ಕುಂಬಳೆ: ಕೊರೊನಾದ ಸಾಂಕ್ರಾಮಿಕ ಸಾಧ್ಯತೆಗಳ ಬಗ್ಗೆ ಮಾಹಿತಿಕಲೆ ಹಾಕಲು ತೆರಳಿದ್ದ ಆರೋಗ್ಯ ಕಾರ್ಯಕರ್ತರನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಕುಂಬಳೆ ಪೆÇಲೀಸರು 20 ಮಂದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಅಧಿಕೃತ ಕಾರ್ಯಚಟುವಟಿಕೆಗೆ ಅಡ್ಡಿಯುಂಟುಮಾಡಿದ ಮತ್ತು ಆರೋಗ್ಯ ಕಾನೂನು ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯರ ಬೆದರಿಕೆಯಿಂದಾಗಿ ಕುಂಬಳೆ ಪೆರ್ವಾಡ್ ಬೀಚ್‍ನಲ್ಲಿ ಕರ್ತವ್ಯಕ್ಕೆ ತೆರಳಿದವರು ಮರಳಬೇಕಾದ ಘಟನೆಯ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಾಲ್ಕು ಜನರ ವೈದ್ಯರನ್ನೊಳಗೊಂಡ ಎಂಟು ಮಂದಿ ಆರೋಗ್ಯ ಕಾರ್ಯಕರ್ತರ ತಂಡವು 16 ಜನರ ಜೊಲ್ಲು ಪರೀಕ್ಷೆಗೆ ಪೆರ್ವಾಡ್ ಪರಿಸರಕ್ಕೆ ತೆರಳಿತ್ತು. ಕಡಲತೀರದ ಸಾಮಾಜಿಕ ಉಪ ಕೇಂದ್ರದಲ್ಲಿ ಪರೀಕ್ಷೆಗಳು ನಡೆಯಬೇಕಿತ್ತು. ಆರೋಗ್ಯ ಉಪಕೇಂದ್ರಕ್ಕೆ ತಲಪುತ್ತಿರುವಂತೆ 12 ಮಂದಿಗಳ ಪರೀಕ್ಷೆ ನಡೆಸುತ್ತಿರುವಂತೆ ಸ್ಥಳೀಯ ನಿವಾಸಿಗಳ ತಂಡವೊಂದು ಆಗಮಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿತೆಂದು ಆರೋಗ್ಯಾಧಿಕಾರಿಗಳ ತಂಡ ತಿಳಿಸಿದೆ. ಬಳಿಕ ಕರ್ತವ್ಯ ನಿರ್ವಹಿಸಲು ಅಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣವಾದುದರಿಂದ ಆರೋಗ್ಯ ಇಲಾಖೆಯ ತಂಡ ಮರಳಿತು.
ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವಾಕರ ರೈ ಅವರ ದೂರಿನ ಮೇರೆಗೆ 20 ಮಂದಿ ಸ್ಥಳೀಯರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಡಾ.ಸಿದ್ದಾರ್ಥ ರವೀಂದ್ರನ್, ಡಾ.ಶಹೀಲ್ ಹಸದ್, ಡಾ.ದಿವ್ಯ ಮೊದಲಾದವರು ತಂಡದಲ್ಲಿದ್ದರು.