ಕುಂಬಳೆ/ಬದಿಯಡ್ಕ: ಜಿಲ್ಲೆಯ ಬಹುತೇಕ ಎಲ್ಲೆಡೆ ಬುಧವಾರ ಸಾಮಾನ್ಯದಿಂದ ಭಾರಿ ಮಳೆಯಾಗಿದೆ. ಕಾಸರಗೋಡು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬಲವಾದ ಗಾಳಿಗೆ ಮರ ಮುರಿದು ಬಿದ್ದು ವಾಟರ್ ಟ್ಯಾಂಕ್ ನಾಶಗೊಂಡಿದೆ.
ಶಾಲಾ ಕಂಪೌಂಡ್‍ನೊಳಗೆ ಟಾಯ್ಲೆಟ್‍ನ ಮೇಲೆ ಸ್ಥಾಪಿಸಿದ್ದ ಟ್ಯಾಂಕ್ ನಾಶಗೊಂಡಿದ್ದು, ಕಟ್ಟಡಕ್ಕೂ ಹಾನಿಯಾಗಿದೆ. ಅಗ್ನಿಶಾಮಕ ದಳ ಮುರಿದು ಬಿದ್ದ ಮರವನ್ನು ತೆರವುಗೊಳಿಸಿತು.
256.8 ಮಿ.ಮೀ. ಮಳೆ ಲಭ್ಯ : ಕಾಸರಗೋಡು ಜಿಲ್ಲೆಯಲ್ಲಿ ಕಳೆದ 24 ತಾಸುಗಳಲ್ಲಿ 256.8 ಮಿ.ಮೀ. ಮಳೆ ಲಭಿಸಿದೆ ಎಂದು ಜಿಲ್ಲಾ ದುರಂತ ನಿವಾರಣೆ ವಿಭಾಗ ತಿಳಿಸಿದೆ.