ಉಪ್ಪಳ: ಚೀನಾ ಗಡಿಯಲ್ಲಿ ಮಡಿದ ಭಾರತದ ಸೈನಕರಿಗೆ ಚೇವಾರಿನಲ್ಲಿ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಲೋಕೇಶ್ ನೋಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ವಿಎಚ್‍ಪಿ ಹಿರಿಯ ನಾಯಕ ಬಾಯಾಡಿ ವೆಂಕಟ್ರಮಣ ಭಟ್,ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ,ಕೇರಳ ಗ್ರಾಮೀಣ ಬ್ಯಾಂಕ್ ಹಿರಿಯ ನಿವೃತ್ತ ಪ್ರಬಂಧಕ ಎಂ.ಎಂ.ಭಟ್ ಮಾತನಾಡಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಾಯಕರಾದ ಅಚ್ಯುತ ಚೇವಾರ್,ಹರೀಶ್ ಬೊಟ್ಟಾರಿ,ಪ್ರಸಾದ್ ರೈ ಕಯ್ಯಾರು,ನಾರಾಯಣ ಭಟ್ ಕಬೆಕ್ಕೋಡು,ಶ್ರೀಧರ ಬದಿಯಾರ್,ಬಿ.ಮಹಾಬಲ ಭಟ್ ಉಪಸ್ಥಿತರಿದ್ದರು.ಯು.ಎಂ.ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ರವಿಚಂದ್ರ ಚೇವಾರ್ ವಂದಿಸಿದರು.