HEALTH TIPS

ಸ್ಯಾನಿಟೈಸರ್ ಪೆಡಲ್ ಮೆಶಿನ್ : ಎಲ್‍ಬಿಎಸ್ ಎಂಜಿನಿಯರಿಂಗ್ ಕಾಲೇಜು ಎನ್‍ಎಸ್‍ಎಸ್ ಘಟಕದಿಂದ ಹೊಸ ಆವಿಷ್ಕಾರ


     ಮುಳ್ಳೇರಿಯ: ಕೋವಿಡ್ ಸೋಂಕು ಪ್ರತಿರೋಧಕ ಕ್ರಮವಾಗಿ ಬಳಸಲಾಗುವ ಸ್ಯಾನಿಟೈಸರ್ ಬಾಟಲಿಯನ್ನು ಕೈಯಿಂದ ಮುಟ್ಟದೆ ಸ್ಯಾನಿಟೈಸರ್ ಕೈಗಳಿಗೆ ಬಳಸುವ ಹೊಸ ಯಂತ್ರವನ್ನು ಕಾಸರಗೋಡು ಎಲ್‍ಬಿಎಸ್ ಎಂಜಿನಿಯರಿಂಗ್ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳು ತಯಾರಿಸಿದ್ದಾರೆ.
       ಈ ಯಂತ್ರಕ್ಕೆ ಸ್ಯಾನಿಟೈಸರ್ ಪೆಡಲ್ ಮೆಶಿನ್ ಎಂದು ಹೆಸರಿಡಲಾಗಿದೆ. ಈ ಯಂತ್ರದ ಮೇಲಿನ ಭಾಗದಲ್ಲಿ ಸ್ಯಾನಿಟೈಸರ್ ಹೊಂದಿರುವ ಬಾಟಲಿ ಅಳವಡಿಸಿ ಕೆಳಭಾಗದ ಪೆಡನ್ನು ಕಾಲಿನಿಂದ ಒತ್ತಿದಲ್ಲಿ ಆ ಬಾಟಲಿಯಿಂದ ಕೈಗೆ ಸ್ಯಾನಿಟೈಸರ್ ಬೀಳುತ್ತದೆ.
     ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಈ ಯಂತ್ರವನ್ನು ನೀಡಲಾಯಿತು. ಕಾಲೇಜಿನ ಪಿಟಿಎ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ.ಜಯರಾಜನ್ ಅವರಿಂದ ಶಾಲಾ ಪಿಟಿಎ ಅಧ್ಯಕ್ಷ ಸುರೇಶ್ ಪಾಯಂ, ಮುಖ್ಯೋಪಾಧ್ಯಾಯ ಪಿ.ಹಾಶೀಂ ಸ್ವೀಕರಿಸಿದರು. ಎಸ್‍ಎಂಸಿ ಅಧ್ಯಕ್ಷ ಎಂ.ರಾಘವನ್, ಎಂ.ವಿ.ವೇಣುಗೋಪಾಲ್, ಕೆ.ಪುಷ್ಪರಾಜನ್, ಕಾಲೇಜು ಪ್ರತಿನಿ„ ಕೆ.ಕುಮಾರನ್ ಮೊದಲಾದವರು ಉಪಸ್ಥಿತರಿದ್ದರು.
ಈ ಸ್ಯಾನಿಟೈಸರ್ ಪೆಡಲ್ ಮೆಶಿನನ್ನು ಎಲ್‍ಬಿಎಸ್ ಎಂಜಿನಿಯರಿಂಗ್ ಕಾಲೇಜಿನ ಎನ್‍ಎನ್‍ಎಸ್ ಘಟಕ ಕಾಸರಗೋಡು ಕಲೆಕ್ಟರೇಟ್, ಆರ್‍ಟಿಒ, ಕೆಲವು ಪಂಚಾಯತ್ ಕಚೇರಿ, ಕಾಸರಗೋಡು ಅಗ್ನಿಶಾಮಕ ದಳ ಕಚೇರಿ, ಕಾಸರಗೋಡು ಜನರಲ್ ಆಸ್ಪತ್ರೆಗೆ ಉಚಿತವಾಗಿ ವಿತರಿಸಿದೆ. ಕಾಸರಗೋಡು ಪ್ರೆಸ್ ಕ್ಲಬ್‍ಗೂ ನೀಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries