಳಂ-2, ವಯನಾಡು-2 ಎಂಬಂತೆ ರೋಗ ಬಾಧಿಸಿದೆ.
ಚೆನ್ನೈಯಿಂದ ಬಂದ ಪಾಲ್ಘಾಟ್ ನಿವಾಸಿ ಮೀನಾಕ್ಷಿ ಅಮ್ಮ, ಅಬುದಾಬಿಯಿಂದ ಬಂದ ಎಡಪಾಲ್ ನಿವಾಸಿ ಶಬ್ನಾಸ್, ಕೊಲ್ಲಂ ಜಿಲ್ಲೆಯ ಕಾವನಾಡು ನಿವಾಸಿ ಸೇವ್ಯರ್ ಸಾವಿಗೀಡಾದರು. ರಾಜ್ಯದಲ್ಲಿ ಈ ವರೆಗೆ ಒಟ್ಟು ಸತ್ತವರ ಸಂಖ್ಯೆ 14.
ರಾಜ್ಯದಲ್ಲಿ ಈ ವರೆಗೆ 1588 ಮಂದಿಗೆ ಕೊರೊನಾ ಸೋಂಕು ಬಾಧಿಸಿದ್ದು, ಪ್ರಸ್ತುತ 884 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ 170065 ಮಂದಿ ನಿಗಾವಣೆಯಲ್ಲಿದ್ದಾರೆ. 168578 ಮಂದಿ ಮನೆಗಳಲ್ಲೂ, 1487 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಗುರುವಾರ ಶಂಕಿತ 225 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವರೆಗೆ 76383 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 72139 ನೆಗೆಟಿವ್ ಆಗಿದೆ.
ಪಾಲ್ಘಾಟ್-13, ಮಲಪ್ಪುರಂ-8, ಕಣ್ಣೂರು-7, ಕಲ್ಲಿಕೋಟೆ-5, ತೃಶ್ಶೂರು-2, ವಯನಾಡು-2, ತಿರುವನಂತಪು-1, ಪತ್ತನಂತಿಟ್ಟ-1 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 128 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 128 ಮಂದಿ ವಿರುದ್ಧ ಕೇಸು ದಾಖಲಾಗಿದೆ. ಜಿಲ್ಲೆಯಲ್ಲಿ ಈ ಪ್ರಕರಣಗಳಿಗೆ ಸಂಬಂಧಿಸಿ ಈ ವರೆಗೆ ಒಟ್ಟು 4532 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ಹೇರಲಾಗಿದೆ.
ನಿಷೇಧಾಜ್ಞೆ ಉಲ್ಲಂಘನೆ : 5 ಕೇಸು ದಾಖಲು :
ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ 5 ಕೇಸುಗಳನ್ನು ದಾಖಲಿಸಲಾಗಿದೆ. 6 ಮಂದಿಯನ್ನು ಬಂ„ಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಆದೂರು ಪೆÇಲೀಸ್ ಠಾಣೆಯಲ್ಲಿ 1 ಕೇಸು, ಮೇಲ್ಪರಂಬ 1, ಬೇಕಲ 1, ನೀಲೇಶ್ವರ 1, ಚಂದೇರ 1 ಕೇಸುಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಈ ಪ್ರಕರಣಗಳಿಗೆ ಸಂಬಂ„ಸಿ ಈ ವರೆಗೆ ಒಟ್ಟು 2568 ಕೇಸುಗಳು ದಾಖಲಾಗಿವೆ. 3236 ಮಂದಿಯನ್ನು ಬಂ„ಸಲಾಗಿದ್ದು, 1102 ವಾಹನಗಳನ್ನು ವಶಪಡಿಸಲಾಗಿದೆ.