ಕೊಚ್ಚಿ: ಮಲೆಯಾಳದ ಖ್ಯಾತ ಚಿತ್ರತಾರೆ ಪೃಥ್ವಿರಾಜ್ ಸುಕುಮಾರನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರದ ಚಿತ್ರೀಕರಣಕ್ಕಾಗಿ ಬೋರ್ಡಾನ್ ಗೆ ತೆರಳಿ ಕೋವಿಡ್ ಕಾರಣ ಹಿಂತಿರುಗಿದ ಚಿತ್ರ ತಂಡದ ನಿರ್ಮಾಪಕರೋರ್ವರಿಗೆ ಕೋವಿಡ್ ಬಾಧಿಸಿರುವುದು ಖಚಿತಗೊಂಡಿದೆ. ಮೇ 22 ರಂದು ವಿಶೇಷ ವಿಮಾನದಲ್ಲಿ ಕೇರಳಕ್ಕೆ ಬಂದ ತಂಡದಲ್ಲಿದ್ದ ಅವರಿಗೆ ಬಳಿಕ ನಡೆಸಿದ ರೋಗನಿರ್ಣಯ ಪರೀಕ್ಷೆ ಧನಾತ್ಮಕವಾಗಿ ಆತಂಕ ಮೂಡಿಸಿದೆ.
ಬೆಂಜಮಿನ್ ಅವರ ಕಾದಂಬರಿ ಗೋಟ್ ಲೈಫ್ ಚಿತ್ರದ ಚಿತ್ರೀಕರಣಕ್ಕಾಗಿ ನಟ ಪೃಥ್ವಿರಾಜ್ ಮತ್ತು ನಿರ್ದೇಶಕ ಬ್ಲೆಸಿ ಜೋರ್ಡಾನ್‍ಗೆ ತೆರಳಿದ್ದರು. ಈ ಸಂದರ್ಭ ಜಗತ್ತಿಗೆ ಬಂದೆರಗಿದ ಲಾಕ್‍ಡೌನ್ ಕಾರಣ ವಿದೇಶದಲ್ಲಿ ಸಿಕ್ಕಿಬಿದ್ದರು. ಜೋರ್ಡಾನ್‍ನಲ್ಲಿಯೂ ಸಹ, ಲಾಕ್‍ಡೌನ್‍ನಿಂದ ಶೂಟಿಂಗ್‍ಗೆ ಅಡ್ಡಿಯಾಯಿತು. ತರುವಾಯ, ಅವರ ವೀಸಾದ ಅವಧಿಯನ್ನು ವಿಸ್ತರಿಸಲಾಯಿತು. ಇದರೊಂದಿಗೆ ಏಪ್ರಿಲ್ 24 ರಂದು ಶೂಟಿಂಗ್ ಪುನರಾರಂಭವಾಯಿತು. ಏಪ್ರಿಲ್ ಎರಡನೇ ವಾರದಲ್ಲಿ ಸದಸ್ಯರ ವೀಸಾಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ, ಎರಡೂ ದೇಶಗಳ ಸರ್ಕಾರಗಳು ಮಧ್ಯಪ್ರವೇಶಿಸಿ ತಮ್ಮ ವೀಸಾವನ್ನು ವಿಸ್ತರಿಸಿದವು. ಕೋವಿಡ್ ಆತಂಕದ ಬಗ್ಗೆ ಫಿಲ್ಮ್ ಚೇಂಬರ್ ತಿಳಿಸಿದ ನಂತರ ಸಚಿವ ಎ.ಕೆ.ಬಾಲನ್ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಲೀಧರನ್ ಚಿತ್ರ ತಂಡವನ್ನು ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಮೇ 22 ರಂದು ರೋಮ್‍ನಿಂದ ವಂದೇ ಭಾರತ್ ವಿಮಾನದಲ್ಲಿ ಮರಳಿದರು.
ಏತನ್ಮಧ್ಯೆ, ಕೇರಳಕ್ಕೆ ಮರಳಿದ ಮತ್ತು ಕ್ವಾರಂಟೈನ್ ಗೊಳಗಾಗಿದ್ದ ಪೃಥ್ವಿರಾಜ್ ಅವರ ಕೋವಿಡ್ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವೆಂದು ವರದಿಯಾಗಿತ್ತು. ವಿಮಾನ ನಿಲ್ದಾಣದಿಂದ ಚಿತ್ರ ತಂಡ ನಿರೀಕ್ಷಣಾ ಕೇಂದ್ರದಲ್ಲಿ ಕ್ವಾರಂಟೈನ್ ಅವಧಿ ಮುಗಿಸಿತ್ತು.
ಆದರೆ ತಂಡದ ಸದಸ್ಯರೊಬ್ಬರಿಗೆ ಇದೀಗ ಸೋಂಕು ದೃಢಪಟ್ಟಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.