ಮಂಜೇಶ್ವರ : ಕೇರಳ ಕರ್ನಾಟಕ ಗಡಿ ಪ್ರದೇಶದ ಕೇರಳ ಆರ್ ಟಿ ಓ ಕಚೇರಿ ಮುಂಭಾಗದಲ್ಲಿ ಗಡಿ ಭಾಗದಿಂದ ಕೇರಳಕ್ಕೆ ಸಾಗುತ್ತಿರುವ ಕೋವಿಡ್ ಅಣು ಮುಕ್ತಗೊಳಿಸಲು ಆಟೋಮ್ಯಾಟಿಕ್ ವಿಧಾನದಲ್ಲಿ ಸ್ಥಾಪಿಸಲಾಗಿದ್ದ ವೆಹಿಕಲ್ ಸಾನಿಟೈಸಿಂಗ್ ಪಾಯಿಂಟ್ ಗೆ ವಾಹನವೊಂದು ಡಿಕ್ಕಿ ಹೊಡೆದ ಹಿನ್ನೆಲೆ ಯಲ್ಲಿ ಸಾನಿಟೈಸಿಂಗ್ ಪಾಯಿಂಟ್ ಸಂಪೂರ್ಣವಾಗಿ ಮುರಿದು ಕೋವಿಡ್ ಪರಿಶೋಧನಾ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಅಮಿತ ಭಾರವನ್ನು ಹೇರಿ ಆಗಮಿಸಿದ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿರುವುದಾಗಿ ಆರ್ ಟಿ ಓ ಕಚೇರಿ ಅಧಿಕಾರಿ ರಂಜಿತ್ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಭಾಗದಿಂದ ಆಗಮಿಸುವ ವಾಹನಗಳ ಅಣುಮುಕ್ತಗೊಳಿಸುವ ಜವಾಬ್ದಾರಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳಿಗೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಡಿಕ್ಕಿ ಹೊಡೆದ ವಾಹನದ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ. ಶೀಘ್ರ ಸ್ಥಗಿತಗೊಂಡ ಸ್ಯಾನಿಟೈಸರ್ ಪಾಯಿಂಟನ್ನು ದುರಸ್ಥಿಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.