ಕಾಸರಗೋಡು: ಮಲಪ್ಪುರಂ ಜಿಲ್ಲೆಯಲ್ಲಿ ಆನ್ಲೈನ್ ಶಿಕ್ಷಣಕ್ಕೆ ಅವಕಾಶ ಲಭಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೈದ ಪ್ರಕರಣ ಸರ್ಕಾರದ ಮಾನವಹಕ್ಕಿನ ಉಲ್ಲಂಘನೆಯಾಗಿರುವುದಾಗಿ ಆರೋಪಿಸಿ ಯುವಕಾಂಗ್ರೆಸ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಮೆರವಣಿಗೆ ನಡೆಯಿತು. ಸಂಘಟನೆ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಜೋಮೋನ್ ಉದ್ಘಾಟಿಸಿದರು.