ನವದೆಹಲಿ: ವರ್ಚುವಲ್ ಶೃಂಗಸಭೆ ಮೂಲಕ ಭೇಟಿಯಾಗಿದ್ದ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಇಂದು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು.
ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತುಕತೆ ನಡೆಸಿದರು. ಆ ನಂತರ ಮ್ಯೂಚುಯಲ್ ಲಾಜಿಸ್ಟಿಕ್ಸ್ ಸಪೆÇೀರ್ಟ್ ಅರೇಂಜ್‍ಮೆಂಟ್ (ಎಂಎಲ್ ಎಸ್ ಎ ) ಒಪ್ಪಂದಕ್ಕೆ ಸಹಿ ಹಾಕಿದರು. ಪ್ರಮುಖವಾಗಿ ಉಭಯ ರಾಷ್ಟ್ರಗಳ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗೆ ಸಂಬಂಧಿಸಿದ ರಕ್ಷಣಾ ಉಪಕರಣಗಳನ್ನು ಹಂಚಿಕೊಳ್ಳವ ಒಪ್ಪಂದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ಗುರುವಾರ ಸಹಿ ಹಾಕಿವೆ ಎಂದು ತಿಳಿದುಬಂದಿದೆ.
ಉಭಯ ನಾಯಕರು ನಾಯಕರು ಇಂದು ನಡೆದ ವರ್ಚುವಲ್ ಶೃಂಗಸಭೆಯಲ್ಲಿ ವ್ಯಾಪಾರ, ರಕ್ಷಣಾ, ಶಿಕ್ಷಣ ಮತ್ತು ಕೋವಿಡ್-19 ಬಿಕ್ಕಟ್ಟು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು. ಭಾರತ ಮತ್ತು ಆಸ್ಟೇಲಿಯಾ ಸೇನಾಪಡೆಗಳು ಇತ್ತೀಚೆಗೆ ಭಾಗಿಯಾಗಿದ್ದ ಜಂಟಿ ಸಮರಾಭ್ಯಾಸಗಳು ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಇಂದು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದು, ಮಿಲಿಟರಿ ನೆಲೆಗಳ ಹಂಚಿಕೆ, ಸಂಗ್ರಹಣೆ, ಸೌಲಭ್ಯಗಳ ಬಳಕೆ, ತರಬೇತಿ ಸೇವೆಗಳು, ಬಿಡಿಭಾಗಗಳು, ದುರಸ್ತಿ, ನಿರ್ವಹಣೆ, ವಿಮಾನ ನಿಲ್ದಾಣ ಮತ್ತು ಬಂದರು ಸೇವೆಗಳನ್ನು ಪರಸ್ಪರ ಒದಗಿಸಲು ಎಂಎಲ್ ಎಸ್ ಎ ಅನುಮತಿ ನೀಡುತ್ತದೆ.
ಭಾರತ ಮತ್ತು ಆಸ್ಟ್ರೇಲಿಯಾದ ಸಶಸ್ತ್ರ ಪಡೆಗಳಿಗೆ ಆಹಾರ, ನೀರು, ಸಾರಿಗೆ, ತೈಲ, ಬಟ್ಟೆ, ಸಂವಹನ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ಪರಸ್ಪರ ಸಹಾಯ ಮಾಡಲು ಎಂಎಲ್ ಎಸ್ ಎ (mutual logistic support agreement) ಸಹಕಾರಿಯಾಗಲಿದೆ. ಭಾರತ ಈಗಾಗಲೇ ಯುಎಸ್, ಫ್ರಾನ್ಸ್ ಮತ್ತು ಸಿಂಗಾಪುರದೊಂದಿಗೆ ಇದೇ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದೆ.
ಈ ಸಂದರ್ಭದಲ್ಲಿ ಮಾರಿಸನ್ ಅವರು ಮೋದಿ ಅವರ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು. ಜಿ-20, ಇಂಡೋ-ಪೆಸಿಫಿಕ್ ಪ್ರದೇಶದ ವಿಚಾರಗಳಲ್ಲಿ ಮೋದಿ ಅವರು ವಹಿಸಿದ ಪಾತ್ರದ ಬಗ್ಗೆ ಮಾರಿಸನ್ ಶ್ಲಾಘಿಸಿದರು. ಅಂತೆಯೇ ಭದ್ರತಾ ಮತ್ತು ನೌಕಾ ಒಪ್ಪಂದಗಳ ಮೂಲಕ ಆಸ್ಟ್ರೇಲಿಯಾ-ಭಾರತ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಾಢವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಹಯೋಗದಿಂದ ನಾವು ಇನ್ನೂ ಉತ್ತಮವಾದದನ್ನು ಸಾಧಿಸಲಿದ್ದೇವೆ ಎಂದು ಹೇಳಿದರು.
ಭಾರತ ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿರುವ ಈ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು ಆಸಿಸ್ ಪ್ರಧಾನಿ ಮಾರಿಸನ್ ಅವರ ಈ ಭೇಟಿ ಸಾಕಷ್ಚು ಕುತೂಹಲ ಕೆರಳಿಸಿತ್ತು. ಮತ್ತೊಂದು ಮೂಲದ ಪ್ರಕಾರ ಚೀನಾಗೆ ಟಾಂಗ್ ನೀಡುವ ನಿಟ್ಟಿನಲ್ಲೇ ಭಾರತ ಈ ಭೇಟಿಗೆ ಮಹತ್ವ ನೀಡಿತ್ತು ಎಂದೂ ಹೇಳಲಾಗಿದೆ.