ಮಂಜೇಶ್ವರ: ಪೆÇಲೀಸ್ ಇಲಾಖೆಯ ನಿಷ್ಕ್ರಿಯತೆ ವಿರುದ್ಧ ಬಿಜೆಪಿ ಸೋಮವಾರ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ವನ್ನು ಸಂಜೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಂಜೇಶ್ವರ ಮಂಡಲ ಪ್ರಭಾರಿ ನ್ಯಾಯವಾದಿ ಸದಾನಂದ ರೈ ಯವರು ನಿರಾಹಾರ ನೇತೃತ್ವ ನೀಡಿದ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ರವರಿಗೆ ಪಾನೀಯ ಕೊಟ್ಟು ಕೊನೆಗೊಳಿಸುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿ ಸದಾನಂದ ರೈ ಹಲವಾರು ಧಾರ್ಮಿಕ ಕ್ಷೆತ್ರಕ್ಕೆ ಹಾನಿ ಮಾಡಿದರು, ಕೊಲೆ ಯತ್ನ, ದರೋಡೆ ಮುಂತಾದ ಹಲವಾರು ಕುಕೃತ್ಯಗಳಲ್ಲಿ ಆರೋಪಿಗಳಾದವರನ್ನು ಬಂಧಿಸದೆ ಇರುವುದು ಖಂಡನೀಯ. ಒಂದು ದಿನದ ನಿರಾಹಾರದಿಂದ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ ರಾಜ್ಯ ಸಮಿತಿ ನೇತಾರ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಮಾತನಾಡಿ ಕೊರೊನ ಸಂದರ್ಭದಲ್ಲಿ ಪೆÇಲೀಸ್ ಇಲಾಖೆ ಸೇವೆ ಶ್ಲಾಘನೀಯ. ಆದರೆ ಇದರ ಹೆಸರಲ್ಲಿ ಕ್ರಿಮಿನಲ್ ಗಳನ್ನು ಬಂಧಿಸದಿರುವುದು ನಾಚಿಕೆ ಗೇಡಿನ ವಿಷಯ ಎಂದರು.
ಮಣಿಕಂಠ ರೈ ಮಾತನಾಡಿ ಪೆÇಲೀಸ್ ಇಲಾಖೆ ಎಲ್ ಡಿಎಫ್ , ಯುಡಿಎಫ್ ಪ್ರತಿನಿಧಿಗಳಂತೆ ಕೆಲಸ ಮಾಡುವಂತೆ ವರ್ತಿಸುತ್ತಿದೆ. ಆದಷ್ಟು ಶೀಘ್ರ ಎಲ್ಲಾ ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡದಿದ್ದಲ್ಲಿ ಬಿಜೆಪಿ ಹೋರಾಟ ಮಾಡುವುದು ಅನಿವಾರ್ಯ ಎಂದರು. ಮೈನೋರಿಟಿ ಮೋರ್ಚಾ ಮಂಡಲ ಅಧ್ಯಕ್ಷ ವಿನ್ಸಿ ಡಿ ಸೋಜ, ಒಬಿಸಿ ರಾಜ್ಯ ನೇತಾರ ನ್ಯಾಯವಾದಿ ನವೀನ್ ರಾಜ್, ಬಿಜೆಪಿ ಮಂಡಲ ಕಾರ್ಯದರ್ಶಿ ಸಂತೋಷ ದೈಗೋಳಿ, ಉಪಾಧ್ಯಕ್ಷ ಬಾಬು ಮಾಸ್ತರ್, ಯಾದವ ಬಡಾಜೆ, ಬಿಜೆಪಿ ನೇತಾರ ಅಬ್ದುಲ್ಲ ಮೊದಲಾದವರು ಭೇಟಿ ನೀಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.