ಕಾಸರಗೋಡು: ಇಂದು ಮಧ್ಯಾಹ್ನ ಪ್ರಕಟಗೊಂಡ 2019-20ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕಾಸರಗೋಡು ಜಿಲ್ಲೆ 98.61 ಶೇ. ಫಲಿತಾಂಶ ದಾಖಲಿಸಿದೆ.
ಪರೀಕ್ಷೆ ಬರೆದ 19599 ವಿದ್ಯಾರ್ಥಿಗಳಲ್ಲಿ 19326 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದರು. ಜಿಲ್ಲೆಯ ಸರ್ಕಾರಿ ಶಾಲೆಗಳಿಂದ 10780, ಅನುದಾನಿತ ಶಾಲೆಗಳಿಂದ 6603 ಮತ್ತು ಅನುದಾನರಹಿತ ಶಾಲೆಗಳಿಂದ 1943 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸರ್ಕಾರಿ ಶಾಲೆಯಿಂದ 929, ಅನುದಾನಿತ ಶಾಲೆಯಿಂದ 633 ಮತ್ತು ಅನುದಾನರಹಿತ ಶಾಲೆಯಿಂದ 123 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗಳಿಸಿಕೊಂಡಿರುವರು.
ಕಾಞಂಗಾಡ್ ವಿದ್ಯಾಭ್ಯಾಸ ಜಿಲ್ಲೆಯಲ್ಲಿ ಶೇ.99.24 ಮತ್ತು ಕಾಸರಗೋಡು ಶೈಕ್ಷಣಿಕ ಜಿಲ್ಲೆಯ 98.08 ಶೇ ವಿದ್ಯಾರ್ಥಿಗಳು ಉತ್ತೀರ್ಣಗೊಂಡರು. ಕಾಸರಗೋಡು ಶಿಕ್ಷಣ ಜಿಲ್ಲೆಯ 572 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದಿರುವರು.
49 ಸರ್ಕಾರಿ ಶಾಲೆಗಳಲ್ಲಿ ಶೇ.ನೂರು ಫಲಿತಾಂಶ:
ಜಿಲ್ಲೆಯ 49 ಸರ್ಕಾರಿ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿ ಗರಿಮೆ ಮೆರೆದಿವೆ. ಜೊತೆಗೆ 12 ಅನುದಾನಿತ ಶಾಲೆಗಳು ಮತ್ತು 20 ಅನುದಾನರಹಿತ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದೆ. ಜಿಲ್ಲೆಯ ಒಟ್ಟು 81 ಶಾಲೆಗಳು ಈ ವರ್ಷ ಶೇಕಡಾ 100 ರಷ್ಟು ಫಲಿತಾಂಶ ಗಳಿಸಿತು.
ಯಶಸ್ಸಿನ ಶೇಕಡಾವಾರು 0.9 ಹೆಚ್ಚಳ
ಯಶಸ್ಸಿನ ಪ್ರಮಾಣವು ಕಳೆದ ವರ್ಷದ ಫಲಿತಾಂಶಕ್ಕಿಂತ ಶೇಕಡಾ 0.9 ಹೆಚ್ಚಾಗಿದೆ. ಜಿಲ್ಲೆಯು ಶೇಕಡಾ 98.61 ಸ್ಥಾನ ಗಳಿಸಿದೆ.