ವಾಷಿಂಗ್ಟನ್: ಅಮೆರಿಕಾದಲ್ಲಿ ಆಫ್ರಿಕನ್-ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಪೆÇಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ನಂತರ ಜನಾಂಗೀಯ ಹೋರಾಟ ಭುಗಿಲೆದ್ದಿದೆ. ಅಮೆರಿಕಾದ 140 ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ತೀವ್ರಗೊಂಡಿದ್ದು. ನರಮೇಧದ ಹಿನ್ನೆಲೆಯಲ್ಲಿ ಬಿಳಿ ವರ್ಣದ ಪೆÇಲೀಸ್ ಅಧಿಕಾರಿಯೊಬ್ಬರನ್ನು ಶುಕ್ರವಾರ ಬಂಧಿಸಲಾಗಿತ್ತು. ಈ ಮಧ್ಯೆ ಐಟಿ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಹಾಗೂ ಗೂಗಲ್ ಸಿಇಒ ಸುಂದರ್ ಪಿಚ್ಚೈ ಕಪ್ಪು ಜನಾಂಗದ ಪರ ನಿಂತಿದ್ದಾರೆ.
ಸಮಾಜದಲ್ಲಿ ದ್ವೇಷ ಮತ್ತು ವರ್ಣಭೇದ ನೀತಿಗೆ ಜಾಗವಿಲ್ಲ ಎಂದಿರುವ ಸತ್ಯ ನಾಡೆಲ್ಲಾ, ಅನುಭೂತಿ ಮತ್ತು ಹಂಚಿಕೆಯ ತಿಳುವಳಿಕೆ ಪ್ರಾರಂಭವಾಗಿದೆ ಆದರೆ,ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮೇ 25ರಂದು ಮಿನ್ನಿಯಾ ಪೆÇಲೀಸ್ ನಗರದ ಪೆÇಲೀಸ್ ಅಧಿಕಾರಿ ಡೆರೆಕ್ ಚೌವಿನ್ ಪೆÇಲೀಸ್ ಕಸ್ಟಡಿಯಲ್ಲಿದ್ದ 46 ವರ್ಷದ ಆಫ್ರಿಕನ್ -ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದಾಗ ಕಾರ್ಡಿಯೋಪಲ್ಮನರಿ ಅರೆಸ್ಟ್ ನಿಂದ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟ ನಂತರ ನಾಡೆಲ್ಲಾ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಕಪ್ಪು ವರ್ಣದ ಆಫ್ರಿಕನ್ ಅಮೆರಿಕನ್ ಸಮುದಾಯದೊಂದಿಗೆ ನಿಲ್ಲುತ್ತೇನೆ. ನಮ್ಮ ಕಂಪನಿಯಲ್ಲಿ ಮತ್ತು ನಮ್ಮ ಸಮುದಾಯಗಳಲ್ಲಿ ಈ ಕೆಲಸವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ನಾಡೆಲ್ಲಾ ಹೇಳಿದ್ದಾರೆ.
1,754 people are talking about this
ಗೂಗಲ್ ಸಿಇಒ ಸುಂದರ್ ಪಿಚೈ ಕೂಡಾ ಆಫ್ರಿಕನ್- ಅಮೆರಿಕನ್ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಅಮೆರಿಕದ ಗೂಗಲ್ ಮತ್ತು ಯೂ ಟ್ಯೂಬ್ ಹೋಮ್ ಪೇಜ್ ನಲ್ಲಿ ಧ್ವನಿ ಇಲ್ಲದ ಕಪ್ಪು ಜನರ ಪರವಾಗಿ ನಿಲ್ಲುವುದಾಗಿ ಸುಂದರ್ ಪಿಚೈ ಭಾನುವಾರ ಟ್ವೀಟ್ ಮಾಡಿದ್ದರು.
Today on US Google & YouTube homepages we share our support for racial equality in solidarity with the Black community and in memory of George Floyd, Breonna Taylor, Ahmaud Arbery & others who don’t have a voice. For those feeling grief, anger, sadness & fear, you are not alone.
7,447 people are talking about this