ಭಾಗ 03:
ಈ ರೋಗ ಅಡಗಿ ಕುಳಿತಾಗ ಆಗುವ ತೊಂದರೆಗಳು ಒಂದೆರಡಲ್ಲ. ಮೊದಲಿಗೆ ರೋಗವೇನೆಮದು ತಿಳಿಯುವುದಿಲ್ಲ. ಅಜ್ಞಾತವಾಗಿ ಅಡಗಿ ಕುಳಿತ ಗಜಕರ್ಣಕ್ಕೆ ಎನ್ನುತ್ತೇವೆ. ಇದು ನೋಡಲು ಗಜಕರ್ಣದಂತೆ ಕಾಣುವುದಿಲ್ಲ. ಇತ್ತೀಚೆಗೆ ನಾವು ಸಾಮಾನ್ಯವಾಗಿ ಈ ರೀತಿಯ ರೋಗವನ್ನು ನೋಡುತ್ತೇವೆ. ಇತ್ತೀಚೆಗೆ ಮಕ್ಕಳಲ್ಲಿ ಮತ್ತು ಸ್ತ್ರೀಯರಲ್ಲಿ ಈ ರೋಗ ಹೆಚ್ಚು ಕಂಡುಬರುತ್ತಿದೆ. ಹಿಂದೆ ಮಕ್ಕಳಲ್ಲಿ ತಲೆಯಲ್ಲಿ ಈ ರೋಗ ಸಾಮಾನ್ಯವೆಂಬಂತೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಚಿಕ್ಕ ಮಕ್ಕಳಲ್ಲಿ ದೊಡ್ಡ-ದೊಡ್ಡ ವೃತ್ತಾಕಾರದಲ್ಲಿ ಮತ್ತು ಮೈಯಲ್ಲಿ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಯಾಕೆಂದರೆ ಈಗ ಈ ಫಂಗಸ್ ಮನೆಯ ಹಲವು ಸದಸ್ಯರಲ್ಲಿ ಇರುತ್ತದೆ ಮತ್ತು ಈ ಫಂಗಸ್ ಮೊದಲಿನ ಕಾಲದ ಫಂಗಸ್ ಗಳಿಗಿಂತ ಹೆಚ್ಚು ಸಾಂಕ್ರಾಮಿಕ() ಹಾಗೂ ಆಕ್ರಮಿಕ(). ಹಾಗಾಗಿ ಮನೆಯಲ್ಲಿ ಯಾರೆಲ್ಲ ಈ ರೋಗ ಬಾಧಿತರೋ ಅವರೆಲ್ಲರೂ ಒಂದೇ ಬಾರಿಗೆ ಚಿಕಿತ್ಸೆಗೊಳಗಾಗುವುದು ಉತ್ತಮ. ಸ್ಕೇಬೀಸ್ ರೋಗದ ಚಿಕಿತ್ಸೆಯಂತೆ ಮನೆಯಲ್ಲಿ ಒಬ್ಬರಿಗೆ ಈ ರೋಗ ಗುಣವಾಗದಿದ್ದರೂ ಅದು ಪುನಃ ಮರುಕಳಿಸಬಹುದು.
ಇತ್ತೀಚೆಗೆ ನಾವು ವೃತ್ತಾಕಾರದಲ್ಲಿ ಮೈಯನ್ನೆಲ್ಲ ವ್ಯಾಪಿಸುವ ರೋಗವನ್ನು ಹೆಚ್ಚು ನೋಡುತ್ತೇವೆ. ಇದನ್ನು ಚೀನಿಯ ಸೂಡೋ ಇಂಬ್ರಿಕೇಟ ಎನ್ನುತ್ತೇವೆ. ಇದು ಹೆಚ್ಚಾಗಿ ದೇಹದ ಪ್ರತಿರೋಧ ಶಕ್ತಿ ಕಡಿಮೆ ಇರುವಲ್ಲಿ ಮತ್ತು ಸ್ಟೀರೋೈಡ್ ಮಿಶ್ರಿತ ಫಂಗಸ್ ನಿರೋಧಕ ಮುಲಾಮುಗಳನ್ನು ಉಪಯೋಗಿಸುವುದರಿಂದ ಆಗುತ್ತದೆ.
ಈ ರೀತಿಯ ಸ್ಟೀರೋೈಡ್ ಕ್ರೀಮುಗಳು ದೇಹದ ಪ್ರತಿರೋಧ ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ರೋಗ ಲಕ್ಷಣವನ್ನು ಕಡಿಮೆ ಮಾಡುತ್ತದೆ. ಕೆಲವೊಂದು ಬಾರಿ ಎರಡು ಅರ್ಧ ವೃತ್ತಾಕಾರದ ಕೆಂಪು ನಾಣ್ಯದ ರೀತಿಯಲ್ಲಿ () ಈ ರೋಗ ಕಾಣಿಸುತ್ತದೆ. ಇದು ಅತಿಯಾದ ಸ್ಟೀರೊೈಡ್ ಕ್ರೀಮಿನ ಬಳಕೆಯನ್ನು ನಮಗೆ ತಿಳಿಸುತ್ತದೆ. ದೊಡ್ಡ ಗಾತ್ರದ ತುರಿಕೆಯಲ್ಲಿ ಒಳಬದಿ ಒಣಗಿಕೊಂಡಿರುವುದಿಲ್ಲ. ಬದಲಾಗಿ, ತುರಿಕೆ, ನೀರಿನಿಂದ ಕೂಡಿದ ಚಿಕ್ಕ-ಚಿಕ್ಕ ಗುಳ್ಳೆಗಳು () ಬರಬಹುದು.
ಡಾ.ಪ್ರಸನ್ನಾ ನರಹರಿ.ಕಾಸರಗೋಡು
ನಾಳೆಗೆ ಮುಂದುವರಿಯುವುದು......