ಕಾಸರಗೋಡು: ಕೋವಿಡ್-19 ರ ಕಾರಣದಿಂದ ಎರಡು ತಿಂಗಳುಗಳಿಂದ ಮುಚ್ಚುಗಡೆಗೊಂಡಿದ್ದ ಕಾಸರಗೋಡು - ಮಂಗಳೂರು ಪ್ರಯಾಣ ವ್ಯವಸ್ಥೆ ಪುನರ್ ಸ್ಥಾಪಿಸಲಾಗಿದೆ.
ಕರ್ನಾಟಕದಲ್ಲಿ ಉದ್ಯೋಗದಲ್ಲಿರುವ ಕಾಸರಗೋಡು ನಿವಾಸಿಗಳು ಎದುರಿಸುತ್ತಿರುವ ಉದ್ಯೋಗ ಸಂದಿಗ್ಧತೆಯನ್ನು ಪರಿಹರಿಸುವ ಅಂಗವಾಗಿ ಈ ಬಗ್ಗೆ ಜಿಲ್ಲಾಆiಕಾರಿ ಡಿ.ಸಜಿತ್‍ಬಾಬು ಬುಧವಾರ ಆದೇಶ ಹೊರಡಿಸಿರುವರು.
ಆದೇಶ ಪ್ರಕಾರ ಮಂಗಳೂರಿನಿಂದ ಕಾಸರಗೋಡಿಗೆ ಹಾಗು ಕಾಸರಗೋಡಿನಿಂದ ಮಂಗಳೂರಿಗೆ ತೆರಳಬೇಕಾದ ಖಾಯಂ ಪ್ರಯಾಣಿಕರು ಕೋವಿಡ್-19 ಜಾಗ್ರತಾ ಪೆÇೀರ್ಟಲ್‍ನ ಎಮರ್ಜೆನ್ಸಿ ಪಾಸ್ ವಿಭಾಗದಲ್ಲಿ ದಿನ ಆಧಾರದಲ್ಲಿ ಅಂತಾರಾಜ್ಯ ಪ್ರಯಾಣ ಎಂದು ದಾಖಲಿಸಿ ಕಾಸರಗೋಡು ಎಡಿಎಂಗೆ ಅಥವಾ ಕಾಂಞಂಗಾಡ್ ಆರ್‍ಡಿಒ ಅವರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಲಭಿಸಿದ ಒಂದು ಗಂಟೆಯೊಳಗೆ ಪಾಸ್ ಮಂಜೂರು ಮಾಡಲಾಗುವುದು. ಪಾಸ್ ಲಭಿಸುವವರು ಈ ಬಗ್ಗೆ ಮಾಹಿತಿಯನ್ನು ಮಂಜೇಶ್ವರ ತಹಶೀಲ್ದಾರ್‍ರಿಗೆ ತಿಳಿಸಬೇಕು. ತಹಶೀಲ್ದಾರ್ ಇಂತಹ ಪಾಸ್‍ಗಳ ರಿಜಿಸ್ಟರ್ ತಯಾರಿಸಿ ಪ್ರಯಾಣ ಬಗ್ಗೆ ದಾಖಲಿಸಬೇಕು. ಪಾಸ್ ಲಭಿಸುವವರು ತಲಪಾಡಿ ಚೆಕ್‍ಪೆÇೀಸ್ಟ್‍ನಲ್ಲಿ ಸಿದ್ಧಪಡಿಸಿರುವ ಮೆಡಿಕಲ್ ಕೌಂಟರ್‍ನಲ್ಲಿ ತಪಾಸಣೆಗೊಳಗಾಗಬೇಕು. ಕೋವಿಡ್ ರೋಗ ಲಕ್ಷಣವಿಲ್ಲವೆಂಬ ಸರ್ಟಿಫಿಕೇಟ್ ಲಭಿಸುವವರು ಚೆಕ್‍ಪೆÇೀಸ್ಟ್‍ನ ಎರಡನೇ ಕೌಂಟರ್‍ನಲ್ಲಿರುವ ರಿಜಿಸ್ಟರ್‍ನಲ್ಲಿ ಸಹಿ ಹಾಕಿದ ಬಳಿಕ ಪ್ರಯಾಣಿಸುವಾಗಲೂ ಚೆಕ್‍ಪೆÇೀಸ್ಟ್‍ನಲ್ಲಿ ತಪಾಸಣೆಗೊಳಲಾಗಿ ಸಹಿ ಹಾಕಬೇಕು. ಪಾಸ್‍ನ ಕಾಲಾವಧಿ 28 ದಿನವಾಗಿರುವುದು.
ಕಾಸರಗೋಡು ಜಿಲ್ಲೆಯ ಸಾವಿರಾರು ಮಂದಿ ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಸರಗೋಡಿನ ವಿದ್ಯಾರ್ಥಿಗಳು, ವ್ಯಾಪಾರಿಗಳು, ರೋಗಿಗಳು ಮೊದಲಾದವರ ಸಹಿತ ಸಾವಿರಾರು ಮಂದಿ ಪ್ರತಿದಿನ ಮಂಗಳೂರಿಗೂ ಅದೇ ರೀತಿ ಮರಳಿ ಪ್ರಯಾಣಿಸುತ್ತಿದ್ದಾರೆ.
ಕಾಸರಗೋಡು-ಕಣ್ಣೂರು ಬಸ್ ಸಂಚಾರ ಆರಂಭ : ಕಾಸರಗೋಡು-ಕಣ್ಣೂರು ರೂಟ್‍ನಲ್ಲಿ ರಾಜ್ಯ ಸಾರಿಗೆ ಬಸ್ ಹಾಗು ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಬುಧವಾರ ಬೆಳಗ್ಗೆ ಕಾಸರಗೋಡು ಡಿಪೆÇ್ಪೀದಿಂದ ಮೊದಲ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಅನುಸರಿಸಿ ಬಸ್‍ಗಳ ಸಂಖ್ಯೆ ಹೆಚ್ಚಿಸುವುದಾಗಿ ಅ„ಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಬಸ್‍ನಲ್ಲಿ ಅಂತರದ ವ್ಯವಸ್ಥೆ ಇಲ್ಲ. ಆದರೆ ನಿಂತು ಪ್ರಯಾಣಿಸಲು ಅವಕಾಶವಿಲ್ಲ. ಸಾಮಾನ್ಯ ದರ ಮಾತ್ರವೇ ಪಡೆಯಲಾಗುವುದು. ಇದೇ ವೇಳೆ ಪ್ರಯಾಣಿಕರು ಸಾನಿಟೈಸರ್ ಕೈಯಲ್ಲಿರಿಸಿಕೊಳ್ಳಬೇಕು. ಮಾಸ್ಕ್ ಧರಿಸಬೇಕೆಂದು ತಿಳಿಸಲಾಗಿದೆ.