ಹೈದರಾಬಾದ್: ಸುಪ್ರಸಿದ್ದ ಹಿನ್ನಲೆ ಗಾಯಕಿ ಗಾಯಕಿ ಎಸ್ ಜಾನಕಿ ನಿಧನರಾಗಿದ್ದಾರೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಹಿರಿಯ ಗಾಯಕಿಯ ಅಭಿಮಾನಿಗಳು ಮತ್ತು ಆಪ್ತರು ತೀವ್ರ ಕಳವಳಕ್ಕೆ ಒಳಗಾಗಿದ್ದರು.
ಆದರೆ ಗಾಯಕಿ ಎಸ್. ಜಾನಕಿ ಆರೋಗ್ಯವಾಗಿದ್ದಾರೆ. ದಯಮಾಡಿ ಇಂತಹ ಸುಳ್ಳು ಸುದ್ದಿಗಳನ್ನು ಹರಡ ಬೇಡಿ ಎಂದು ಆಕೆಯ ಕುಟುಂಬ ಸದಸ್ಯರು ಹೇಳಿಕೆ ನೀಡಿದ ನಂತರ ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಖ್ಯಾತ ಗಾಯಕ ಎಸ್. ಪಿ ಬಾಲ ಸುಬ್ರಮಣ್ಯಂ ಅವರೂ ಸಹ ಹಿರಿಯ ಗಾಯಕಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ವದಂತಿಗಳ ಬಗ್ಗೆ ಎಸ್ . ಜಾನಕಿ ಅವರೇ ಪ್ರತಿಕ್ರಿಯಿಸಿದ್ದು,. ತಾವು ಆರೋಗ್ಯವಾಗಿರುವುದಾಗಿ, ತಮ್ಮ ಆರೋಗ್ಯದ ಬಗ್ಗೆ ಯಾರೂ ಚಿಂತಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
" ಏಕೆ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಇದರಿಂದಾಗಿ ತಮ್ಮ ಆರೋಗ್ಯದ ಬಗ್ಗೆ ತಿಳಿದು ಕೊಳ್ಳಲು ಬಹಳಷ್ಟು ಜನರು ತಮಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿ ಹಬ್ಬಿಸುವುದರಿಂದ ಏನು ಪ್ರಯೋಜನ ಎಂದು ಎಂದಿದ್ದಾರೆ. ನಾನು ಚೆನ್ನಾಗಿಯೇ ಇದ್ದೇನೆ. ನೀವೆಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಜಾಗರೂಕರಾಗಿರಿ, ಎಂದು ಎಂದು ಜಾನಕಿ ಸಲಹೆ ನೀಡಿದ್ದಾರೆ.