ಕಾಸರಗೋಡು: ಸುಭಿಕ್ಷ ಕೇರಳಂ ಯೋಜನೆಯ ಪ್ರಚಾರಾರ್ಥ ಕುಟುಂಬಶ್ರೀ ನೇತೃತ್ವದಲ್ಲಿ ಕಿರುಚಿತ್ರ ನಿರ್ಮಿಸಿದ್ದು, ಬಿಡುಗಡೆ ಮಾಡಲಾಗಿದೆ. ರಾಜ್ಯ ಮಟ್ಟದ ಕಿರುಚಿತ್ರ ಪ್ರಶಸ್ತಿ ವಿಜೇತ ಸಂತೋಷ್ ಪೆರಿಂಙÉೂೀತ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಚೆರುವತ್ತೂರು ನಿವಾಸಿ ಉಣ್ಣಿರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು ಕಿರುಚಿತ್ರ ಪ್ರಕಾಶನ ನಡೆಸಿದರು. ಮಕ್ಕಳು, ಮಹಿಳೆಯರು, ನಿವಾಸಿಗಳು, ಪರಿಶಿಷ್ಟ ಜನಾಂಗದ ಮಂದಿ, ಸರಕಾರಿ ಸಿಬ್ಬಂದಿ ಸಹಿತ ಸಾರ್ವಜನಿಕರು ಕೃಷಿ ರಂಗಕ್ಕೆ ಗಮನ ಹರಿಸುವಂತೆ ಮಾಡುವುದು ಈ ಚಿತ್ರದ ಪ್ರಧಾನ ಉದ್ದೇಶ.