ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಮಳೆಗಾಲ ಪ್ರಬಲವಾಗಿರುವ ಹಿನೆಲೆಯಲ್ಲಿ ಇನ್ನಷ್ಟು ಶಕ್ತಿಯುತವಾಗಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 3 ರಂದು ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ.
ಆರೆಂಜ್ ಅಲೆರ್ಟ್ ಘೋಷಿಸಲಾದ ಜಿಲ್ಲೆಗಳ ಕೆಲವೆಡೆ ಪ್ರಬಲವಾಗಿ(115 ಎಂ.ಎಂ. ವರೆಗಿನ ಮಳೆ), ಅತಿ ಪ್ರಬಲವಾಗಿ(115 ಎಂ.ಎಂ.ನಿಂದ 204.5 ಎಂ.ಎಂ. ವರೆಗಿನ ಮಳೆ) ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಘೋಷಿಸಲಾಗಿದೆ. ಗುಡ್ಡಗಳಿಂದ ಬಂಡೆಕಲ್ಲು ಉರುಳುವ/ಮಣ್ಣು ಕುಸಿಯುವ ಸಾಧ್ಯತೆಯಿರುವ ಪ್ರದೇಶಗಳಲ್ಲದೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ವಾಸಿಸುವವರೂ ಜಿಲ್ಲಾಡಳಿತೆಯ ಆದೇಶ ಲಭಿಸಿದ ತತ್‍ಕ್ಷಣ ಸುರಕ್ಷಿತ ಪ್ರದೇಶಗಳಿಗೆ
ಸ್ಥಳಾಂತರಗೊಳ್ಳಲು ಸಿದ್ಧರಾಗಬೇಕು. ಆರೆಂಜ್ ಅಲೆರ್ಟ್ ಘೋಷಿಸಲಾದ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಸರಕಾರಿ ಸಿಬ್ಬಂದಿಗಳು ಅಗತ್ಯದ ಸಿದ್ಧತೆ ನಡೆಸಲು, ತಾಲೂಕು ಮಟ್ಟದಲ್ಲಿ ನಿಯಂತ್ರಣಕೊಠಡಿಗಳನ್ನು ಆರಂಭಿಸಲು ರಾಜ್ಯ ದುರಂತ ನಿವಾರಣೆ ಪ್ರಾ„ಕಾರ ಆದೇಶ ನೀಡಿದೆ.