HEALTH TIPS

ಕೇಂದ್ರದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಿರಾಸಕ್ತಿ-ಯುವಮೋರ್ಚಾ ಆರೋಪ

     ಬದಿಯಡ್ಕ: ಕೇಂದ್ರದ ನರೇಂದ್ರ ಮೋದಿ ಸರಕಾರದ ಬಹುದೊಡ್ಡ ಯೋಜನೆಯಾದ ಸಂಸದ ಆಧರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ಅಭಿವೃದ್ಧಿಗೊಳಿಸಲು  ಕಾಸರಗೋಡಿನ ಸಂಸದರು ಈ ವರ್ಷ ಕುಂಬ್ಡಾಜೆಯನ್ನು  ಆಯ್ಕೆ ಮಾಡಿರುವುದಲ್ಲದೆ ಯಾವುದೇ ಕಾರ್ಯ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಆಸಕ್ತಿ ತೋರದೆ ಕುಂಬ್ಡಾಜೆಯನ್ನು ಅವಗಣಿಸುತ್ತಿದ್ದಾರೆಂದು ಯುವಮೋರ್ಚಾ ಕುಂಬ್ಡಾಜೆ ಪಂಚಾಯತ್ ಸಮಿತಿ ದೂರಿದೆ.
      ಕುಂಬ್ಡಾಜೆಯಲ್ಲಿ ಆಡಳಿತ ನಡೆಸುತ್ತಿರುವ ಯು ಡಿ ಎಫ್ ಆಡಳಿತವು ಮೌನ ವಹಿಸಿರುವುದೂ ಅವಗಣನೆಯಾಗಿದೆ, ಕೇಂದ್ರದ ಈ ಮಹತ್ ಯೋಜನೆಯಲ್ಲಿ ಕುಂಬ್ಡಾಜೆ ಯನ್ನು ಒಳಪಡಿಸಿದ ವಿಚಾರವನ್ನು ತಿಳಿದ ಇಲ್ಲಿನ ಜನ  ಸಾಮಾನ್ಯರು ಅಭಿವೃದ್ಧಿಯ ಕನಸನ್ನು ಕಂಡಿದ್ದರು. ಆದರೆ ಕಾಸರಗೋಡಿನ ಸಂಸದರಾದ  ರಾಜ್ ಮೋಹನ್  ಉಣ್ಣಿತ್ತಾನ್ ರವರು ಹಾಗೂ ಕುಂಬ್ಡಾಜೆಯ ಯು ಡಿ ಎಫ್ ಆಡಳಿತವು ಜನ ಸಾಮಾನ್ಯರ ಕಣ್ಣಿಗೆ ಮಣ್ಣೆರಚುವ ಕಾರ್ಯವನ್ನು ಮಾಡುತ್ತಿರುವುದಾಗಿ ಯುವಮೋರ್ಚಾ ದೂರಿದೆ. 
    ಕಳೆದ 7-8 ತಿಂಗಳ ಹಿಂದೆಯೇ ಇದರ ಕಾರ್ಯ ಪ್ರಾರಂಭಿಸಿದ್ದು ಸಂಸದರು ಹಾಗೂ ಜಿಲ್ಲಾಧಿಕಾರಿ ಪಂಚಾಯತ್ ಕಛೇರಿಗೆ ಬಂದು ಸಭೆಯನ್ನು ನಡೆಸಿದ್ದು ಇಲ್ಲಿನ ಸಮಸ್ಯೆಗಳ ಬಗ್ಗೆ ವಿಷಯವನ್ನು ಕ್ರೋಡೀಕರಿಸಿದ್ದರು.  ನಂತರ ಎಲ್ಲಾ ವಾರ್ಡ್ ಗಳಲ್ಲೂ ಸಮಗ್ರ ಸರ್ವೇ ನಡೆಸಲು ತಂಡಗಳನ್ನು ರಚಿಸಲು ಸೂಚಿಸಿದ್ದರು, ಸರ್ವೇ ನಡೆಸುವ ತಂಡಕ್ಕೆ ಪ್ರತೀ ಮನೆಗಳಿಗೆ 5 ರೂ.ವಿನಂತೆ ನೀಡುವುದಾಗಿಯೂ ತಿಳಿಸಿದ್ದರು. ಅದರಂತೆ ಹೆಚ್ಚಿನ ಎಲ್ಲಾ ವಾರ್ಡ್ ಗಲ್ಲಿ ಸರ್ವೇ ನಡೆಸಲಾಗಿತ್ತು. ಬಳಿಕ ಈವರೆಗೆ ಕಳೆದ 6 ತಿಂಗಳಿಂದ ಅದರ ಬಗ್ಗೆ ಯಾವುದೇ ಕಾರ್ಯಗಳನ್ನು ಮುಂದುವರಿಸಿಲ್ಲ ಮಾತ್ರವಲ್ಲದೆ ಸರ್ವೇ ನಡೆಸಿದವರಿಗೆ ನೀಡಬೇಕಿದ್ದ ಮೊತ್ತವನ್ನೂ ನೀಡಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಸಂಸದರು ಹಾಗೂ ಪಂಚಾಯತ್ ಆಡಳಿತ ವರ್ಗ ತೋರುತ್ತಿರುವ ಈ ಅನಾಸ್ಥೆಯಿಂದಾಗಿಯೇ ಅಭಿವೃದ್ಧಿ ವಿಚಾರದಲ್ಲಿ ಕುಂಬ್ಡಾಜೆ ಇಂದಿಗೂ ಹಿಂದೆ ಬಿದ್ದಿರುವುದು,  ಇದಕ್ಕೆ ಮೂಲ ಕಾರಣವೇ ಯು ಡಿ ಎಫ್ ಎಂದು ಯುವಮೋರ್ಚಾ ಆರೋಪಿಸಿದೆ.
      ಯು ಡಿ ಎಫ್ ಕುಂಬ್ಡಾಜೆಯ ಅಭಿವೃದ್ಧಿಯ ವಿಚಾರದಲ್ಲಿ ಒಂದು ಶಾಪವಾಗಿದ್ದು ಪರಿಣಾಮಿಸಿದೆ. ಇನ್ನಾದರೂ ಎಚ್ಚತ್ತು ಅಭಿವೃದ್ಧಿ ವಿಚಾರದಲ್ಲಿ ಕಾಳಜಿ ವಹಿಸಿ ಕೇಂದ್ರದ ಸಂಸದ ಆಧರ್ಶ ಯೋಜನೆಯ ಅಡಿಯಲ್ಲಿ ಕುಂಬ್ಡಾಜೆ ಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಮುಂದೆ ಬರಬೇಕೆಂದೂ ಇಲ್ಲದಿದ್ದಲ್ಲಿ ಯುವಮೋರ್ಚಾ ಉಗ್ರ  ಹೋರಾಟಕ್ಕೆ ನೇತೃತ್ವ ಕೊಡುವುದಾಗಿ ಯುವಮೋರ್ಚಾ ಕುಂಬ್ಡಾಜೆ ಪಂಚಾಯತ್ ಸಮಿತಿ ಮನ್ನೇಚ್ಚರಿಕೆಯನ್ನು ನೀಡಿದೆ. ಇತ್ತೀಚಿಗೆ ಮವ್ವಾರಿನ ಬಿಜೆಪಿ ಕಚೇರಿಯಲ್ಲಿ ಯುವಮೋರ್ಚಾದ ಕುಂಬ್ಡಾಜೆ ಪಂಚಾಯತ್ ಸಮಿತಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.  ಯುವಮೋರ್ಚಾ ಪಂಚಾಯತ್ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ಭಂಡಾರಿ ಬೆಳಿಂಜ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಬಿಜೆಪಿ ಪಂಚಾಯತ್ ಸಮಿತಿ ಉಪಾಧ್ಯಕ್ಷರಾದ ಬಿ ರಾಜೇಶ್ ಶೆಟ್ಟಿ ಉದ್ಘಾಟಿಸಿದರು. ಯುವಮೋರ್ಚಾ ಮಂಡಲಾಧ್ಯಕ್ಷರಾದ ರಕ್ಷಿತ್ ಕೆದಿಲಾಯ, ಯುವಮೋರ್ಚಾ ಪಂಚಾಯತ್ ಪ್ರಧಾನ ಕಾರ್ಯಧರ್ಶಿ ಹರಿಶ್ಚಂದ್ರ ಕುರುಮುಜ್ಜಿ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries