ಕಾಸರಗೋಡು: ಜಿಲ್ಲಾ ಕಂದಾಯ ಇಲಾಖೆಯಲ್ಲಿ ಇನ್ ಫ್ರಾ ರೆಡ್ ಥರ್ಮೋ ಮೀಟರ್ ಚಟುವಟಿಕೆ ಆರಂಭಿಸಲಾಗಿದೆ. ತಿರುವನಂತಪುರಂ ಲ್ಯಾಂಡ್ರೆವೆನ್ಯೂ ಕಮೀಷನರ್ ಕಾಸರಗೋಡು ಜಿಲ್ಲಾ ಕಂದಾಯ ಕಚೇರಿಗೆ ವಿತರಣೆ ನಡೆಸಿರುವ ಥರ್ಮೋ ಮಿಟರ್ ನ ಚಟುವಟಿಕೆ ಈ ಮೂಲಕ ಆರಂಭ ಮಾಡಲಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ದೈಹಿಕ ಉಷ್ಣಾಂಶ ತಪಾಸಣೆ ನಡೆಸುವ ಮೂಲಕ ಥರ್ಮೋ ಮೀಟರ್ ಚಟುವಟಿಕೆಗಳಿಗೆ ಚಾಲನೆ ಲಭಿಸಿದೆ. ಹುಸೂರು ಶಿರಸ್ತೇದಾರ್ ಕೆ.ಮುರಳೀಧರನ್, ಹಣಕಾಸು ಅಧಿಕಾರಿ ಕೆ.ಸತೀಶನ್, ಕಂದಾಯ ಇಲಾಖೆ ಸಿಬ್ಬದಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲೆಯ ಗ್ರಾಮ ಕಚೇರಿಗಳು, ಆರ್.ಡಿ. ಕಚೇರಿಗಳು, ತಾಲೂಕು ಕಚೇರಿಗಳು ಮೊದಲಾದ ಕಂದಾಯ ಇಲಾಖೆ ವ್ಯಾಪ್ತಿಯ ಕಚೇರಿಗಳಿಗೆ ತಿರುವನಂತಪುತರಂ ಲ್ಯಾಂಡ್ ರೆವೆನ್ಯೂ ಕಮೀಷನರ್ 108 ಇನ್ ಫ್ರಾ ರೆಡ್ ಮೀಟರ್ ಗಳನ್ನು ವಿತರಣೆ ನಡೆಸಿದ್ದರು. ಕೋವಿಡ್ 19 ರ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ವ್ಯಾಪ್ತಿಯ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರದೇಹದ ಉಷಾಂಶ ತಪಾಸಣೆಗಾಗಿ ಈ ಇನ್ ಫ್ರಾ ರೆಡ್ ಥರ್ಮೋ ಮೀಟರ್ ಗಳನ್ನು ವಿತರಿಸಲಾಗಿದೆ.