ಕಾಸರಗೋಡು: ಮಲಪ್ಪುರಂ ಜಿಲ್ಲೆಯ ವಳಾಂಜೇರಿಯಲ್ಲಿ ದಲಿತ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೈಯ್ಯಲು ಕೇರಳ ಸರಕಾರದ ಹಠಮಾರಿತನ ಕಾರಣವೆಂದು ಆರೋಪಿಸಿ ಯುವಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಶಿಕ್ಷಣ ಕಚೇರಿಯನ್ನು ದಿಗ್ಬಂದಿಸಿತು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಆನ್‍ಲೈನ್ ತರಗತಿ ನಡೆಸಲು ತೀರ್ಮಾನಿಸಿದವರು ಸಾಕಷ್ಟು ಸೌಕರ್ಯಗಳನ್ನು ಹಾಗು ಪೂರ್ವ ಸಿದ್ಧತೆಯನ್ನು ಮಾಡದಿರುವುದು ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣವಾಯಿತು ಎಂದು ಯುವಮೋರ್ಚಾ ಆರೋಪಿಸಿದೆ. ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು ಆಗ್ರಹಿಸಿದರು. ಕಾಸರಗೋಡು ಮಂಡಲ ಅಧ್ಯಕ್ಷ ರಕ್ಷಿತ್ ಕೆದಿಲಾಯ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷೆ ಅಂಜು ಜೋಸ್‍ಟಿ, ಕೋಶಾ„ಕಾರಿ ಜಿತೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಮೊದಲಾದವರು ಮಾತನಾಡಿದರು.