HEALTH TIPS

"ಮಾಣಿ" ಹೊರಕ್ಕೆ - ಎತ್ತಿಕೊಳ್ಳುವವರು ಯಾರು!!?


       ತಿರುವನಂತಪುರ: ಕೇರಳ ಕಾಂಗ್ರೆಸ್ ಬಣದ ಜೋಸ್ ಕೆ ಮಾಣಿ ಬಣ ನಾಟಕೀಯ ವಿದ್ಯಮಾನವೊಂದರಲ್ಲಿ ನಿನ್ನೆ ಯುಡಿಎಫ್ ನಿಂದ ಹೊರಬಂದಿದ್ದು ಯಾವ ಪಕ್ಷದೊಂದಿಗೆ ಸೇರಲಿದೆ ಎಂಬ ಕುತೂಹಲ ಮನೆಮಾಡಿದೆ.
       ಕೋಟ್ಟಯಂ ಜಿಲ್ಲಾ ಪಂಚಾಯತಿ ಹುದ್ದೆಯನ್ನು ಪರ್ಯಾಯ ಅವಧಿಗೆ ಜೋಸೆಫ್ ಬಣಕ್ಕೆ ನೀಡಲು ತಯಾರಾಗದ ಹಿನ್ನೆಲೆಯಲ್ಲಿ ಯುಡಿಎಫ್ ನೊಂದಿಗೆ ಉಳಿಯಲು ಅರ್ಹತೆ ಇಲ್ಲ ಎಂದು ಯುಡಿಎಫ್ ನಾಯಕತ್ವ ಹೇಳಿದೆ. ಯುಡಿಎಫ್ ಕನ್ವೀನರ್ ಬೆನ್ನಿ ಬೆಹಾನನ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
         ಯುಡಿಎಫ್ ಈ ಹಿಂದೆ ತೀರ್ಮಾನಿಸಿದ ಅಂಶಗಳನ್ನು  ಜೋಸ್ ಬಣವು ನಿರ್ವಹಿಸಲಿಲ್ಲ ಎಂದು ಯುಡಿಎಫ್ ನಾಯಕತ್ವ ಹೇಳಿದೆ. ಕೊಟ್ಟಾಯಂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುದ್ದೆಯ ವಿವಾದದ ಹಿನ್ನೆಲೆಯಲ್ಲಿ ಒಕ್ಕೂಟವು ಜೋಸ್ ಬಣವನ್ನು ವಜಾಗೊಳಿಸಿದೆ.
        ಅವಧಿ ಪೂರ್ಣಗೊಂಡಿದ್ದರೂ ಜೋಸ್ ಬಣ ಜೋಸೆಫ್ ಬಣಕ್ಕೆ ಹುದ್ದೆ ಬಿಡಲು ತಯಾರಿರಲಿಲ್ಲ  ಎಂದು ಬೆನ್ನಿ ಬೆಹಾನನ್ ಮಾಧ್ಯಮಗಳಿಗೆ ತಿಳಿಸಿದರು. ಈ ಹಿಂದೆ, ಸ್ಥಳೀಯ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಥಾನಗಳ ಬಗ್ಗೆ ತಿಳಿಯದೆ ಅಧ್ಯಕ್ಷರು ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಜೋಸ್ ಬಣ ಸ್ಪಷ್ಟಪಡಿಸಿದೆ ಎಂಬ ವರದಿಗಳು ಬಂದಿದ್ದವು. ಜಿಲ್ಲಾ ಪಂಚಾಯತ್ ವಿಷಯದಲ್ಲಿ ತಾವು ಒಪ್ಪಂದಕ್ಕೆ ಬಂದಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರೂ, ಜೋಸ್ ಬಣ ಅದನ್ನು ತಿರಸ್ಕರಿಸಿತು.
       ಕೊಟ್ಟಾಯಂ ಜಿಲ್ಲಾ ಪಂಚಾಯತ್‍ನ ಸ್ಥಾನಮಾನದ ಬದಲಾವಣೆಯ ದೃಷ್ಟಿಯಿಂದ ಜೋಸ್‍ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಮಾನವನ್ನು ಜೋಸೆಫ್‍ಗೆ ಹಸ್ತಾಂತರಿಸಬೇಕಿತ್ತು. ಆದರೆ ಜೋಸ್ ಕೆ ಮಣಿ ಸಿದ್ಧವಾಗಿಲ್ಲ. ಯುಡಿಎಫ್ ನಾಯಕತ್ವವು ಜೋಸ್ ಬಣವನ್ನು ಹಲವಾರು ಬಾರಿ ಸಂಧಾನ ನಡೆಸಿತ್ತಾದರೂ ಒಮ್ಮತಕ್ಕೆ ಬರುವಲ್ದಲಿ ವಿಫಲವಾಗಿ ಈ ನಿರ್ಧಾರ ಹೊರಬಿದ್ದೆ.
    ಈ ಮಧ್ಯೆ ಇಬ್ಬರು ಶಾಸಕರು, ನಾಲ್ವರು ಸಂಸದರಿರುವ ಮಾಣಿ ಬಣವನ್ನು ಬಗಲಿಗೆ ಹಾಕಿಕೊಳ್ಳುವ ಕಸರತ್ತು ಎಲ್ ಡಿ ಎಫ್ ಮತ್ತು ಬಿಜೆಪಿಯಲ್ಲಿ ನಡೆದಿದೆ ಎನ್ನಲಾಗಿದೆ. ಸಿಪಿಎಂ ಮತ್ತು ಸಿಪಿಐ ಸೆಕ್ರಟರಿಯೇಟ್ ಗಳು ಮೇಲ್ನೋಟಕ್ಕೆ ನಿರಾಸಕ್ತರಂತೆ ವರ್ತಿಸಿದ್ದರೂ, ನಿನ್ನೆ ಸಂಜೆ ಸಿಎಂ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪಿಣರಾಯಿ ವಿಜಯನ್ ಮಾತನಾಡಿ ರಾಜಕೀಯದಲ್ಲಿ ಏನೂ ಸಂಭವಿಸಬಹುದೆಂಬ ಮಾತುಗಳನ್ನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
     ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮಾತನಾಡಿ ಮೋದಿಯವರ ತತ್ವಗಳಿಗೆ ಹೊಂದಿಕೆಯಾಗುವುದಾದರೆ ಬಿಜೆಪಿ ಬಾಗಿಲು ತೆರೆದಿರುತ್ತದೆ ಎಂದು ಪ್ರತಿಕ್ರಿಯಿಸಿರುವುದು ಮತ್ತಷ್ಟು ರೋಚಕತೆಗೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries