HEALTH TIPS

ನಿಗಾದಲ್ಲಿರುವವರನ್ನು ಕರೆತರುವ ವಾಹನಗಳನ್ನು ಗಮ್ಯ ಸ್ಥಾನದಲ್ಲಿ ಮಾತ್ರ ನಿಲುಗಡೆ ಮಾಡಬೇಕು: ಎಸ್.ಪಿ

    .
         ಕಾಸರಗೋಡು: ಇತರ ರಾಜ್ಯಗಳಿಂದ, ವಿದೇಶಗಳಿಂದ ಆಗಮಿಸುವವರಲ್ಲಿ ನಿಗಾದಲ್ಲಿರುವಂತೆ ಆದೇಶಕ್ಕೊಳಗಾದವರು ಬರುವ ವಾಹನಗಳನ್ನು ಗಮ್ಯ ಸ್ಥಾನದಲ್ಲಿ ಮಾತ್ರ ನಿಲುಗಡೆ ಮಾಡಬೇಕು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿರುವರು.
       ಇಂಥವರು ಸಂಚರಿಸುವ ವಾಹನಗಳನ್ನು ಪೆÇಲೀಸರು ಕೊಡಮಾಡುವ "ಕೋವಿಡ್-19 ಎಮರ್ಜೆನ್ಸಿ" ಎಂಬ ಸ್ಟಿಕ್ಕರ್ ಅಂಟಿಸಲಾಗುವುದು. ಈ ವಾಹನಗಳು ಆಯಾ ಪ್ರದೇಶಗಳಲ್ಲಿ ಸಿದ್ಧಪಡಿಸಲಾದ ಕ್ವಾರೆಂಟೈನ್ ಕೇಂದ್ರಗಳಲ್ಲಿ/ ಮನೆಗಳಲ್ಲಿ ಮಾತ್ರ ನಿಲುಗಡೆ ಮಾಡಿ ಜನರನ್ನು ಕೆಳಕ್ಕಿಳಿಸಬೇಕು ಎಂದವರು ನುಡಿದರು. ಈ ಆದೇಶವನ್ನು ಉಲ್ಲಂಘಿಸಿ ವಾಹನವನ್ನು ಯಾವುದಾದರೂ ಜಂಕ್ಷನ್ ನಲ್ಲಿ, ಪೇಟೆಗಳಲ್ಲಿ ನಿಲುಗಡೆ ಮಾಡಿ, ನಿಗಾದಲ್ಲಿರಬೇಕಾದವರನ್ನು ಕೆಳಗಿಳಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂಥಾ ಉಲ್ಲಂಘನೆ ಕಂಡುಬಮದಲ್ಲಿ ಸಾರ್ವಜನಿಕರು ದೂರುವಾಣಿ ನಂಬ್ರ 112, 1090, 04994257371, 9497980941 ಗಳಲ್ಲಿ ಯವುದದರೂ ಒಂದು ನಂಬ್ರಕ್ಕೆ ಕರೆಮಾಡಿ ಪೆÇಲೀಸರಿಗೆ ಮಾಹಿತಿ ನೀಡಬಹುದು ಎಂದವರು ಹೇಳಿರುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries