ಮಂಜೇಶ್ವರ: ರಾಜ್ಯ ಸರ್ಕಾರದ ಸುಭಿಕ್ಷ ಕೇರಳಂ ಯೋಜನೆ ಚುರುಕುಗೊಳಿಸುವ ನಿಟ್ಟಿನಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ವತಿಯಿಂದ ವಿಶೇಷ ಯೋಜನೆ ಜಾರಿಗೊಳ್ಳುತ್ತಿದೆ.
ಈ ಯೋಜನೆಯ ಅಂಗವಾಗಿ ಕೃಷಿಕರಿಗೆ ವಿವಿಧ ಕೃಷಿ ಉಪಕರಣಗಳನ್ನು ಹಸ್ತಾಂತರಿಸಲಾಗಿದೆ. 46 ಲಕ್ಷ ರೂ. ಮೌಲ್ಯದ ಮಿನಿ ಟ್ರ್ಯಾ ಕಟ್ರ್, ರೀಪ್ಪರ್, ಪವರ್ ಟಿಲ್ಲರ್, ಟ್ರಾನ್ಸ್ ಪ್ಲಾಂಟರ್ ಸಹಿತ 21 ಯಂತ್ರಗಳು ಈ ನಿಟ್ಟಿನಲ್ಲಿ ವಿತರಣೆಗೊಂಡಿವೆ. ಬ್ಲಾಕ್ ಪಂಚಾಯತಿ ಯ ಯೋಜನೆ ನಿಧಿಯಿಂದ ಮೊಬಲಗು ನೀಡಲಾಗಿದೆ. ಪ್ರತಿ ಗ್ರಾಮಪಂಚಾಯತ್ ನ ಗದ್ದೆ ಸಮಿತಿಗಳ ಮೇಲ್ನೋಟದಲ್ಲಿ ಎಲ್ಲ ಕೃಷಿಕರಿಗೂ ಪುಟ್ಟ ಬೆಲೆಯ ಬಾಡಿಗೆ ಮೂಲಕ ಕೃಷಿ ಉಪಕರಣಗಳ ಬಳಕೆ ನಡೆಸಬಹುದಾದ ಸೌಲಭ್ಯ ಈ ಮೂಲಕ ಲಭಿಸಲಿದೆ. ನಂತರ ಬರಬಹುದಾದ ದುರಸ್ತಿ ಕಾಮಗಾರಿ ಸಹಿತದ ವೆಚ್ಚವನ್ನು ಈ ಬಾಡಿಗೆ ಮೊಬಲಗಿನಿಂದ ಭರಿಸಲಾಗುವುದು.
ಮಂಜೇಶ್ವರವು ಮೂಲತಃ ಕೃಷಿ ಪ್ರಧಾನ ಪ್ರದೇಶವಾಗಿದ್ದರೂ, ಕಳೆದ ಅನೇಕ ವರ್ಷಗಳಿಂದ ಕೂಲಿವೆಚ್ಚ, ಕಾರ್ಮಿಕ ಕೊರತೆ ಇತ್ಯಾದಿ ಕಾರಣಗಳಿಂದ ಕೃಷಿ ವಲಯ ಹಿಂದೇಟು ಹಾಕಿತ್ತು ಎಂದು ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಭಿಪ್ರಾಯಪಡುತ್ತಾರೆ. ಕೋವಿಡ್ ನ ಈ ಅವಧಿಯಲ್ಲಿ ಯಾಂತ್ರೀಕೃತ ಕೃಷಿ ಗೆ ವಿಶೇಷ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಕೃಷಿ ವಲಯದ ಮುಗ್ಗಟ್ಟಿಗೆ ಪರಿಹಾರ ಲಭಿಸಿ, ಪುನಶ್ಚೇತನವೂ ಸಾಧ್ಯವಾಗಲಿದೆ. ಈ ಹಿನ್ನೆಲೆಯಿಂದ ಬ್ಲಾಕ್ ಪಂಚಾಯತ್ ಗಡದ್ದೆ ಸಮಿತಿಗಳ ಮುಖಾಂತರ ಕೃಷಿಕರಿಗೆ ಉಪಕರಣಗಳನ್ನು ವಿತರಿಸುವ ಯೋಜನೆ ಜಾರಿಗೊಳಿಸಿದೆ ಎಂದು ಅವರು ವಿವರಿಸಿದರು.
ಯೋಜನೆಯ ಅಂಗವಾಗಿ ಬ್ಲೋಕ್ ಪಂಚಾಯತ್ ನ 7 ಗ್ರಾಮಪಂಚಾಯತ್ ಗಳ ಕೃಷಿ ಭವನಗಳಲ್ಲಿ ನೋಂದಣಿ ನಡೆಸಿದ ಗದ್ದೆ ಸಿತಿಪದಾಧಿಕಾರಗಳೊಂದಿಗೆ ಮಾತುಕತೆ ನಡೆಸಲಾಗಿತ್ತು. ಇಲ್ಲಿ ಮೂಡಿದ ಅಭಿಪ್ರಾಯಗಳ ಅಂಗವಾಗಿ ಉಪಕರಣಗಳನ್ನು ಆಯ್ಕೆ ಮಾಡಲಾಗಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಕೃಷಿ ಉಪಕರಣಗಳ ವಿತರಣೆ ಉದ್ಘಾಟಿಸಿದರು. ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ, ಫಾತಿಮತ್ ಸುಹರಾ, ಎಣ್ಮಕಜೆ ಗ್ರಾಮಪಂಚಾಯತಿ ಉಪಾಧ್ಯಕ್ಷ ಆಯಿಷಾ ಪೆರ್ಲ, ಬ್ಲಾಕ್ ಪಂಚಾಯತಿ ಸದಸ್ಯ ಸಾಯಿರಾ ಬಾನು, ಬಿ.ಎಂ.ಆಶಾಲತಾ, ಮಿಸ್ ಬಾನಾ, ಕೆ.ಆರ್.ಜಯಾನಂದ, ಪ್ರಸಾದ್ ರೈ, ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಎನ್.ಸುರೇಂದ್ರನ್, ಎ.ಡಿ.ಎ. ನಿಷಾ ಮೊದಲಾದವರು ಉಪಸ್ಥಿತರಿದ್ದರು.