HEALTH TIPS

ಪಾಲಕ್ಕಾಡಲ್ಲಿ ಮತ್ತೊಂದು ಕೋವಿಡ್ ಮರಣ


          ಪಾಲಕ್ಕಾಡ್: ಪಾಲಕ್ಕಾಡ್ ಕಡಂಬಳಿಪ್ಪುರಂ ಚೆಟ್ಟಿಯಾಂಕುಳಂನ ಮೀನಾಕ್ಷಿ ಅಮ್ಮಾಳ್ (73) ಕೋವಿಡ್ ರೋಗ ಬಾಧಿಸಿದ ಹಿನ್ನೆಲೆಯಲ್ಲಿ ಗುರುವಾರ ಮೃತಪಟ್ಟಿರುವುದಾಗಿ ಸರ್ಕಾರ ತಿಳಿಸಿದೆ.
   ಅವರಿಗೆ ಮಧುಮೇಹ ಮತ್ತು ನ್ಯುಮೋನಿಯಾ ಬಾಧಿಸಿತ್ತೆಂದು ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿದೆ. ಮೀನಾಕ್ಷಿ ಅಮ್ಮಾಳ್ ಅವರು ಮೇ.25 ರಂದು ಚೆನ್ನೈಯಿಂದ ವಾಳಯಾರ್ ಗಡಿಯ ಮೂಲಕ ಕೇರಳ ತಲಪಿದ್ದರು. ಬಳಿಕ ಕಂಡುಬಂದ ತೀವ್ರ ಜ್ವರದ ಕಾರಣ ಮೇ.28 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಮೊದಲ ಕೋವಿಡ್ ಪರೀಕ್ಷೆ ನೆಗೆಟಿವ್ ಆಗಿತ್ತು. ಆದರೆ ಗುರುವಾರ ನಿಧನರಾದ ಬಳಿಕ ನಡೆಸಿದ ಪರಿಶೋಧನೆಯಲ್ಲಿ ಕೋವಿಡ್ ಬಾಧಿಸಿರುವುದು ದೃಢಪಟ್ಟಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
    ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ಬಾಧೆಯ ಕಾರಣ ಮೃತಪಟ್ಟವರ ಸಂಖ್ಯೆ  12 ಕ್ಕೆ ಏರಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಇದು ಮೊದಲ ಕೋವಿಡ್ ಮರಣವಾಗಿದ್ದು, ಕೊವಿಡ್ ನಿಬಂಧನೆಗೆ ಅನುಗುಣವಾಗಿ ಮರಣಾನಂತರ ಕಾರ್ಯಕ್ರಮಗಳು ನಡೆಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries