ನವದೆಹಲಿ: ಪೂರ್ವ ಲಡಾಖ್ ನ ವಾಸ್ತವಿಕ ನಿಯಂತ್ರಣ ರೇಖೆ-ಎಲ್ ಎಸಿ ಬಳಿ ಚೀನಾದೊಂದಿಗೆ ಭಿನ್ನಭಿಪ್ರಾಯ ಹೆಚ್ಚುತ್ತಿರುವಂತೆ ಲೆಹ್ ನಲ್ಲಿ ಬೀಡು ಬಿಟ್ಟಿರುವ ಉತ್ತರ ಸೇನಾ ಕಮಾಂಡ್ ಮುಖ್ಯಸ್ಥರು ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.
ಉದ್ದಮ್ ಪುರ ಮೂಲದ ಉತ್ತರ ಕಮಾಂಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ, ಗುರುವಾರದವರೆಗೂ ಲೆಹ್ ನಲ್ಲಿಯೇ ಇರಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಭಿನ್ನಾಭಿಪ್ರಾಯ ಬಗೆಹರಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯ ಹಿರಿಯ ಉನ್ನತ ಅಧಿಕಾರಿಗಳು ಹಾಗೂ ಚೀನಾದ ಪೀಪಲ್ ಲಿಬರೇಷನ್ ಪಡೆಯೊಂದಿಗೆ ಮಾತುಕತೆ ನಡೆಸಲು ಈ ಭೇಟಿ ನೀಡಿದ್ದಾರೆ. ಭಿನ್ನಾಭಿಪ್ರಾಯ ಬಗೆಹರಿಸುವ ನಿಟ್ಟಿನಲ್ಲಿ ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್ ಲಿಬರೇಷನ್ ಪಡೆಯೊಂದಿಗೆ ಹಲವು ಬಾರಿ ಸಭೆ ನಡೆದಿದೆ. ಆದಾಗ್ಯೂ, ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಗಡಿಯಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ಉದ್ದೇಶದಿಂದ ಭಾರತೀಯ ಮತ್ತು ಚೀನಾದ ಕಡೆಯ ಪ್ರಮುಖ ಜನರಲ್ ಕಮಾಂಡರ್‍ಗಳು ಜೂನ್ 2 ರಂದು ಲಡಾಖ್ ನ ಎಲ್‍ಎಸಿಯಲ್ಲಿ ಸಭೆ ಸೇರಿದ್ದರು.
ಈ ಮಧ್ಯೆ ಚೀನಾ ಹೆಚ್ಚಿನ ಸಂಖ್ಯೆಯ ಸೈನಿಕರು ಎಲ್ ಎಸಿಗೆ ಕಳುಹಿಸಿದೆ, ಇದನ್ನು ನೋಡಿದ ಭಾರತ ಕೂಡಾ ತನ್ನ ಸೈನಿಕರನ್ನು ನಿಯೋಜಿಸಿದೆ.ಎಲ್ ಎಸಿ ಯುದ್ದಕ್ಕೂ ಮೇ 5ರಿಂದಲೂ ನಾಲ್ಕು ಸ್ಥಳಗಳಲ್ಲಿ ಹದ್ದಿನ ಕಣ್ಣು ಇಡಲಾಗಿದ್ದು, ಉಭಯ ದೇಶಗಳು 1 ಸಾವಿರ ಸೈನಿಕರನ್ನು ನಿಯೋಜಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿವೆ.