ತಿರುವನಂತಪುರಂ: ಕೋವಿಡ್ -19 ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ವಾಹನ ಚಾಲನಾ ಪರವಾನಗಿ ಪರೀಕ್ಷೆಗಳನ್ನು ಪುನರಾರಂಭಿಸಲಾಗಿದೆ. ಪರೀಕ್ಷೆಗಳು ಇಂದಿನಿಂದ ಮತ್ತೆ ಪ್ರಾರಂಭವಾಗಲಿದ್ದು, ಮುಂದಿನ ಸೂಚನೆ ಬರುವವರೆಗೂ ಆನ್‍ಲೈನ್‍ನಲ್ಲಿ ನಡೆಸಲಾಗುವುದು ಎಂದು ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದ್ದಾರೆ.
ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಅರ್ಜಿದಾರರು ಮೋಟಾರು ವಾಹನ ಇಲಾಖೆಯ ಕಚೇರಿಗಳಿಗೆ ಹಾಜರಾಗುವುದನ್ನು ನಿಯಂತ್ರಿಸಲು ಆನ್ ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಿಯುವವರ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮದೇ ಆದ ಪರೀಕ್ಷೆಗಳನ್ನು ಆನ್‍ಲೈನ್‍ನಲ್ಲಿ ತಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‍ಫೆÇೀನ್‍ಗಳಲ್ಲಿ ಬರೆಯಲು ವ್ಯವಸ್ಥೆಯನ್ನು ಒದಗಿಸುವಂತೆ ಮೋಟಾರು ವಾಹನ ಇಲಾಖೆಗೆ ಸೂಚನೆ ನೀಡಲಾಗಿದೆ. ಆನ್‍ಲೈನ್ ಪರೀಕ್ಷೆಯಲ್ಲಿ ಕಲಿಯುವವರಿಗೆ ಸೈಲೆನ್ಸ್ ಆನ್‍ಲೈನ್ ನೀಡಲಾಗುವುದು. ಮುದ್ರಣ ಪ್ರಕ್ರಿಯೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಆನ್‍ಲೈನ್ ಪರವಾನಗಿ ಹೊಂದಿರುವವರು ಬಯಸಿದಲ್ಲಿ ಆನ್‍ಲೈನ್‍ನಲ್ಲಿ ತಮ್ಮ ಪರವಾನಗಿಯನ್ನು ನವೀಕರಿಸಬಹುದು. ಮೋಟಾರು ವಾಹನ ನಿಯಮಗಳಿಗೆ ಸಂಬಂಧಿಸಿದ ಪ್ರಶ್ನೆ ಸಂಗ್ರಹ ವಿಭಾಗದಿಂದ(ಕ್ವಶ್ಚನ್ ಬ್ಯಾಂಕ್) ನಿಗದಿಪಡಿಸಿದ ಪ್ರಶ್ನೆಗಳಿಗೆ ನೀವು ಉತ್ತರಿಸಿದಾಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದಾಗಿದೆ. ಮೋಟಾರು ವಾಹನ ಇಲಾಖೆ ಪರೀಕ್ಷೆಯನ್ನು ನಡೆಸುವ ದಿನಾಂಕ, ಅಭ್ಯರ್ಥಿಗಳ ಸಂಖ್ಯೆ ಮತ್ತು ಪರೀಕ್ಷೆಯ ಸಮಯಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲಿದೆ.
ಎಲ್ಲಾ ವಾಹನ ಚಾಲಕರು ರಸ್ತೆ ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಇದು ಆತ್ಮರಕ್ಷಣೆ ಹಾಗೂ ರಸ್ತೆ ಸಂಚಾರದಲ್ಲಿರುವ ಇತರರ ರಕ್ಷಣೆಯ ಅವಶ್ಯಕತೆಯಾಗಿದೆ ಎಂದು ಸಚಿವರು ಹೇಳಿರುವರು.