ಕಾಸರಗೋಡು: ವಾಹನ ತೆರಿಗೆ ಪಾವತಿ ಬಾಕಿ ಸಂಬಂಧ ಪ್ರಕರಣಗಳಲ್ಲಿ ಏಕಗವಾಕ್ಷಿ (ಒಂದೇ ಕಂತಿನಲ್ಲಿ) ತೀರ್ಪು ಒದಗಿಸುವ ಯೋಜನೆ ಮೂಲಕ ಬಗೆಹರಿಸಬಹುದಾಗಿದೆ.
4 ವರ್ಷ ಯಾ ಅದಕ್ಕಿಂತ ಅಧಿಕ ಅವಧಿಯಲ್ಲಿ ವಾಹನ ತೆರಿಗೆ ಪಾವತಿ ನಡೆಸದೇ ಇದ್ದ ಸಂದರ್ಭ ಈ ಸೌಲಭ್ಯ ಪ್ರಯೋಜನಕಾರಿಯಾಗಿದೆ. ಯೋಜನೆ ಪ್ರಕಾರ ಖಾಸಗಿ ವಾಹನಗಳ ತೆರಿಗೆ, ಅಧಿಕ ತೆರಿಗೆ, ಬಡ್ಡಿ ಸಹಿತ ಮೊಬಲಗಿನ ಶೇ 40 ಮಾತ್ರ ಪಾವತಿಸಿದರೆ ಸಾಕು ಎಂಬುದು ಇಲ್ಲಿ ಗಮನಾರ್ಹ ವಿಚಾರ. ಸಾರ್ವಜನಿಕ ವಾಹನಗಳಿಗೆ ಶೇ 30 ಮೊಬಲಗು ಪಾವತಿಸಿದರೆ ಸಾಕು. ಈ ಮೂಲಕ ಕಾನೂನು ಕ್ರಮಗಳಿಂದ ಪಾರಾಗಿ, ನೋಂದಣಿ ನಂಬ್ರ ರದ್ದುಗೊಳಿಸಬಹುದು. ಈಗ ಸದ್ರಿ ವಾಹನ ಹೊಂದಿಲ್ಲ ಎಂಬ ಬಗ್ಗೆ ಸತ್ಯವಾuಟಿಜeಜಿiಟಿeಜ್ಮಲ 100 ರೂ.ನ ಛಾಪಾಪತ್ರದಲ್ಲಿ ಮಾಲೀಕ ಯಾ ನಾಮಿನಿ ಕಾಸರಗೋಡು ಆರ್.ಟಿ.ಒ. ಕಚೇರಿಯಲ್ಲಿ ಅಥವಾ ಕಾಞಂಗಾಡ್ ಸಬ್ ಆರ್.ಟಿ.ಒ. ಕಚೇರಿಯಲ್ಲಿ ಯಾ ವೆಳ್ಳರಿಕುಂಡ್ ಸಬ್ ಆರ್.ಟಿ.ಒ. ಕಚೇರಿಯಲ್ಲಿ ಸಲ್ಲಿಸಿ, ನಿಗದಿತ ತೆರಿಗೆ ಪಾವತಿಸಿ, ಕಂದಾಯ ವಸೂಲಾತಿ ಕ್ರಮಗಳಿಂದ ಪಾರಾಗಬಹುದು.
ಪ್ರಯೋಜನ ಯಾರ್ಯಾರಿಗೆ?:
ಹಸ್ತಾಂತರಗೊಂಡ ವಾಹನ ಈಗ ಎಲ್ಲಿದೆ ಎಂದು ತಿಳಿಯದೇ ಇರುವವರಿಗೆ, ತೆರಿಗೆ ಬಾಕಿ ಸಂಬಂಧ ನೋಟೀಸು ಲಭಿಸಿದವರಿಗೆ, ಆರ್.ಸಿ. ಪುಸ್ತಕ ಸರೆಂಡರ್ ನಡೆಸದೇ ವಾಹನ ಧ್ವಂಸ ಗೊಳಿಸಿದವರಿಗೆ, ಅಸಲಿ ಆರ್.ಸಿ. ಪುಸ್ತಕ ಇಲ್ಲದ ಕಾರಣ ಆರ್.ಸಿ. ರದ್ದುಗೊಳಿಸಲು ಸಾಧ್ಯವಾಗದೇ ಇರುವವರಿಗೆ, ಕಲ್ಯಾಣ ನಿಧಿಗೆ ಕಂತು ಪಾವತಿ ಬಾಕಿಯಿದ್ದು ಮಾಲೀಕರು ನಿಧನರಾಗಿ , ಮರಣಾನಂತರ ಹಸ್ತಾಂತರ ಸಾಧ್ಯವಾಗದೇ ಇರುವವರಿಗೆ, ಪರವಾನಗಿ ಸರೆಂಡರ್ ನಡೆಸಿ ಕಾರು ದರದಲ್ಲಿ ತೆರಿಗೆ ಪಾವತಿಸಿದ್ದ ಬಸ್ ಮಾಲೀಕರಿಗ, ಖರೀದಿಸಿದ ವ್ಯಕ್ತಿ ಹೆಸರು ಬದಲಿಸಿದ ಕಾರಣ ತೆರಿಗೆ ಬಾಕಿ ಸಂಬಂಧ ಇತರ ಕಾನೂನು ಸಮಸ್ಯೆ ಹೊಂದಿರುವವರು, ತೆರಿಗೆ ಪಾವತಿ ಸಾಧ್ಯವಾಗದೆ ನೋಂದಣಿ ನಂಬ್ರ, ಮಾಲೀಕತನ ಹಕ್ಕು ಕಾನೂನು ರೀತ್ಯಾ ಲಭ್ಯತೆ ಇನ್ನೂ ಬಾಕಿಯಿರುವ ಮಂದಿ, ಜಿ-ಫಾರಂ ಅರ್ಜಿ ಸಲ್ಲಿಕೆ ಸಾಧ್ಯವಾಗದೇ ಇರುವವರು, ತೆರಿಗೆ ಬಾಕಿ ಸಂಬಂಧ ಮುಂದಿನ ದಿನಗಳಲ್ಲಿ ಕಾನೂನು ರೀತ್ಯಾ ಸಮಸ್ಯೆ ಸಾಧ್ಯತೆಯಿರುವವರು ಮೊದಲಾದವರಿಗೆ ಇದು ಪರಿಹಾರಕ್ಕೆ ಸದವಕಾಶವಾಗಿದೆ. ಬುಧವಾರ ಹೊರತುಪಡಿಸಿ ಉಳಿದ ಚಟುವಟಿಕೆಗಳ ದಿನಗಳಲ್ಲಿ ಮಧ್ಯಾಹ್ನ 1 ಗಂಟೆ ವರೆಗೆ ಸಾಕ್ಷ್ಯಪತ್ರ ಸಲ್ಲಿಸಬಹುದಾಗಿದೆ. ಹೆಚ್ಚುವರಿ ಮಾಹಿತಿಗೆ ಆರ್.ಟಿ.ಒ. ಕಚೇರಿಯನ್ನು (ದೂರವಾಣಿ ಸಂಖ್ಯೆ: 04994-255290) ಸಂಪರ್ಕಿಸಬಹುದು.