ಕಾಸರಗೋಡು: ಕಾಸರಗೋಡಿನಿಂದ ಪೆÇಳಿಯೂರು ವರೆಗಿನ ಕಡಲ ತೀರದಲ್ಲಿ 2 ರಿಂದ 3.5 ವರೆಗಿನ ಎತ್ತರದ ತೆರೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಮುದ್ರ ಸ್ಥಿತಿ ಅಧ್ಯಯನ ಕೇಂದ್ರ(ಐ.ಎನ್.ಸಿ.ಒ.ಐ.ಎಸ್.) ತಿಳಿಸಿದೆ. ಕರಾವಳಿ ನಿವಾಸಿಗಳು ಜಾಗರೂಕತೆ ಪಾಲಿಸಬೇಕು. ಮೀನುಗಾರಿಕೆ ಉಪಕರಣಗಳ ಸುರಕ್ಷತೆ ಖಚಿತಪಡಿಸಬೇಕು. ಮೀನುಗಾರಿಕೆ ವಾಹನಗಳು(ಬೋಟು, ನಾಡದೋಣಿ ಇತ್ಯಾದಿ) ಹಾರ್ಬರ್‍ನಲ್ಲಿ ಸುರಕ್ಷಿತವಾಗಿ ಕಟ್ಟುಹಾಕಿ ಇರಿಸಬೇಕು ಎಂದು ತಿಳಿಸಲಾಗಿದೆ.
ಎರಡು ಮನೆಗೆ ಹಾನಿ : ಮಳೆಯಿಂದ ಮಜಿಬೈಲು ನಿವಾಸಿ ಸರಸ್ವತಿ ಅವರ ಹೆಂಚಿನ ಮನೆಯ ಛಾವಣಿ ಕುಸಿದು ಬಿದ್ದಿದೆ. ಹೊಸಂಗಡಿ ಚೇತನ ನಗರ ನಿವಾಸಿ ಕೃಷ್ಣ ವೈದ್ಯರ್ ಅವರ ಮನೆಯ ಹಿಂಬದಿಯ ಬಚ್ಚಲು, ಅಡುಗೆ ಕೋಣೆಯ ಮಾಡು ಕುಸಿದಿದೆ.
ವಿದ್ಯುತ್ ಮೊಟಕು : ಗಾಳಿ ಮಳೆಯಿಂದ ಮರವೊಂದು ಬಿದ್ದು ವಿದ್ಯುತ್ ಕಂಬ ತುಂಡಾಗಿ ತಂತಿಗಳು ಚೆಲ್ಲಾಪಿಲ್ಲಿಯಾದ ಘಟನೆ ಸೋಂಕಾಲು ಕೊಡಂಗೆಯಲ್ಲಿ ಸಂಭವಿಸಿದೆ.
ರಸ್ತೆ ಬದಿಯ ಮರವೊಂದು ಮುರಿದು ವಿದ್ಯುತ್ ತಂತಿಗೆ ಬಿದ್ದು ಕಂಬ ಮುರಿದಿದೆ. ಇದರಿಂದಾಗಿ ವಿದ್ಯುತ್ ಮೊಟಕುಗೊಂಡಿತು.