ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ಹೇರಲ್ಪಟ್ಟ ಲಾಕ್ ಡೌನ್ ಬಳಿಕ ತೀವ್ರ ಆತಂಕ, ಅಸಮಧಾನಗಳಿಗೆ ಕಾರಣವಾಗಿದ್ದ ಅಂತರ್ ರಾಜ್ಯ(ಕೇರಳ-ಕರ್ನಾಟಕ) ಹೆದ್ದಾರಿ ಬಂದ್ ನಿಂದ ಕಂಗೆಟ್ಟಿರುವ ಸಾರ್ವಜನಿಕರ ಬೇಡಕೆಗೆ ಕೊನೆಗೂ ಜಿಲ್ಲಾಡಳಿತ ಕೃಪೆ ತೋರಿಸಿದ್ದು, ಇಂದಿನಿಂದ ನಿಬಂಧನೆಗಳನ್ವಯ ಸಂಚಾರ ಅನುಮತಿ ನೀಡಿರುವ ಆದೇಶ ಹೊರಡಿಸಿದೆ.
ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಗೆ ತಲಪ್ಪಾಡಿ ಅಂತರ್ ರಾಜ್ಯ ಗಡಿಯ ಮೂಲಕ ಮಾತ್ರ ಪ್ರವೇಶಾನುಮತಿ ನೀಡಿದ್ದು ನಿಬಂಧನೆಗಳು ಇಂತಿದೆ:
1.ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸಲು ಬಯಸುವ ವ್ಯಕ್ತಿಗಳು ಕೋವಿಡ್-19 ಜಾಗೃತಾ ಪೋರ್ಟಲ್ ನಲ್ಲಿ EMERGENCY Pass ಗಾಗಿ ನೋಂದಾವಣೆ ನಡೆಸಬೇಕಾಗಿದೆ, ಮತ್ತು ಅದಕ್ಕೆ *INTERSTATE TRAVEL ON DAILY BASIS* ಎಂಬ ಕಾರಣವನ್ನು ನಮೂದಿಸಬೇಕಾಗಿದೆ.
2.ಈ ಆನ್ಲೈನ್ ಅರ್ಜಿ ಲಭಿಸಿದ ಒಂದು ಗಂಟೆಯೊಳಗಾಗಿ Additional District Magistrate ಕಾಸರಗೋಡು ಅಥವಾ DIVISIONAL MAGISTRATE ಕಾಞಂಗಾಡ್, ಇವರು ಪಾಸ್ ಗಳನ್ನು ವಿತರಿಸಲು ಆದೇಶ ನೀಡಲಿರುವರು.
3. *ಈ ಪಾಸ್ ಗಳಿಗೆ 28 ದಿವಸಗಳ ಅವಧಿ ಇರುತ್ತವೆ.*
4. ಈ ಪಾಸ್ ಗಳನ್ನು ವಿತರಿಸುವ ವೇಳೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಕಾಸರಗೋಡು/ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಕಾಞಂಗಾಡ್ ರವರು Comply with the direction in the order of the DISTRICT COLLECTOR dated on 02-06-2020 vide order No 1331/2020/KL ಎಂದು ನಮೂದಿಸಬೇಕಾಗಿದೆ.
ಈ ಪಾಸ್ ಒದಗಿಸಿದ ಬಳಿಕ , ಪಾಸ್ ನ ಸಮಗ್ರ ಮಾಹಿತಿಗಳನ್ನು ಚೆಕ್ ಪೋಸ್ಟ್ ಸಮೀಪ ಕ್ಯಾಂಪ್ ನಡೆಸುತ್ತಿರುವ
ಮಂಜೇಶ್ವರ ತಹಶೀಲ್ದಾರ್ ರವರ ಸಮಕ್ಷಮ ನೀಡಬೇಕಿದೆ.
ವ್ಯಕ್ತಿಯ ಹೆಸರು, ವಿಳಾಸ, ಫೋನ್ ನಂಬರ್, ಪ್ರವೇಶಿಸುವ ದಿನಾಂಕ, ಮರಳಿ ಹೋಗುವ ದಿನಾಂಕ ಇತ್ಯಾದಿ ಇಲ್ಲಿ ಸಮರ್ಪಿಸಬೇಕಿದೆ.
6.ರೆಜಿಸ್ಟರ್ ನಲ್ಲಿ ಅನುಕ್ರಮವಾಗಿ ಪಾಸ್ ನಂಬರ್ ನಮೂದಿಸಬೇಕಾಗಿದೆ.
7.ಪಾಸ್ ಲಭಿಸಿದ ಕೂಡಲೇ ನಿತ್ಯ ಪ್ರಯಾಣಿಕರು ತಲಪಾಡಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ ಹಾಜರಾಗಿ, ಅಲ್ಲಿರುವ ವೈದ್ಯಕೀಯ ತಂಡದ ಕೋವಿಡ್19 ಪರಿಶೋಧನೆಗೆ ಒಳಪಡಬೇಕಿದೆ.ಥರ್ಮಲ್ ಸ್ಕ್ಯಾನರ್ ಮುಂತಾದ ಪರಿಶೋಧನಾ ಉಪಕರಣಗಳ ಮೂಲಕ ಜ್ವರ ಇತ್ಯಾದಿ ಕೋವಿಡ್ ಲಕ್ಷಣಗಳ ಪ್ರಾಥಮಿಕ ಪರೀಕ್ಷೆ ಅಲ್ಲಿ ನಡೆಯಲಿದೆ. ಈ ಕೌಂಟರ್ ಬಳಿ ಇರುವ ಇನ್ನೊಂದು ಕೌಂಟರ್ ನಲ್ಲಿ ಪ್ರಯಾಣಿಕರು ಪ್ರವೇಶಿಸುವಾಗ ಮತ್ತು ಮರಳುವಾಗ ದಿನಾಂಕ ನಮೂದಿಸಿ ಸಹಿ ಹಾಕಬೇಕಿದೆ.